ತುಮಕೂರು, ಜ.25- ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್ಗೆ ಇಳಿದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ. ಅರಸೀಕೆರೆ ತಾಲೂಕಿನ ಹಾರ್ನಹಳ್ಳಿ ನಿವಾಸಿ ನಾಗರಾಜು (55), ತಮಿಳುನಾಡಿನ ವೇಲೂರು ಮೂಲದ ರವಿ (38) ಮೃತಪಟ್ಟ ದುರ್ದೈವಿಗಳು.
ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್ನ ಟ್ಯಾಂಕ್ ಸ್ವಚ್ಛಗೊಳಿಸಲು ನಾಗರಾಜ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಈ ವೇಳೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿದ್ದಾನೆ.
ಟ್ಯಾಂಕ್ನಿಂದ ಮೇಲೆ ಬರಲು ಒದ್ದಾಡುತ್ತಿದ್ದು, ರಕ್ಷಣೆಗಾಗಿ ರವಿಯನ್ನು ಕರೆದಿದ್ದಾನೆ. ಈ ವೇಲೆ ಏಕಾಏಕಿ ರಕ್ಷಣೆಗೆ ಮುಂದಾದ ರವಿಯೂ ಸಹ ಟ್ಯಾಂಕ್ನೊಳಗೆ ಇಳಿದಿದ್ದು, ಆತನೂ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಬಿಜೆಪಿಯಲ್ಲಿ ರಾಜಾಹುಲಿ ಬಿಎಸ್ವೈಗೆ ಇದೀಗ ಭಾರೀ ಬೇಡಿಕೆ
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಟ್ಯಾಂಕ್ನಿಂದ ಹೊರತೆಗೆದು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.
ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
petrol tank, cleaning, Two, died, Tumkur,