ನೆಲಮಂಗಲದಲ್ಲೂ ರಾರಾಜಿಸಿದ ಪೇ ಸಿಎಂ ಪೋಸ್ಟರ್

Social Share

ಬೆಂಗಳೂರು,ಸೆ.24-ನಗರದ ಹಲವಾರು ರಸ್ತೆಗಳಲ್ಲಿ ರಾರಾಜಿಸಿ ಸದ್ದು ಮಾಡಿದ್ದ ಪೇ ಸಿಎಂ ಅಭಿಯಾನ ನೆಲಮಂಗಲಕ್ಕೆ ವರ್ಗಾವಣೆಯಾಗಿದೆ. ಶೇ.40 ರಷ್ಟು ಕಮಿಷನ್ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರ ಪೇ ಸಿಎಂ ಅಭಿಯಾನದಿಂದ ಭಾರಿ ಮುಖಭಂಗ ಅನುಭವಿಸಿತ್ತು.

ಇದರಿಂದ ಬಚಾವಾಗಲು ರಿ-ಡೂ ಸಿದ್ದರಾಮಯ್ಯ ಹಾಗೂ ಇಡಿ-ಡಿಕೆಶಿ ಅಭಿಯಾನಕ್ಕೆ ಮೊರೆ ಹೋಗಿತ್ತು. ಈ ಎರಡು ವಿಚಾರಗಳು ನಿನ್ನೆಯಷ್ಟೆ ಅಧಿವೇಶನದಲ್ಲಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೆ ಪೇ ಸಿಎಂ ಅಭಿಯಾನ ಇದೀಗ ನೆಲಮಂಗಲದಲ್ಲಿ ಸದ್ದು ಮಾಡತೊಡಗಿದೆ.

ನೆಲಮಂಗಲ ಮುಖ್ಯರಸ್ತೆಗಳಲ್ಲಿ ಪೇ ಸಿಎಂ ಪೋಸ್ಟರ್ ಅಳವಡಿಕೆ ಮಾಡಿರುವುದು ಬಿಜೆಪಿಯ ತಲೆ ಬೇನೆ ಹೆಚ್ಚಿಸಿದೆ.
ಬಿಹೆಚ್ ರಸ್ತೆ, ಟಿಬಿ ಬಸ್ ನಿಲ್ದಾಣ, ಅರಿಶಿನಕುಂಟೆ ಸೇರಿದಂತೆ ಮತ್ತಿತರ ಹಲವಾರು ಪ್ರಮುಖ ರಸ್ತೆಗಳಲ್ಲಿ ಪೇ ಸಿಎಂ ಪೋಸ್ಟರ್‍ಗಳು ರಾರಾಜಿಸುತ್ತಿವೆ.

ಅದರಲ್ಲೂ ಸರ್ಕಾರಿ ಆಸ್ಪತ್ರೆ ಕಾಂಪೌಂಡ್, ಅಂಬೇಡ್ಕರ್ ಭವನ ಮತ್ತಿತರ ಸರ್ಕಾರಿ ಕಟ್ಟಡಗಳ ಕಾಂಪೌಂಡ್‍ಗಳ ಮೇಲೂ ಪೋಸ್ಟರ್ ಅಂಟಿಸಲಾಗಿದೆ. ಮಾಜಿ ಶಾಸಕ ಎಂ.ವಿ ನಾಗರಾಜು ಮನೆಯ ದಾರಿ ಸೂಚನ ಫಲಕದ ಮೇಲೆ ಪೋಸ್ಟರ್‍ಗಳನ್ನು ಅಳವಡಿಸಲಾಗಿದೆ.

ಪಟ್ಟಣದ ಕೆಲವು ಕಡೆ ಪೋಸ್ಟರ್ ಅಂಟಿಸುತ್ತಿದ್ದವರನ್ನು ಹಿಡಿಯಲು ಪೋಲೀಸರು ನಡೆಸಿದ ಹರಸಾಹಸ ವಿ- ಲವಾಗಿದೆ.
ಪೋಲೀಸರು ಬರುತ್ತಿದ್ದಂತೆ ಪೋಸ್ಟರ್ ಅಂಟಿಸುತ್ತಿದ್ದ ಯುವಕರು ಪರಾರಿಯಾಗಿದ್ದಾರೆ. ಓಡುತ್ತಿದ್ದವರನ್ನು ಹಿಡಿಯಲು ಯತ್ನಿಸಿದ ಖಾಕಿ ಯತ್ನ ವಿಪಲವಾಗಿದೆ.

Articles You Might Like

Share This Article