PayCM ಅಭಿಯಾನ : ಕಾಂಗ್ರೆಸ್ ಕಾರ್ಯಕರ್ತರಿಗೆ ನೊಟೀಸ್

Social Share

ಬೆಂಗಳೂರು, ಅ.22- ಕಾಂಗ್ರೆಸ್ ನಡೆಸಿದ ಪೇ ಸಿಎಂ ಪೋಸ್ಟರ್ ಅಭಿಯಾನದ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೋಲೀಸರು ಪಕ್ಷದ ಕಾರ್ಯಕರ್ತರಿಗೆ ಮತ್ತೆ ನೊಟೀಸ್ ನೀಡಿದ್ದಾರೆ.

ಪೇ ಸಿಎಂ ಪೋಸ್ಟರ್‍ಗಳು ನಗರದಾದ್ಯಂತ ಭಾರೀ ಸಂಚಲನ ಮೂಡಿಸಿದ್ದವು. ವಿಧಾನಸಭೆ ಅಧಿವೇಶನದ ವೇಳೆಯೇ ಘಟಿಸಿದ ಈ ಅಭಿಯಾನ ಭಾರೀ ಚರ್ಚೆಗೆ ಕಾರಣವಾಯಿತು. ನಂತರ ರಾಜ್ಯಾದ್ಯಂತ ವಿಸ್ತರಣೆಯಾಗಿತ್ತು. ಈ ಕುರಿತು ಹಲವು ಕಡೆ ದೂರು ದಾಖಲಾಗಿದ್ದು, ಸರ್ಕಾರ ತನಿಖೆಯನ್ನು ಸಿಸಿಬಿಗೆ ವಹಿಸಿದೆ.

ರೈಲು ಬೋಗಿಯಲ್ಲಿ ನಮಾಝ್ ಮಾಡಿದವರ ವಿರುದ್ಧ ದೂರು ದಾಖಲು

ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಸಿಬಿಯ ವಿಶೇಷ ವಿಚಾರಣೆಗಳ ಎಸಿಪಿ ಟಿ.ವಿ.ಸುರೇಶ್ ಅವರು ಸಮನ್ಸ್ ನೀಡಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 231/2022 ಮತ್ತು 123/2022ರ ಪ್ರಕರಣದ ವಿಚಾರಣೆಗಾಗಿ ಈ ಮೊದಲು ಅಕ್ಟೋಬರ್ 1 ಮತ್ತು 11ರಂದು ನೋಟಿಸ್ ನೀಡಲಾಗಿತ್ತು.

ಆದರೆ ನೀವು ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಮತ್ತೊಮ್ಮೆ ನೋಟಿಸ್ ನೀಡುತ್ತಿದ್ದು, ಅಕ್ಟೋಬರ್ 25ರಂದು ಬೆಳಗ್ಗೆ 10.30ಕ್ಕೆ ತಪ್ಪದೆ ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್‍ನಲ್ಲಿ ಸೂಚಿಸಲಾಗಿದೆ.

ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಜಮೀರ್ ಅಹ್ಮದ್ ಹೇಳಿದ್ದೇನು..?

ಕಾಂಗ್ರೆಸ್‍ನ ಸೋಶಿಯಲ್ ಮಿಡಿಯಾ ಸಿಬ್ಬಂದಿಗೆ ನೊಟೀಸ್ ತಲುಪಿದೆ. ಈ ಮೊದಲು ನೀಡಿದ್ದ ನೋಟಿಸ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಲಿಖಿತ ವಿವರಣೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಖುದ್ದು ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದು, ಮೂರನೇ ಬಾರಿ ನೊಟೀಸ್ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕೆಪಿಸಿಸಿ ಸೋಶಿಯಲ್ ಮಿಡಿಯಾ ಸಿಬ್ಬಂದಿಗಳಾದ ಕಾಳಕಯ್ಯಸ್ವಾಮಿ, ಸಂಜಯ್, ಸಿದ್ದಯ್ಯ,ವಿನೋದ್ ಕುಮಾರ್, ಮದನ್ ಗೋಪಾಲ್ ಅವರಿಗೆ ನೋಟಿಸ್ ರವಾನೆಯಾಗಿದೆ.

Articles You Might Like

Share This Article