ಕೆಜಿಹಳ್ಳಿ ಗಲಭೆ : PFI ಕಾರ್ಯಕರ್ತರ ವಿರುದ್ಧ 10,196 ಪುಟಗಳ ಚಾರ್ಜ್‍ಶೀಟ್

Social Share

ಬೆಂಗಳೂರು,ಮಾ.19- ರಾಜಧಾನಿ ಬೆಂಗಳೂರಿನ ಕೆ.ಜಿಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ಪಿಎಫ್‍ಐ ಕಾರ್ಯಕರ್ತರ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸರು, ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ವಿಶೇಷ ನ್ಯಾಯಾಲಯಕ್ಕೆ 10,196 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಪಿಎಫ್‍ಐ ಅಧ್ಯಕ್ಷ ನಾಸೀರ್ ಪಾಷಾ ಸೇರಿದಂತೆ 15 ಜನರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. 9 ಕಾರ್ಯಕರ್ತರ ಮೇಲೆ ಯುಎಪಿಎ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಉಳಿದ ಐವರ ಮೇಲೆ ಐಪಿಸಿ 153ಎ ಅಡಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಪೊಲೀಸರು ಪಿಎಫ್‍ಐ ಕಾರ್ಯಕರ್ತರ ತರಬೇತಿ, ಸಭೆ, ಹಣ ಸಂಗ್ರಹದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರ ವಿರುದ್ಧ ಎಸ್ಮಾ ಜಾರಿ

ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಮಿಟ್ಟೂರಿನಲ್ಲಿ, ಮಿಟ್ಟೂರು ಫ್ರೀಡಂ ಚಾರಿಟೇಬಲ್ ಟ್ರಸ್ಟ್ ಎಂಬ ಹೆಸರಲ್ಲಿ ಸರಣಿ ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ಕಾರ್ಯಕರ್ತರ ಕಾರ್ಯತಂತ್ರ ವಿಸ್ತರಣೆ, ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು.

ಈ ಟ್ರಸ್ಟ್‍ಗೆ ದೇಶದ ಹಲವೆಡೆಯಿಂದ 10 ವರ್ಷಗಳಲ್ಲಿ 4 ರಿಂದ 5 ಕೋಟಿ ಹಣ ಬಂದಿದೆ. ಬಂದ ಹಣವನ್ನು ಮಕ್ಕಳ ಶಿಕ್ಷಣ ಸೇರಿ ಹಲವು ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ.

Articles You Might Like

Share This Article