ಪೆನ್‍ಡ್ರೈವ್ ಪ್ರಕರಣ ಸ್ಪೋಟಕ ತಿರುವು : ಬಿಜೆಪಿ ಮಾಜಿ ಶಾಸಕರ ಆಪ್ತರು ಎಸ್‍ಐಟಿ ವಶಕ್ಕೆ

ಹಾಸನ, ಮೇ 12- ಪೆನ್‍ಡ್ರೈವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕರ ಆಪ್ತರೊಬ್ಬರು ಸೇರಿದಂತೆ ಇಬ್ಬರನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಬಿಜೆಪಿ ಮಾಜಿ ಶಾಸಕರ ಅತ್ಯಾಪ್ತನೆನ್ನಲಾದ ಲಿಖಿತ್‍ಗೌಡ ಮತ್ತು ಯಲಗುಂದ ಚೇತನ್ ಎಂಬ ಇಬ್ಬರನ್ನು ಪೆನ್‍ಡ್ರೈವ್ ಹಂಚಿಕೆ ಸಂಬಂಧದ ಆರೋಪದಲ್ಲಿ ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೆನ್‍ಡ್ರೈವ್ ವೈರಲ್ ವಿಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು … Continue reading ಪೆನ್‍ಡ್ರೈವ್ ಪ್ರಕರಣ ಸ್ಪೋಟಕ ತಿರುವು : ಬಿಜೆಪಿ ಮಾಜಿ ಶಾಸಕರ ಆಪ್ತರು ಎಸ್‍ಐಟಿ ವಶಕ್ಕೆ