ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನ ಸಂಚಾರಕ್ಕೆ 4 ತಿಂಗಳಲ್ಲಿ ಅವಕಾಶ : ಸಚಿವ ಪಾಟೀಲ್

Social Share

ಬೆಂಗಳೂರು, ಜ.6-ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಾಲ್ಕೈದು ತಿಂಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ನಿನ್ನೆ ಈ ಸೇತುವೆ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಯಿತು ಎಂದರು.

ಪೀಣ್ಯ ಸೇತುವೆ ದುರಸ್ತಿಗೆ ಎಂಟು ತಿಂಗಳ ಸಮಯ ಕೇಳಿದ್ದಾರೆ. ನಾಲ್ಕು ತಿಂಗಳಲ್ಲಿ ದುರಸ್ತಿ ಮಾಡುವಂತೆ ಕೋರಲಾಗಿದೆ. ಮೇಲ್ಸೇತುವೆಯ ಕಬ್ಬಿಣದ ಕೇಬಲ್ ಗಳ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಡಾ.ಹೆಚ್.ಸಿ.ಮಹದೇವಪ್ಪ ಅವರು ಲೋಕೋಪಯೋಗಿ ಸಚಿವರಾದ ಅವಧಿಯಿಂದಲೂ ಗುತ್ತಿಗೆದಾರರ ಬಿಲ್ ಗಳು ಬಾಕಿ ಇವೆ. ಜ್ಯೇಷ್ಠತೆ ಆಧಾರದ ಮೇಲೆ ಪಾವತಿಸಲಾಗುತ್ತಿದೆ. ಸಚಿವರಿಗೆ ಇರುವ ಶೇ.20ರಷ್ಟು ವಿವೇಚನಾ ಕೋಟಾವನ್ನು ಬಳಸಿಲ್ಲ ಎಂದು ಹೇಳಿದರು.

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಕಡ್ಡಾಯಕ್ಕೆ ಕಾನೂನು : ಬೊಮ್ಮಾಯಿ

ಗಡುವು ವಾಪಸ್ ಪಡೆಯಲಿ: ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಲು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಗಳು ನೀಡಿರುವ 24 ಗಂಟೆ ಗಡುವು ವಾಪಸ್ ಪಡೆಯಬೇಕು. ಸದ್ಯದಲ್ಲಿಯೇ ಸಿಹಿ ಸುದ್ದಿ ಸಿಗಲಿದೆ ಎಂದು ಮನವಿ ಮಾಡಿದರು.

ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಮಧ್ಯಂತರ ವರದಿ ಕೊಡಲಾಗಿದೆ. ಎಲ್ಲ ಜಿಲ್ಲಾಗಳಿಗೂ ಭೇಟಿ ಕೊಟ್ಟು ಅಧ್ಯಯನ ಮಾಡಬೇಕಿತ್ತು. ಜತೆಗೆ ಕೋವಿಡ್ ಇತ್ತು. ಹೀಗಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ನೀಡುವುದು ವಿಳಂಬವಾಗಿದೆ. ಡಿಸೆಂರ್ಬ 29 ರಂದು ನೀಡಿದ ಮಧ್ಯಂತರ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಹೊಸ ಪ್ರವರ್ಗ 2ಡಿ ಸೃಷ್ಟಿಸಲಾಗಿದೆ ಎಂದರು.

ಸ್ವಾಮೀಜಿಗಳು 24 ಗಂಟೆ ಗಡುವು ಕೊಟ್ಟಿದ್ದು ಸರಿಯಲ್ಲ. ಮೀಸಲಾತಿ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಭಾವನಾತ್ಮಕವಾಗಿ ಮಾತಾಡಿದ್ದಾರೆ. ನಂತರ ಹೋರಾಟಗಾರರ ಭೇಟಿ ಮಾಡಿ ಸಂಪುಟದ ನಿರ್ಧಾರ ತಿಳಿಸಲಾಗಿದೆ. ಸಮುದಾಯಕ್ಕೆ ಕಾನೂನಾತ್ಮಕ ಮೀಸಲಾತಿ ಕೊಡೋದು ಮುಖ್ಯಮಂತ್ರಿ ಉದ್ದೇಶ. 2ಎಗೆ ಸೇರಿಸಬಾರದು ಅನ್ನುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

24 ಗಂಟೆಯೊಳಗೆ ಯಾವುದೇ ತೀರ್ಮಾನ ಕೈಗೊಳ್ಳಲು ಆಗಲ್ಲ. ಸ್ವಾಮೀಜಿಗಳು, ಹೋರಾಟಗಾರರು ಸರ್ಕಾರದ ಜತೆ ಚರ್ಚೆ ಮಾಡೋಣ. ಮುಖ್ಯಮಂತ್ರಿ ಜತೆ ಸಮಯ ನಿಗದಿ ಮಾಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಸರಿಯಾದ ಮಾರ್ಗದಲ್ಲಿ ಸರ್ಕಾರ ಸಾಗುತ್ತಿದೆ ಎಂದು ಹೇಳಿದರು.

ನಮ್ಮ ನಡಿಗೆ ಹಗ್ಗದ ಮೇಲಿನ ನಡಿಗೆಯಂತೆ ಇದೆ. ಎಲ್ಲೂ ಕೂಡಾ ಸಮತೋಲನ ತಪ್ಪದೇ ನಡೆಯುತ್ತೇವೆ. ಇದರಲ್ಲಿ ನಾವು ವಿಫಲ ಆಗಿಲ್ಲ. ಸರ್ಕಾರ ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧವಾಗಿರುತ್ತದೆ. ನಾವು ಸಮುದಾಯಕ್ಕೆ ಸರಿಯಾಗಿಯೇ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ತನಿಖೆ ವರದಿ ನಂತರ ಕ್ರಮ: ಇಂಜಿನಿಯರ್ ಬಳಿ ನಗದು ಪತ್ತೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧಕ್ಕೆ ಲಕ್ಷಾಂತರ ರೂ. ನೊಂದಿಗೆ ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಂದಿದ್ದ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ದರೆ ಕ್ರಮ ಆಗಲಿದೆ. ನಾನು ಇದರ ಹೊಣೆ ಹೊತ್ಕೊಳ್ಳೋದಿಲ್ಲ. ನನಗೆ ಹಣ ಕೊಡಲು ಬಂದಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೇ ಹಣ ಕೊಡೋದಿಕ್ಕೆ ಆತ ಬಂದಿರಬಹುದು ಅಂತ ನಾನೂ ಹೇಳಬಹುದಲ್ವಾ ಎಂದು ಪ್ರಶ್ನಿಸಿದರು.

ಗೊರಗುಂಟೆಪಾಳ್ಯ ಎಲಿವೆಟೆಡ್ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ನಾನು ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. ನಮಗೂ ಆತನಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾವೇರಿ ವಸತಿ ಗೃಹ ಯಾರ್ಯಾರಿಗೆ ನೀಡಲಾಗಿತ್ತು. ಯಾರು ಶಿಫಾರಸು ಮಾಡಿದ್ದರು ಎಂಬ ವರದಿಯನ್ನು ಕೇಳಲಾಗಿದೆ. ಕುಮಾರಕೃಪ ಅತಿಥಿ ಗೃಹದ ನಿರ್ವಹಣೆ ನಮ್ಮ ಇಲಾಖೆ ಮಾಡುತ್ತಿಲ್ಲ ಎಂದು ಹೇಳಿದರು.

Peenya flyover, four months, heavy vehicle, Minister CC Patil,

Articles You Might Like

Share This Article