15 ದಿನದಲ್ಲಿ 13ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆ

ನವದೆಹಲಿ .ಏ.5- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಎರಡು ವಾರಗಳಲ್ಲಿ ಒಟ್ಟು 9.20 ರೂ. ಹಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 103.81 ರೂ.ಗೆ ಹೋಲಿಸಿದರೆ ಈಗ 104.61 ರೂ., ಡೀಸೆಲ್ ದರಗಳು ಲೀಟರ್‍ಗೆ 95.07 ರೂ.ನಿಂದ 95.87 ರೂ.ಗೆ ಏರಿಕೆಯಾಗಿದೆ.

ದೇಶಾದ್ಯಂತ ದರ ಹಚ್ಚಳವಾಗಿದ್ದು ಸ್ಥಳೀಯ ತೆರಿಗೆಯ ಅನ್ವಯ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಮಾರ್ಚ್ 22 ರಂದು ಆರಂಭಗೊಂಡ ದರ ಪರಿಷ್ಕರಣೆ 13 ನೇ ದಿನ ಸತತ ಹೆಚ್ಚಳವಾಗಿದೆ.ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.ಮೂಲಗಳ ಪ್ರಕಾರ ಇನ್ನು 5 ದಿನ ದರ ಏರಿಕೆಯಾಗಲಿದೆ ಎಮದು ಹೇಳಲಾಗಿದೆ.ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 110ರೂಗೆ ಮುಟ್ಟಿದೆ.