ಐಪಿಎಲ್ ಮಹಾಸಮರ : 4ನೇ ಸ್ಥಾನಕ್ಕೇರಲು ಡಿಸಿ – ಪಿಬಿಕೆಎಸ್ ಸೆಣಸು
ಮುಂಬೈ, ಮೇ 16- ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿರುವಾಗಲೇ ಪ್ಲೇಆಫ್ ಹಂತಕ್ಕೆ ತಲುಪಲು ಒಂದು ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ಪಾಫ್ಡುಪ್ಲೆಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4ನೆ ಸ್ಥಾನದಲ್ಲಿದ್ದರೂ ಕೂಡ ಇಂದು ನಡೆಯಲಿರುವ ರಿಷಭ್ ಪಂತ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಗೆದ್ದರೆ ಆಗ ಆರ್ಸಿಬಿ 5 ನೆ ಸ್ಥಾನಕ್ಕೆ ಕುಸಿಯಲಿದೆ.
ಮಾಡು ಇಲ್ಲವೇ ಮಡಿ:
ಡೆಲ್ಲಿ ಹಾಗೂ ಪಂಜಾಬ್ ತಂಡಗಳು ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 12 ಅಂಕಗಳನ್ನು ಕಲೆ ಹಾಕಿದ್ದು , ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಆ ತಂಡಕ್ಕೆ ಪ್ಲೇಆಫ್ಗೇರುವ ಅವಕಾಶ ಸಿಗುತ್ತದೆ. ಒಂದು ವೇಳೆ ಡೆಲ್ಲಿ ಅಥವಾ ಪಂಜಾಬ್ ಕಿಂಗ್ಸ್ ಪೈಕಿ ಒಂದು ತಂಡ ಸೋಲು ಕಂಡರೆ ಕೊನೆಯ ಪಂದ್ಯ ಗೆದ್ದರೂ ಕೂಡ 12 ಪಾಯಿಂಟ್ಸ್ಗಳನ್ನು ಕಲೆ ಹಾಕುವುದರಿಂದ ಪ್ಲೇಆಫ್ಗೇರುವ ಅವಕಾಶವನ್ನು ಕೈ ಚೆಲ್ಲುವುದರಿಂದ ಇಂದಿನ ಪಂದ್ಯವು ಎರಡು ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಸೋಲಿಗೆ ಪ್ರತೀಕಾರ:
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಅಸ್ಥಿರ ಪ್ರದರ್ಶನ ತೋರುತ್ತಿದ್ದರೂ ಕೂಡ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿರುವುದರಿಂದ ಆ ತಂಡಗಳ ಆತ್ಮವಿಶ್ವಾಸವು ಹೆಚ್ಚಾಗಿದೆ. ಈ ಹಿಂದೆ ಏಪ್ರಿಲ್ 20 ರಂದು ಈ ಎರಡು ತಂಡಗಳು ಮುಖಾಮುಖಿ ಯಾಗಿದ್ದಾಗ ಪಂಜಾಬ್ 9 ವಿಕೆಟ್ ಗಳಿಂದ ಸೋಲು ಕಂಡಿದ್ದು ಈ ಪಂದ್ಯವನ್ನು ಗೆಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದೆ.
ಪೃಥ್ವಿ ಶಾ ಎಂಟ್ರಿ?
ಟೈಫಾಯ್ಡ್ನಿಂದ ಬಳಲಿದ್ದ ಡೆಲ್ಲಿ ಕ್ಯಾಪಿಟಲ್ಸ್ನ ಆರಂಭಿಕ ಆಟಗಾರ ಪೃಥ್ವಿ ಶಾ ಇಂದಿನ ಪಂದ್ಯಕ್ಕೆ ಬಹುತೇಕ ಲಭ್ಯವಾಗಿರುವುದರಿಂದ ಡೆಲ್ಲಿ ಬ್ಯಾಟಿಂಗ್ ಬಲ ಹೆಚ್ಚಾಗಿರುವುದಲ್ಲದೆ ಆರಂಭಿಕ ಆಟಗಾರನ ಕೊರತೆ ನೀಗಲಿದೆ. ಡೇವಿಡ್ ವಾರ್ನರ್ ಸೋಟಕ ಆಟ ಪ್ರದರ್ಶಿಸುತ್ತಿದ್ದರೂ ಹಿಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಶಿಖರ್ಭರತ್ ಅಥವಾ ಮನ್ದೀಪ್ ಸಿಂಗ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದ್ದರೂ, ಆದರೆ ಶಾ ಆಗಮನದಿಂದ ಆ ಕೊರತೆ ನೀಗಲಿದೆ.
ಮಧ್ಯಮ ಕ್ರಮಾಂಕದಲ್ಲಿ ರಿಷಭ್ಪಂತ್, ರೊವ್ಮನ್ ಪೊವೆಲ್, ಲಲಿತ್ಯಾದವ್ ಕೂಡ ಬೃಹತ್ ಮೊತ್ತ ಗಳಿಸುವ ಸಾಮಥ್ರ್ಯ ಹೊಂದಿದ್ದರೆ, ಶಾರ್ದೂಲ್ ಠಾಕೂರ್, ಅಕ್ಷರ್ಪಟೇಲ್ ಫಿನಿಷನರ್ಗಳ ಪಾತ್ರ ನಿಭಾಯಿಸಬೇಕಾಗಿದೆ, ಕುಲ್ದೀಪ್ ಯಾದವ್, ಆನ್ರಿಚ್ ನೊಕಿಯಾ ಉತ್ತಮ ಬೌಲಿಂಗ್ ಪ್ರದರ್ಶಿಸಿದರೆ ಡೆಲ್ಲಿ ಪಂಜಾಬ್ನ ಜಯದ ಓಟಕ್ಕೆ ಲಗಾಮು ಹಾಕಬಹುದು.
ಬಲಿಷ್ಠ ಬ್ಯಾಟಿಂಗ್:
ಡೆಲ್ಲಿ ತಂಡದಂತೆ ಕಿಂಗ್ಸ್ ಪಂಜಾಬ್ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ, ಜಾನಿ ಬ್ಯಾರಿಸ್ಟೋ, ಶಿಖರ್ ಧವನ್, ಲಿವಿಂಗಸ್ಟನ್ ಅವರು ಸೋಟಕ ಆಟ ಪ್ರದರ್ಶಿಸುತ್ತಿದ್ದರೆ, ನಾಯಕ ಮಯಾಂಕ್ ಅಗರ್ವಾಲ್ ಮಂಕಾಗಿದ್ದಾರೆ, ಬೌಲಿಂಗ್ನಲ್ಲಿ ರಿಷಿ ಧವನ್, ಹಪ್ರೀತ್ ಬಾರ್, ರಬಾಡ , ರಾಹುಲ್ ಚಾಹರ್, ಆಶರ್ದೀಪ್ರಂತಹ ಸಮತೋಲಿತ ವೇಗ ಹಾಗೂ ಸ್ಪಿನ್ ಅಸ್ತ್ರಗಳಿದ್ದು ಇಂದು ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಸಲು ಹೊರಟಿದ್ದು, ಟಾಸ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.