ಕುಡಿದು ಕೋರ್ಟ್‍ಗೆ ಬಂದ ಕಕ್ಷಿದಾರನಿಗೆ ದಂಡ

Social Share

ಚನ್ನಪಟ್ಟಣ, ನ.25-ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಕುಡಿದು ಬಂದಿದ್ದ ಕಕ್ಷಿದಾರನಿಗೆ ನ್ಯಾಯಾೀಧಿಶರು ದಂಡ ವಿಧಿಸಿ ಎಚ್ಚರಿಕೆ ನೀಡಿರುವ ಘಟನೆ ನಗರದ ನ್ಯಾಯಾಲಯದಲ್ಲಿ ನಡೆದಿದೆ.

ತಾಲ್ಲೂಕಿನ ಗ್ರಾಮದವರಾದ ಸುಮಾರು 45 ವರ್ಷದ ವ್ಯಕ್ತಿಯೊರ್ವರು ನ್ಯಾಯಾಲಯದಲ್ಲಿ ತಮ್ಮ ಜಮೀನಿನ ಪ್ರಕರಣವೊಂದರಲ್ಲಿ ಕಕ್ಷಿದಾರನಾಗಿದ್ದ ಆತ ನ್ಯಾಯಾಲಯಕ್ಕೆ ಕುಡಿದು ಬಂದಿದ್ದನೆಂದು ಹೇಳಲಾಗಿದ್ದು, ಕಟಕಟ್ಟೆಯಲ್ಲಿಯೂ ಆತನ ತೊದಲು ನುಡಿಗಳನ್ನು ಆಲಿಸಿದ ಮಾನ್ಯ ನ್ಯಾಯಾೀಧಿಶರು ಕೂಡಲೇ ಆತನಿಗೆ ದಂಡವಿಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನ್ಯಾಯದೇವತೆಯ ಸ್ಥಾನವಾಗಿರುವ ಪವಿತ್ರವಾದ ನ್ಯಾಯಾಲಯದಲ್ಲಿ ಪಾನಮತ್ತನಾಗಿ ಪ್ರವೇಶ ಮಾಡಿದ್ದು ಅಲ್ಲದೆ ತನ್ನ ಸರದಿಯ ಸಂದರ್ಭದಲ್ಲಿ ಕಟಕಟ್ಟೆಯಲ್ಲಿಯೂ ನಿಂತು ಮಾತನಾಡಿದ ಆರೋಪಿಗೆ ದಂಡವಿಧಿಸಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.

ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

ಕುಡಿದು ನ್ಯಾಯಾಲಯಕ್ಕೆ ಬಂದಿರುವ ವ್ಯಕ್ತಿಗೆ ದಂಡ ವಿಧಿಸಿರುವುದು ಪ್ರತಿಯೊಬ್ಬರಿಗೂ ಎಚ್ಚರಿಕೆ ಘಂಟೆಯಾಗಿದೆ ಎಂದು ಹೇಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಿ ಮರಾಠಿಗರ ಪುಂಡಾಟ

client, comes, drinking, Channapatna, court ,

Articles You Might Like

Share This Article