ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ನವದೆಹಲಿ,ಮಾ.23- ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‍ಗೆ 80 ಪೈಸೆ ಹೆಚ್ಚಳ ಮಾಡಿವೆ. ತೈಲ ಮಾರುಕಟ್ಟೆ ಕಂಪನಿಗಳು(ಓಎಂಸಿ) ಕಳೆದ ನಾಲ್ಕು ತಿಂಗಳ ಅವಯ ನಂತರ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಳವನ್ನು ನಿನ್ನೆಯಿಂದ ಏರಿಕೆ ಮಾಡಲು ಪ್ರಾರಂಭಿಸಿವೆ.

ನಿನ್ನೆ 80 ಪೈಸೆ ಹೆಚ್ಚಳವಾಗಿದ್ದು, ಇಂದು ಕೂಡ 80 ಪೈಸೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಸೂಚನೆಯ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‍ಗೆ 102.26 ರೂ. ಇದ್ದರೆ ಡೀಸೆಲ್ 86.58 ರೂ. ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 96.21 ರೂ.ನಿಂದ 97.01ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 88.2 ರೂ.ನಿಂದ 86.67ಕ್ಕೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ 111.67 ರೂ. ಇದ್ದರೆ ಡೀಸೆಲ್ 95.85 ರೂ.ಗಳಾಗಿದೆ. 137 ದಿನಗಳ ಬಳಿಕ ನಿನ್ನೆ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ. ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆ ಮಾಡಲಾಗಿತ್ತು.