ಮನಿಲಾ, ಮಾರ್ಚ್ 10 – ಉಕ್ರೇನ್ ವಿರುದ್ಧ ರಷ್ಯಾದ ಯುದ್ಧವು ಕೆಟ್ಟದಕ್ಕೆ ತಿರುಗಿದರೆ ಮತ್ತು ಅಮೆರಿಕ ಯುದ್ಧದಲ್ಲಿ ಇಕ್ಕಟ್ಟಿಗೆ ಸಿಲುಕಿಸಿದರೆ ನಾವು ಜೊತೆಯಾಗುತ್ತೇವೆ ಎಂದು ಫಿಲಿಪೈನ್ಸ್ ಹೇಳಿದೆ.
1951 ರ ಪರಸ್ಪರ ರಕ್ಷಣಾ ಒಪ್ಪಂದದ ಅಡಿಯಲ್ಲಿ ಅಮೆರಿಕದ ಪಡೆಗಳಿಗೆ ನಮ್ಮ ದೇಶದ ಸೌಲಭ್ಯ್ನ ಪಡೆಯಬಹುದು ಇದಕ್ಕೆ ಫಿಲಿಪೈನ್ಸ್ ಅಧ್ಯಕ್ಷರು ಸಿದ್ಧರಾಗಿದ್ದಾರೆ, ಎಂದು ವಾಷಿಂಗ್ಟನ್ನಲ್ಲಿರುವ ಫಿಲಿಪೈನ್ಸ್ ರಾಯಭಾರಿ ತಿಳಿಸಿದ್ದಾರೆ
ರಾಯಭಾರಿ ಜೋಸ್ ಮ್ಯಾನುಯೆಲ್ ರೊಮುಲ್ಡೆಜï ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ, ಅಲ್ಲಿ ಅಧ್ಯಕ್ಷರು ಬಿಕ್ಕಟ್ಟಿನ ಜಾಗತಿಕ ಆರ್ಥಿಕ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಫಿಲಿಪೈನ್ಸ್ ಉಕ್ರೇನ್ ಆಕ್ರಮಣವನ್ನು ಖಂಡಿಸಿದೆ ಮತ್ತು ರಷ್ಯಾ ಯುಧವನ್ನು ತಕ್ಷಣವೇ ನಿಲ್ಲಿಸಿ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ
