ನವದೆಹಲಿ,ಫೆ.5- ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪವೇಝ್ ಮುಷರಫ್ ಇಂದು ಬೆಳಗ್ಗೆ ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿವೆ.
ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಜಿಯೋ ನ್ಯೂಸ್ ಈ ಸುದ್ದಿಯನ್ನು ವರದಿ ಮಾಡಿದೆ. ಮಿಲಟರಿಯ ಮಾಜಿ ಆಡಳಿತಾಧಿಕಾರಿ ತಮ್ಮ 79ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ದುಬೈನ ಅಮೆರಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಬ್ರಿಟಿಷ್ ಆಡಳಿತಾವಧಿಯಿದ್ದ 1943ರ ಆಗಸ್ಟ್ 11ರಂದು ಭಾರತದ ನವದೆಹಲಿಯಲ್ಲಿ ಮುಷ್ರಫ್ ಜನಿಸಿದ್ದರು. ಭಾರತ-ಪಾಕಿಸ್ತಾನ ವಿಭಜನೆ ಬಳಿಕ ಪೋಷಕರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಕರಾಚಿ, ಇಸ್ತಾಂಬುಲ್‍ನಲ್ಲಿ ವಾಸವಿದ್ದ ಅವರು, ಲಾಹೋರ್, ಇಂಗ್ಲೆಂಡ್‍ನ ರಾಯಲ್ ಸೇನಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.
ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ ವಿರುದ್ಧ ಚೀನಾ ಕೆಂಡ
1961ರ ಏಪ್ರಿಲ್ 19ರಂದು ಪಾಕಿಸ್ತಾನದ ಮಿಲಿಟರಿ ಸೇವೆಗೆ ಸೇರ್ಪಡೆಯಾದರು. 1998ರಲ್ಲಿ ಜನರಲ್ ಶ್ರೇಣಿಯ ಹುದ್ದೆಗೆ ಬಡ್ತಿ ಪಡೆದು, ಸೇನೆಯ ಮುಖ್ಯಸ್ಥ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ಒಂದು ವರ್ಷದಲ್ಲಿ ಪಾಕಿಸ್ತಾನ ಸೇನೆ ದೇಶದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆ ವೇಳೆ ಮುಷ್ರಫ್ ಸಿಬ್ಬಂದಿ ಸಮಿತಿಯ ಜಂಟಿ ಅಧ್ಯಕ್ಷರಾಗಿದ್ದರು.
2001ರಲ್ಲಿ ಪಾಕಿಸ್ತಾನದ 10ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಿವೃತ್ತಿಯಾಗುವ 2007ರವರೆಗೂ ಸೇನೆಯ ಅಧ್ಯಕ್ಷರಾಗಿ ಮುಂದುವರೆಸಿದ್ದರು. 2001ರಿಂದ 2008ರವರೆಗೂ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸೇನೆಯ ನಾಲ್ಕು ಸ್ಟಾರ್‍ಗಳ ಜನರಲ್‍ಆಗಿದ್ದ ಮುಷ್ರಫ್ ರಾಜಕಾರಣಿಯಾಗಿ ಬದಲಾಗಿದ್ದರು. ಈ ನಡುವೆ ಪಾಕ್‍ನ ಸುಪ್ರೀಂಕೋರ್ಟ್ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾವಣೆ ನಡೆಸಲು ಆದೇಶ ನೀಡಿತ್ತು.
ಮಿಲಿಟರಿ ಆಡಳಿತರಾಗಿ ದೇಶದಲ್ಲೇ ಮೊದಲ ಬಾರಿಗೆ ನ್ಯಾಯಾಲಯದ ಅದೇಶ ಪಾಲಿಸಿದ ಕೀರ್ತಿಯೂ ಮುಷ್ರಫ್ ಅವರಿಗೆ ಸಲ್ಲಲಿದೆ. ಆದರೆ ಚುನಾವಣೆಯಲ್ಲಿ ಯಾವುದೇ ಸ್ಪಷ್ಟ ಬಹುಮತ ಬರಲಿಲ್ಲ. ಹಾಗಾಗಿ ಸಮ್ಮಿಶ್ರ ಸರ್ಕಾರದ ಜಫ್ರುಲ್ಲಾ ಖಾನ್ ಅವರನ್ನು ಪಾಕ್ ಪ್ರಧಾನಿಯಾಗಿ ಅಧ್ಯಕ್ಷರಾಗಿದ್ದ ಮುಷ್ರಫ್ ಅಂಗೀಕರಿಸಿದ್ದರು
ಇದೆಲ್ಲದಕ್ಕಿಂತ ಮೊದಲು ಅವರು 1965ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು.
ಪತ್ನಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟರ್ ವಿನೋದ್ ಕಾಂಬ್ಳಿ
ನಂತರ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಭಾರೀ ಹೋರಾಟಗಳು ನಡೆದವು. ನಂತರ ಅಧಿಕಾರಕ್ಕೆ ಬಂದ ಸರ್ಕಾರ ಮುಷ್ರಫ್ ಮೇಲೆ ಭ್ರಷ್ಟಚಾರದ ಆರೋಪ ಹೊರಿಸಿ ಅಭಿಯೋಜನೆಗೆ ಒಳಪಡಿಸಿದ್ದವು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದ ಮುಷ್ರಫ್ ನಂತರ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಅನೇಕ ಕಡೆ ತಲೆ ಮರೆಸಿಕೊಂಡಿದ್ದರು. ಈಗ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
Pakistan, Pervez, Musharraf, passes away, Dubai,