ವಿವಾದಕ್ಕೆ ಎಡೆ ಮಾಡಿಕೊಟ್ಟ ಪವನ್ ಕಲ್ಯಾಣ್ ಪ್ರಚಾರ ರಥದ ಬಣ್ಣ

Social Share

ಹೈದ್ರಾಬಾದ್,ಡಿ.10- ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡುತ್ತಿರುವ ಪ್ರಚಾರ ರಥ ವಾರಾಹಿ ವಾಹನದ ಬಣ್ಣ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಪವನ್ ಕಲ್ಯಾಣ್ ಬಳಸುತ್ತಿರುವ ಪ್ರಚಾರ ರಥದ ಬಣ್ಣ ಆಲಿವ್ ಗ್ರೀನ್ ಬಣ್ಣವನ್ನು ಕೇವಲ ಸೇನಾ ವಾಹನಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆದರೆ, ಪವನ್ ಆ ಬಣ್ಣವನ್ನು ತನ್ನ ಪ್ರಚಾರ ರಥಕ್ಕೆ ಬಳಕೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‍ಆರ್‍ಪಿ ಪಕ್ಷ ಆರೋಪಿಸಿದೆ.

ಸಿನಿಮೀಯ ರೀತಿಯಲ್ಲಿ ಯುವತಿ ಅಪಹರಿಸಿದ ನೂರಕ್ಕೂ ಹೆಚ್ಚು ಯುವಕರು

ಆಂಧ್ರ ಪ್ರದೇಶ ಸಿಎಂ ಕಾರ್ಯಾಲಯದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ವೈಎಸ್‍ಆರ್‍ಪಿ ಮುಖಂಡ ಪೆರ್ನಿ ನಾನಿ, ಸೇನೆಯ ವಾಹನಗಳಿಗೆ ಬಳಸುವ ಆಲಿವ್ ಗ್ರೀನ್ ಬಣ್ಣವನ್ನು ಖಾಸಗಿ ವಾಹನಗಳಿಗೆ ಬಳಸುವುದು ನಿಷಿದ್ಧ. ಇದೇ ಬಣ್ಣ ಇದ್ದರೆ ವಾಹನ ನೋಂದಣಿ ಆಗೋದಿಲ್ಲ. ನೀವು ಹೇಗೂ ಬಣ್ಣ ಬದಲಿಸಬೇಕು. ಆದ್ದರಿಂದ ಈಗಲೇ ಅದನ್ನು ಅರಿಶಿಣ ಬಣಕ್ಕೆ ಬದಲಿಸಿ ಎಂದು ವ್ಯಂಗ್ಯವಾಡಿದ್ದಾರೆ.

ನೀವು ಟಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಹೋಗುವವರು ತಾನೇ. ಈಗ ಪ್ರಧಾನಿ ಮೋದಿ ಹೇಳಿದ ಕಾರಣ ಕೆಲ ದಿನಗಳಿಂದ ದೂರ ಇದ್ದೀರಿ. ವಾಹನಗಳಲ್ಲಿ ಚುನಾವಣಾ ಯುದ್ಧ ಮುಗಿಯುತ್ತೆ ಎಂದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ನಾನು ಕೂಡ ಇಂತಹ ವಾಹನ ಖರೀದಿ ಮಾಡಬಹುದು. ಆದರೆ ಇವು ಸಿನಿಮಾಗಳಲ್ಲಿ ಮಾತ್ರ ಚೆನ್ನಾಗಿರುತ್ತದೆ ಎಂದು ಕುಟುಕಿದ್ದಾರೆ.

