ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ; 16 ದಿನದಲ್ಲಿ ಬರೋಬರಿ 10 ರೂ ಹೆಚ್ಚಳ

Spread the love

ನವದೆಹಲಿ ಏ.6 – ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ತಲಾ 80 ಪೈಸೆ ಹೆಚ್ಚಿಸಲಾಗಿದ್ದು, 16 ದಿನಗಳಲ್ಲಿ ಬರೊಬರಿ ಒಟ್ಟು 10 ರೂ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 104.61 ರೂ.ಗೆ ಹೋಲಿಸಿದರೆ ಈಗ 105.41 ರೂ.ಬೆಂಗಳೂರಿನಲ್ಲಿ 110 ರೂ ದಾಟಿದೆ.ದೇಶಾದ್ಯಂತ ಬೆಲೆ ಏರಿಕೆ ಪ್ರತಿಭಟನೆಗಳು ನಡೆಯುತ್ತಿದೆ.ಕಾಂಗ್ರೇಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಾಣಿಜ್ಯನಗರಿ ಮುಂಬೈನಲ್ಲಿ ಶೇರು ಪೇಟೆ ವಹಿವಾಟಿನ ಮೇಲೂ ಪ್ರಭಾವ ಬೀರಿದೆ. ಆಹಾರ ವಸ್ತುಗಳು ಏರಿಕೆ ಕಾಣುತ್ತಿದ್ದು. ಸಾರಿಗೆ ವಲಯಕ್ಕೂ ಬಿಸಿತಟ್ಟಿದೆ.