ಮಂಡ್ಯ, ಅ.6- ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದದ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಎರಡು ದಿನಗಳ ವಿಶ್ರಾಂತಿ ಬಳಿಕ ಇಂದು ಮತ್ತೆ ಆರಂಭವಾಯಿತು.
ಮುಂಜಾನೆ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯಕೇಂದ್ರದಿಂದ ಆರಂಭಗೊಂಡ ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಇಂದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಎಂದಿನಂತೆ ಜನಸಾಮಾನ್ಯರು ರಾಹುಲ್ಗಾಂ ಅವರನ್ನು ಭೇಟಿ ಮಾಡಿ ಸಂಭ್ರಮಿಸಿದರು. ವಿಶೇಷ ಚೇತನರು ಯಾತ್ರೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮಕ್ಕಳು ರಾಹುಲ್ಗಾಂ ಅವರ ಕೈ ಹಿಡಿದು ನಡೆಯುವ ಮೂಲಕ ಗಮನ ಸೆಳೆದರು. ಸೋನಿಯಾ ಗಾಂಯವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರಿಂದ ಜನರ ಹುರುಪು ಮತ್ತಷ್ಟು ಹೆಚ್ಚಾಗಿತ್ತು.
ಬೆಲೆ ಏರಿಕೆ ಪ್ರಸ್ತಾಪ
ರಾಹುಲ್ಗಾಂ ಯಾತ್ರೆ ಆರಂಭಿಸಿದ್ದೆ ಪ್ರಮುಖವಾಗಿ ಜನ ಸಾಮಾನ್ಯರನ್ನು ಕಾಡುವ ಬೆಲೆ ಏರಿಕೆ ವಿರುದ್ಧ. ಇಂದು ಯಾತ್ರೆಯುದ್ಧಕ್ಕೂ ಅಡುಗೆ ಅನಿಲ (ಸಿಲಿಂಡರ್)ದ ಪ್ರತಿಕೃತಿಯನ್ನು ಪ್ರದರ್ಶನ ಮಾಡಲಾಯಿತು. 2014ರಲ್ಲಿ ಯುಪಿಎ ಸರ್ಕಾರದ ಅವಯಲ್ಲಿನ ಸಿಲಿಂಡರ್ ಬೆಲೆ ಮತ್ತು ಪ್ರಸ್ತುತ ಈಗಿನ ಬೆಲೆಯನ್ನು ವಿವರಿಸುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಡಲಾಯಿತು.
ಬೆಲೆ ಏರಿಕೆ ನಿಯಂತ್ರಿಸದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರನ್ನು ಶೋಷಣೆ ಮಾಡುತ್ತಿವೆ ಎಂದು ಘೋಷಣೆ ಕೂಗಲಾಯಿತು. ಅಲ್ಲಲ್ಲಿ ಗ್ರಾಮಗಳಲ್ಲಿ ಮನೆಗಳ ಮೇಲೆ ನಿಂತಿದ್ದ ಗ್ರಾಮಸ್ಥರು ಬೆಲೆ ಏರಿಕೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಯಾತ್ರೆಯಲ್ಲಿ ಪೇ ಸಿಎಂ ಸದ್ದು
ಈ ಮೊದಲು ಮೈಸೂರು ಜಿಲ್ಲೆ ಪ್ರವೇಶಿಸಿದಾಗ ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪೇ ಸಿಎಂ ಟಿ-ಶರ್ಟ್ ಧರಿಸಿದ್ದ ಎಂಬ ಕಾರಣಕ್ಕೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ದಾರಿ ಮಧ್ಯೆಯೇ ಟಿ-ಶರ್ಟ್ ಕಿತ್ತೆಸೆದು ಅರೆ ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದರು. ಅದಕ್ಕೆ ಪ್ರತಿಕಾರವಾಗಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯ ಆರಂಭದಲ್ಲೇ ಪೇ-ಸಿಎಂ ಪೊೀಸ್ಟರ್ ಹಾಗೂ ಬ್ಯಾನರ್ಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಇಂದು ಬಹಳಷ್ಟು ಕಾರ್ಯಕರ್ತರು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಸಾರುವ ಪೇÉ-ಸಿಎಂ ಪೊೀಸ್ಟರ್ ಹಿಡಿದಿದ್ದರಿಂದ ಪೊಲೀಸರು ಏನು ಮಾಡಲಾಗದೆ ಅಸಹಾಯಕರಾಗಿ ನಿಂತರು. ಯಾತ್ರೆಯುದ್ದಕ್ಕೂ ಇಂದು ಪೇ-ಸಿಎಂ ಪೊೀಸ್ಟರ್ಗಳು ಕಂಡು ಬಂದವು.
