ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆ

Spread the love

ನವದೆಹಲಿ, ಏ.3- ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ 80 ಪೈಸೆ ಏರಿಕೆಯಾಗಿದ್ದು, ಕಳೆದ 10 ದಿನದಲ್ಲಿ ಒಟ್ಟು 8 ರೂ.ಏರಿಕೆಯಾಗಿದೆ. ಇಡೀ ದೇಶದಲ್ಲಿ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 102.61 ರೂ.ಗೆ ಹೋಲಿಸಿದರೆ ಈಗ 103.41 ರೂ., ಡೀಸೆಲ್ ದರಗಳು ಲೀಟರ್ ರೂ.93.87 ರಿಂದ ರೂ.94.67 ಕ್ಕೆ ಏರಿಕೆಯಾಗಿದೆ.

ಮಾರ್ಚ್ 22 ರಂದು ಆರಂಭಗೊಂಡ ತೈಲ ಬೆಲೆ ಏರಿಕೆ ಸರಣಿ ಮುಂದುವರೆದಿದ್ದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ
ದೇಶಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ದರ ಬದಲಾಗುತ್ತಿದ್ದು ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 108.14 ,ಚನೈ-108.21, ಭೂಪಾಲ್-115,ಔರಂಗಾಬದ್ -119,ಆಗ್ರಾ -102.23,ಅಹಮದಾಬಾದ್- 102.29,ಅಲಹಾಬಾದ್ 102.53,ಔರಂಗಾಬಾದ್-119.18,ಭುವನೇಶ್ವರ- 109.50,ಚಂಡೀಗಢ- 101.99,ಡೆಹ್ರಾಡೂನ್ -100.99,

ಗುವಾಹಟಿ- 102.55,ಹೈದರಾಬಾದ್- 116.33,ಇಂದೋರ್ -115.12,ಜೈಪುರ- 114.95,ಜಮ್ಮು -103.61,ಜಮ್ಶೆಡ್ಪುರ -105.78,ಕಾನ್ಪುರ -102.15,ಕೊಲ್ಲಾಪುರ -117.60,ಕೋಲ್ಕತ್ತಾ- 112.19,ಕೋಝಿಕ್ಕೋಡ್ -112.31,ಲಕ್ನೋ- 102.45.ಮುಂಬೈ- 117.57,ನಾಸಿಕ್- 117.90,ಪಾಟ್ನಾ -113.33,ರಾಯಪುರ- 108.57 ರೂಗೆ ಮಾರಾಟವಾಗುತ್ತಿದೆ