ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ, ಎಲ್‌ಪಿಜಿ ದರದಲ್ಲಿ 50 ರೂ. ಹೆಚ್ಚಳ..!

Spread the love

ನವದೆಹಲಿ, ಮಾ 22- ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ  ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು ಇದರ ಜೊತೆಗೆ ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‍ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.

ನಾಲ್ಕೂವರೆ ತಿಂಗಳ ನಂತರ ದರ ಪರಿಷ್ಕರಣೆಗಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜದಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 95.41 ರೂ.ಗೆ ಹೋಲಿಸಿದರೆ ಈಗ ಲೀಟರ್‍ಗೆ 96.21 ರೂ ಆಗಲಿದೆ ಮತ್ತು ಡೀಸೆಲ್ ದರಗಳು ಲೀಟರ್‍ಗೆ ರೂ 86.67 ರಿಂದ ರೂ 87.47 ಕ್ಕೆ ಏರಿದೆ.14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 949.50 ರೂ. ಮುಟ್ಟಿದೆ.

ನಿರ್ಮಾಣ ,ಅಗತ್ಯವಸ್ತುಗಳು ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆ ಹೊರತಾಗಿಯೂ ತೈಲಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರೆಲ್ಗೆ 81-82 ಡಾಲರ್‍ಇತ್ತು ಈಗ 114 ಡಾಲರ್‍ಗೆ ಏರಿಕೆ ಕಂಡಿದೆ.

5 ಕೆಜಿ ಎಲ್‍ಪಿಜಿ ಸಿಲಿಂರ್ ಬೆಲೆ ಈಗ 349 ರೂ ಆಗಿದ್ದರೆ, 10 ಕೆಜಿ 669 ರೂ.ಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಈಗ 2003.50 ರೂಗೆ ತಲುಪಿಕೆ.