ಭಾರತದಿಂದ ಲಘು ಹೆಲಿಕಾಪ್ಟರ್‌ ಖರೀದಿಗೆ ಮುಂದಾದ ಫಿಲಿಪೈನ್ಸ್

Social Share

ನವದೆಹಲಿ, ಜುಲೈ 17 -ಫಿಲಿಪೈನ್ಸ್ ತನ್ನ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಲು ಭಾರತದಿಂದ ಸುಧಾರಿತ ಲಘು ಹೆಲಿಕಾಪ್ಟರ್‍ಗಳನ್ನು ಖರೀದಿಸಲು ಮುಂದಾಗಿದೆ. ಆಗ್ನೇಯ ಏಷ್ಯಾದ ದ್ವೀಪ ರಾಷ್ಟ್ರ ಇತ್ತೀಚೆಗೆ ಭರಿ ಭದ್ರತಾ ಸವಾಲುಗಳನ್ನು ಎದುರಿಸುತಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲು ಸೇನಾ ಪಡೆಯನ್ನು ಆಧುನೀಕರಿಸುವತ್ತ ಗಮನಹರಿಸುತ್ತಿದೆ.

ದಕ್ಷಿಣ ಸಮುದ್ರದಲ್ಲಿ ಚೀನಾದೊಂದಿಗೆ ದಶಕಗಳ ಕಾಲದಿಂದ ನಡೆಯುತಿರುವ ಪ್ರಾದೇಶಿಕ ವಿವಾದಕ್ಕೆ ತನ್ನದೇ ಆದ ದಿಟ್ಟ ನಿಲುವಿಗೆ ಫಿಲಿಪೈನ್ಸïಮುಂದಾಗಿದೆ. ಹಳೆಯ ಹೆಲಿಕಾಪ್ಟರ್ ಫ್ಲೀಟ್ ಬದಲಿಸಿ ಹಲವಾರು ಸುಧಾರಿತ ಭಾರತದ ಲಘು ಹೆಲಿಕಾಪ್ಟರ್‍ಗಳನ್ನು (ಎಎಲ್ಎಚ್) ಖರೀದಿಸಲು ತೀವ್ರ ಆಸಕ್ತಿಯನ್ನು ತೋರಿಸಿದೆ ಎಂದು ಭದ್ರತೆ ಮತ್ತು ರಕ್ಷಣಾ ಸಂಸ್ಥೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ದೇಶಿತ ಸ್ವಾೀಧಿನದ ಕುರಿತು ಉಭಯ ಕಡೆಯವರು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 5.5 ಟನ್ ತೂಕದ ಅವಳಿ ಎಂಜಿನ ಎಎಲ್‍ಎಚ್ ಹೆಲಿಕಾಪ್ಟರ್, ಬಹು-ಪಾತ್ರ, ಬಹು-ಕಾರ್ಯಾಚರಣೆಯ ಹೊಸ ಪೀಳಿಗೆಯ ಹೆಲಿಕಾಪ್ಟರ್ ಆಗಿದೆ ಮತ್ತು ವಿವಿಧ ಮಿಲಿಟರಿ ಕಾರ್ಯಾಚರಣೆಗಳಿಗೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಈಗಾಗಲೆ ಭಾರತದ ಲಘು ಯುದ್ಧ ವಿಮಾನ ತೇಜಸ್ ಕಾರ್ಯಕ್ಷಮತೆಯಿಂದ ಫಿಲಿಪೈನ್ಸ್ ಕೂಡ ಪ್ರಭಾವಿತವಾಗಿದೆ ಮತ್ತು ಯುದ್ಧ ವಿಮಾನಗಳ ಪಡೆ ಆನೀಕರಣ ಪ್ರಕ್ರಿಯೆಯಲ್ಲಿ ಖರೀದಿಸಲು ಪರಿಗಣಿಸಬಹುದು ಎಂದು ಅಕಾರಿಗಳು ತಿಳಿಸಿದ್ದಾರೆ.

ಫಿಲಿಪೈನ್ಸ್ ಆಗ್ನೇಯ ಏಷ್ಯಾ ವಲಯದಲ್ಲಿ ಭಾರತದ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆ ಹೊಂದಿ , ದ್ವಿಪಕ್ಷೀಯ ರಕ್ಷಣೆ ಮತ್ತು ಭದ್ರತಾ ಸಂಬಂಧ ವಿಷಯ ಕಳೆದ ಕೆಲವು ವರ್ಷಗಳಲ್ಲಿ ಜೊತೆಯಾಗಿದೆ.

10 ರಾಷ್ಟ್ರಗಳ ಅಸೋಸಿಯೇಷನ್ ಆಫ್ ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಮಿತಿಯಲ್ಲಿ ಫಿಲಿಪೈನ್ಸ್ ಪ್ರಮುಖ ಸದಸ್ಯ ಕೂಡ ಆಗಿದೆ, ಇದು ಕಳೆದ ಒಂದು ದಶಕದಲ್ಲಿ ಭಾರತದ ಸಂಬಂಧಗಳು ಪ್ರಮುಖ ವಿಸ್ತರಣೆಗೆ ಸಾಕ್ಷಿಯಾಗಿದೆ.

ಹಡಗುಗಳು, ವಿಮಾನಗಳು ಅಥವಾ ಭೂ ವೇದಿಕೆಗಳಿಂದ ಉಡಾಯಿಸಬಹುದು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಖರೀದಿಗಾಗಿ ಫಿಲಿಪೈನ್ಸ್ ಭಾರತದೊಂದಿಗೆ 375 ಮಿಲಿಯನ್ ಒಪ್ಪಂದ ಪೂರ್ಣಗೊಂಡಿದೆ.ಜಲಾಂತರ್ಗಾಮಿ ನೌಕೆಗಾಗಿಯು ಕ್ಷಿಪಣಿ ತಯಾರಾಗುತ್ತಿದೆ .

Articles You Might Like

Share This Article