ವಿಶೇಷ ಚೇತನರ ಸಾಥ್
ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಜೊತೆ ಇಂದು ವಿಶೇಷ ಚೇತನರು ಹೆಜ್ಜೆ ಹಾಕಿದರು. ಹಲವಾರು ಮಂದಿ ವ್ಹೀಲ್ಚೇರ್ನಲ್ಲೇ ಯಾತ್ರೆಯಲ್ಲಿ ಸ್ವಲ್ಪದೂರ ಸಾಗಿ ಬಂದರು. ಅವರನ್ನು ಗಮನಿಸಿದ ರಾಹುಲ್ ಹತ್ತಿರ ಕರೆದು ಮಾತನಾಡಿಸಿದ್ದಲ್ಲದೆ, ಅವರ ಕೈ ಹಿಡಿದು ಸ್ವಲ್ಪದೂರ ನಡೆದರು.
ವಿಶೇಷ ಚೇತನ ಮಹಿಳೆಯರು ರಾಹುಲ್ಗಾಂ ಅವರಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಮಾಜಿ ಸಚಿವ ಉಮಾಶ್ರೀ ವಿಶೇಷ ಚೇತನರ ತ್ರಿಚಕ್ರವಾಹನಗಳನ್ನು ತಳ್ಳುವ ಮೂಲಕ ಬೆಂಬಲ ನೀಡಿದರು.
ಇಂದು ನಡೆದ ಯಾತ್ರೆಯಲ್ಲಿ ಬೆಂಗಳೂರು ನಗರದ ಗೋವಿಂದ ರಾಜ ನಗರ, ಶಾಂತಿನಗರ, ಗಾಂನಗರ, ವಿಜಯನಗರ, ಹಾಸನ ಜಿಲ್ಲೆಯ ಅರಕಲಗೂಡು, ಮಂಡ್ಯ ಜಿಲ್ಲೆಯ ನಾಗಮಂಗಲ, ಕೃಷ್ಣರಾಜಪೇಟೆ, ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರಗಳ ಕಾರ್ಯಕರ್ತರು ಜೊತೆಗೂಡಿದರು.
ಯಾತ್ರೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಸಿರು ಶಾಲು ಹೊದ್ದು ಗಮನ ಸೆಳೆದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಜಿ ಸಚಿವ ಚಲುವರಾಯಸ್ವಾಮಿ, ಕೇಂದ್ರದ ಮಾಜಿ ಸಚಿವ
ಕೆ.ಎಚ್.ಮುನಿಯಪ್ಪ, ಹಲವು ಶಾಸಕರು, ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ ಖಾರದ್ಯ ಕೆರೆ ಎದುರು ಬೋಜನ ವಿರಾಮದ ಬಳಿಕ ವಿಶ್ರಾಂತಿ ಪಡೆದು ಸಂಜೆ ಮತ್ತೆ ಯಾತ್ರೆ ಪುನಾರಂಭವಾಗಲಿದೆ. ಸಂಜೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಯಲ್ಲಿ ವಿಶ್ರಾಂತಿ ಬಳಿಕ ರಾತ್ರಿ ವಿಸ್ಡಮ್ ಶಾಲೆಯಲ್ಲಿ ತಂಗಲಿದೆ.