ವಾರಾಹಿ ವಾಹನದ ಬಣ್ಣದ ಕುರಿತಂತೆ ಟೀಕೆಗಳು ಕೇಳಿ ಬರುತ್ತಿದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರೋ ಪವನ್ ಕಲ್ಯಾಣ ಅವರು, ವೈಎಸ್‍ಆರ್‍ಪಿ ಪಕ್ಷದವರು ನನಗೆ ಕನಿಷ್ಠ ಈ ಶರ್ಟ್ ಹಾಕಿಕೊಳ್ಳಲು ಅನುಮತಿ ನೀಡುತ್ತಾ ಎಂದು ಪ್ರಶ್ನೆ ಮಾಡಿ ಆಲಿವ್ ಗ್ರೀನ್ ಬಣ್ಣದ ಶರ್ಟ್ ಫೋಟೋ ಫೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ ಸೆರೆ ಹಿಡಿಯಲು ಬಂದಿವೆ ಐಟಿಎಂ ಕ್ಯಾಮರಾಗಳು

ಸರಣಿ ಟ್ವೀಟಗಳ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ತಿರುಗೇಟು ನೀಡಿರೋ ಪವನ್ ಕಲ್ಯಾಣ, ಹಸಿರು ವಾಹನದ ಫೋಟೋ ಹಂಚಿಕೊಂಡು ನಿಮಗೆ ಹಸಿರು ಬಣ್ಣದಲ್ಲಿ ಯಾವ ವೆರಿಯಂಟ್ ಇಷ್ಟ ಹೇಳಿ? ಇಂತಹ ನಿಯಮಗಳು ಕೇವಲ ಪವನ್ ಕಲ್ಯಾಣಗೆ ಮಾತ್ರವೇ? ವೈಎಸ್‍ಆರ್‍ಪಿ ಪಕ್ಷ ಟಿಕೆಟ್ ಬೆಲೆ, ಕಾರಿನ ಬಣ್ಣ, ಕಟ್ಟಡಗಳನ್ನು ತೆರವುಗೊಳಿಸುವ ಕೆಲಸಗಳನ್ನು ಬಿಟ್ಟು ಆಂಧ್ರ ಪ್ರದೇಶದ ಅಭಿವೃದ್ಧಿ ಕುರಿತು ಗಮನಹರಿಸಬೇಕಿದೆ.

ಈಗಾಗಲೇ ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚಾವತಾರ, ಕಿರುಕುಳದಿಂದ ಕಾರು ತಯಾರಿಕಾ ಘಟಕಗಳಿಂದ ಹಿಡಿದು ಒಳಉಡುಪು ತಯಾರಿಕ ಕಂಪನಿಗಳು ಪಕ್ಕದ ರಾಜ್ಯಗಳಿಗೆ ಹೋಗಿವೆ ಎಂದು ಕಿಡಿಕಾರಿದ್ದಾರೆ.

ಗುಜರಾತ್ ಚುನಾವಣೆ : ಕಾಂಗ್ರೆಸ್ ಮತ ಕಸಿದ ಆಪ್

ಮೊದಲು ನನ್ನ ಸಿನಿಮಾಗಳಿಗೆ ಅಡ್ಡಿಪಡಿಸಿದ್ದರು. ವಿಶಾಖಪಟ್ಟಣಂಗೆ ಹೋದರೆ ಹೋಟೆಲïನಿಂದ ಹೊರಬಾರದಂತೆ ತಡೆದರು. ಮಂಗಳಗಿರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದರೆ ಅಡ್ಡಪಡಿಸಿದ್ದರು. ಗ್ರಾಮಕ್ಕೆ ನಡೆದುಕೊಂಡು ಹೋಗಲು ಬಿಡದೆ ತಡೆದರು. ಈಗ ವಾರಾಹಿ ವಾಹನದ ಬಣ್ಣದ ಬಗ್ಗೆ ವಿವಾದ ಮಾಡ್ತಿದ್ದಾರೆ. ಇನ್ನು ಮುಂದೆ ಉಸಿರು ತೆಗೆದುಕೊಳ್ಳೋದನ್ನು ಕೂಡ ನಿಲ್ಲಿಸಿ ಬಿಡಿ ಅಂತ ಹೇಳ್ತೀರಾ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

Pawan Kalyan, army-like, election, campaign, vehicle,

Articles You Might Like

Share This Article