ಬೆಂಗಳೂರು, ಮಾ.6- ಒಟಿಟಿ ಅಬ್ಬರ, ಪೈರೆಸಿಯಿಂದ ಕಂಗೆಟ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದೇ ಸವಾಲು ಎಂಬ ಕಾಲದಲ್ಲಿ ಸಾಲು ಸಾಲು ಚಿತ್ರಗಳ ಯಶಸ್ಸು ಹೊಸ ಚೈತನ್ಯ ನೀಡಿದೆ. ಬಿಡುಗಡೆಯಾದ ಕಡಿಮೆ ಅವಧಿಯಲ್ಲೇ ಸಾವಿರ ಕೋಟಿ ಕ್ಲಬ್ ಸೇರಿ, ಭರ್ಜರಿ ಹಿಟ್ ಪಡೆದಿದ್ದ ಬಾಹುಬಲಿ-2 ದಾಖಲೆಯನ್ನು ಮುರಿದು ಬಾಲಿವುಡ್ ಬಾದ್ ಶಾ ಶಾರುಖಾನ್ರ ಆ್ಯಕ್ಷನ್ ಬೇಸ್ಡ್ ಸಿನಿಮಾ ಪಠಾಣ್ ಮುನ್ನುಗ್ಗುತ್ತಿದೆ.
ಈ ಮೂಲಕ ಶಾರುಖ್ ಕಮ್ಬ್ಯಾಕ್ಗೆ ಅಬ್ಬರದ ಸ್ವಾಗತಸಿಕ್ಕಿದೆ. ಬೇಷರಂ ರಂಗ್' ಹಾಡಿನಿಂದ ವಿವಾದಕ್ಕೆ ಗ್ರಾಸವಾಗಿ ನಿಷೇಧದ ಆತಂಕ ಎದುರಿಸಿಯೂ ಪಠಾಣ್ 1000 ಕೋಟಿ ಕ್ಲಬ್ ಸೇರುವ ಮೂಲಕ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಮಹೋನ್ನತ ಸಿನಿಮಾ
ಬಾಹುಬಲಿ 2′(ಹಿಂದಿ) ಯ ದಾಖಲೆ ಮುರಿದು ಗಮನ ಸೆಳೆದಿದೆ.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಲುಕ್‍ಔಟ್ ನೋಟಿಸ್
1028 ಕೋಟಿ ಕಲೆಕ್ಷನ್:
ಕಳೆದ 5 ವರ್ಷಗಳಿಂದಲೂ ಶಾರುಖ್ ಖಾನ್ ನಟಿಸಿದ್ದ ಹೀರೋ' ಸೇರಿದಂತೆ ಹಲವು ಸಿನಿಮಾಗಳ ಸೋಲು ಬಾದ್ ಶಾನನ್ನು ಕಂಗೆಟ್ಟಿಸಿತ್ತಾದರೂ, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಿಂ ನಟನೆಯ ರಾ ಸಿನಿಮಾ
ಪಠಾಣ್’ ವಿಶ್ವದಾದ್ಯಂತ 1028 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಸಿನಿಮಾ ರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಬಾಹುಬಲಿ 2 ದಾಖಲೆ ಮುರಿದ ಪಠಾಣ್:
ಬಾಲಿವುಡ್ ಚಿತ್ರರಂಗದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಟನೆಯ ಬಾಹುಬಲಿ 2' ಚಿತ್ರವು 37 ದಿನಗಳಲ್ಲಿ 510.99 ಕೋಟಿ ರೂ.ಗಳನ್ನು ಸಂಗ್ರಹಿಸಿ ಬಾಕ್ಸ್ಆಫೀಸ್ಕೊಳ್ಳೆ ಹೊಡೆದಿತ್ತು. ಈಗ ಆ ದಾಖಲೆಯನ್ನು ಶಾರುಖ್ಖಾನ್ ಅಭಿನಯದ ಪಠಾಣ್ (1026 ಕೋಟಿ) ಮುರಿದಿದೆ. ರಾಕಿಂಗ್ ಸ್ಟಾರ್ ನಟನೆಯ
ಕೆಜಿಎಫ್ 2′ (ಹಿಂದಿ ಅವತರಣಿಕೆ), ಮಿ. ಪರ್ಫೆಕ್ಟ್ ಖ್ಯಾತಿಯ ಅಮೀರ್ಖಾನ್ ಅಭಿನಯದ ದಂಗಲ್ ಸಿನಿಮಾಗಳ ದಾಖಲೆಯನ್ನು ಮುರಿದಿದೆ.
ನಿಲ್ಲದ ಪಠಾಣ್ ಅಬ್ಬರ:
ಅಕ್ಷನ್ ಕಿಂಗ್ ಅಕ್ಷಯ್ಕುಮಾರ್ ಅವರ ಸೆಲಿ' ಸಿನಿಮಾದ ನಡುವೆಯೂ ಶಾರುಖ್ಖಾನ್ ನಟನೆಯ
ಪಠಾಣ್’ ಚಿತ್ರದ ಅಬ್ಬರವು ಮುಂದುವರೆದಿದ್ದು, ಕಳೆದ ವಾರವು 18.22 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ.
ವಿಮಾನದ ಶೌಚಾಲಯದಲ್ಲಿ 2 ಕೋಟಿ ಮೌಲ್ಯದ ಚಿನ್ನ ಪತ್ತೆ
ಒಟಿಟಿಗೆ ಎಂಟ್ರಿ:
ಸಿದ್ಧಾರ್ಥ್ ಆನಂದ್ ನಿರ್ದೇ ಶನದ ಪಠಾಣ್' ಸಿನಿಮಾದಲ್ಲಿ ಭಾರತೀಯ ಸೈನಿಕನ ಪಾತ್ರದಲ್ಲಿ ರಗಡ್ ಆಗಿ ಮಿಂಚಿ ಸಿನಿ ರಸಿಕರನ್ನು ರಂಜಿಸುವ ಮೂಲಕ ಶಾರುಖ್ಖಾನ್ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಪಠಾಣ್ ಸಿನಿಮಾ ಬಿಡುಗಡೆ ಯಾದ 49 ದಿನಗಳಲ್ಲಿ ಒಟಿಟಿಗೆ ಬರುವಂತೆ ಒಪ್ಪಂದವಾಗಿದ್ದು, ಮಾರ್ಚ್ 17ರ ನಂತರ ಅಮೆಜಾನ್ ಪ್ರೈಮ್ನಲ್ಲಿ
ಪಠಾಣ್’ ಸಿನಿಮಾದ ಹಿಂದಿ, ತೆಮಿಳು, ತೆಲುಗು ಆವೃತ್ತಿಗಳನ್ನು ವೀಕ್ಷಿಸಬಹುದು.
Pathaan, box office, collection, Rs 1033 cr, worldwide,