ಭಾರತದ ಐಕ್ಯತೆ ಒಡೆಯಲೆತ್ನಿಸುತ್ತಿರುವ ಶತ್ರುಗಳ ವಿರುದ್ಧ ಭಾರತೀಯರು ದೃಢವಾಗಿ ನಿಲ್ಲಬೇಕಿದೆ : ಮೋದಿ

Social Share

ಕೇವಡಿಯಾ, ಅ.31- ಭಾರತದ ಐಕ್ಯತೆಯನ್ನು ಒಡೆಯಲು ಶತ್ರುಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದರ ವಿರುದ್ಧ ಭಾರತೀಯರು ದೃಢವಾಗಿ ನಿಲ್ಲಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‍ನ ಕೆವಾಡಿಯಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲಿ ಮಾತನಾಡಿದ ಅವರು, ಪ್ರಮುಖವಾಗಿ ಭಾನುವಾರ ಗುಜರಾತ್‍ನ ಮೊರ್ಬಿ ಸೇತುವೆ ಕುಸಿತದ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸಲ್ಲಿಸಿ ಭಾವುಕರಾದರು.

ನಾನು ಕೆವಾಡಿಯಾದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೋರ್ಬಿಯಾದಲ್ಲಿದೆ. ಈ ರೀತಿಯ ನೋವನ್ನು ನನ್ನ ಜೀವನದಲ್ಲಿ ಅಪರೂಪಕ್ಕೆ ಅನುಭವಿಸಿದ್ದೇನೆ. ಒಂದು ಕಡೆ ಹೃದಯದಲ್ಲಿ ತುಂಬಲಾರದ ನೋವಿದೆ. ಮತ್ತೊಂದು ಕಡೆ ಕರ್ತವ್ಯದ ಹಾದಿಯಲ್ಲೂ ನಡೆಯಬೇಕಿದೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಗುಜರಾತ್ ಸರ್ಕಾರ ಸಂತ್ರಸ್ಥ ಕುಟುಂಬಗಳ ಜೊತೆ ನಿಲ್ಲಲಿದೆ. ಕೇಂದ್ರ ಸರ್ಕಾರ ಕೂಡ ಅಗತ್ಯವಾದ ಎಲ್ಲಾ ಸಹಕಾರ ನೀಡಲಿದೆ ಎಂದು ಹೇಳಿದರು. ಮೊರ್ಬಿ ನಗರದಲ್ಲಿ ಭಾನುವಾರ ಸಂಜೆ ತೂಗು ಸೇತುವೆ ಕುಸಿದು ಕನಿಷ್ಠ 132 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸಲಾಗುತ್ತದೆ. ಏಕತ್ ನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಅವರು, ಭಾರತದ ಭಿನ್ನತೆಯಲ್ಲಿನ ಏಕತೆ ಅನ್ಯೂನ್ಯವಾಗಿದೆ ಎಂದರು.

ನಮ್ಮ ದೇಶದ ಐಕ್ಯತೆ ಶತ್ರುಗಳ ಕಣ್ಣು ಉರಿ ತರಿಸಿದೆ. ಇವತ್ತು ಮಾತ್ರವಲ್ಲ ಸಾವಿರಾರು ವರ್ಷಗಳಿಂದ ಮತ್ತು ಗುಲಾಮಗಿರಿಯ ಅವಯಲ್ಲಿಯೂ ಸಹ ಭಾರತದ ಏಕತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ವಿದೇಶಿ ದಾಳಿಕೋರರು ಏಕತೆಯನ್ನು ಮುರಿಯಲು ಸತತ ಪ್ರಯತ್ನ ಮಾಡಿದ್ದಾರೆ.

ಸುದೀರ್ಘ ಅವಯಲ್ಲಿ ಹರಡಿದ ವಿಷದಿಂದಾಗಿ ಇಂದು ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶ ವಿಭಜನೆಯ ಲಾಭವನ್ನು ಶತ್ರುಗಳು ಪಡೆದುಕೊಂಡರು ಎಂದರು.

ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

ವಿಭಜಕ ಶಕ್ತಿಗಳು ಈಗಲೂ ದೇಶದ ಐಕ್ಯತೆ ಧಕ್ಕೆ ತರಲು ಯತ್ನಿಸುತ್ತಲೇ ಇವೆ. ಜಾತಿ, ಪ್ರದೇಶ, ಭಾಷೆಯ ಹೆಸರಿನಲ್ಲಿ ದೇಶದ ಜನರನ್ನು ತಮ್ಮಲ್ಲೇ ಒಡೆದಾಡಬೇಕು ಎಂದು ಬಯಸುತ್ತಾರೆ, ನಮ್ಮಲ್ಲಿ ಜನ ಪರಸ್ಪರ ಹೊಂದಾಣಿಕೆಯಿಂದ ಬದುಕುವುದನ್ನು ಬಯಸುವುದಿಲ್ಲ ಎಂದು ಹೇಳಿದರು.

ದೇಶದ ಐಕ್ಯತೆಗೆ ಧಕ್ಕೆ ಮಾಡುವ ಶಕ್ತಿಗಳು ಹೊರಗಿನವಷ್ಟೆ ಅಲ್ಲ, ನಮ್ಮಲ್ಲಿರುವ ಗುಲಾಮಿ ಮನಸ್ಥಿತಿಯೂ ಕೂಡ ಆಗಿರಬಹುದು. ದೇಶದ ಮಗನಾಗಿ ನಾವು ಅದಕ್ಕೆ ಉತ್ತರಿಸಬೇಕು. ಮುಂದಿನ ದಿನಗಳಲ್ಲೂ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

Articles You Might Like

Share This Article