ಬೆಂಗಳೂರು,ಮಾ.6-ಹಳೆ ದ್ವೇಷದಿಂದ ಫಿಜಿಯೋಥೆರಪಿಸ್ಟ್ ಒಬ್ಬರನ್ನು ಅಪಹರಿಸಿ ಕೊಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿಹಚ್ಚಿ ತಲೆಮರೆಸಿಕೊಂಡಿದ್ದ ಮೂವರು ಹಂತಕರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರಾಂಜನೇಯಲು, ಗೋವರ್ಧನ್ ಮತ್ತು ಬುಡ್ಡಪ್ಪ ಬಂಧಿತ ಆರೋಪಿಗಳು. ಯಲಹಂಕದ ಕೋದಂಡ ಲೇಔಟ್ ನಿವಾಸಿ, ಖಾಸಗಿ ಆಸ್ಪತ್ರೆಯೊಂದರ ಫಿಜಿಯೋಥೆರಪಿಸ್ಟ್ ಶ್ರೀಧರ್ ಎಂಬುವರನ್ನು ಅಪಹರಿಸಿ ಕೊಲೆ ಮಾಡಿ ಗಾಣಿಗರಹಳ್ಳಿ ಹೊರವಲಯದ ಜಮೀನುವೊಂದರ ಬಳಿ ಶವ ತೆಗೆದುಕೊಂಡು ಹೋಗಿ ಗುರುತು ಸಿಗಬಾರದೆಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರೋಪಿಗಳು ಪರಾರಿಯಾಗಿದ್ದರು.
ಫೆ.7ರಂದು ಜಮೀನು ಮಾಲೀಕರು ಜಮೀನು ಬಳಿ ಹೋದಾಗ ಶವ ಕಂಡು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅರ್ಧಂಬರ್ಧ ಸುಟ್ಟಿರುವ ವ್ಯಕ್ತಿಯ ಶವ ಕಂಡುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಫೆ.9ರಂದು ಗುರುತು ಪತ್ತೆಹಚ್ಚಿದ್ದು, ಅವರು ಫಿಜಿಯೋಥೆರಪಿಸ್ಟ್ ಶ್ರೀಧರ್ ಎಂಬುದು ಗೊತ್ತಾಗಿದೆ.
ಉಮೇಶ್ ಪಾಲ್ ಹತ್ಯೆಗೈದ ಮತ್ತೊಬ್ಬ ಆರೋಪಿಯ ಎನ್‍ಕೌಂಟರ್
ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಕೊನೆಗೂ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಳೆ ದ್ವೇಷದಿಂದ ಫಿಜಿಯೋಥೆರಪಿಸ್ಟ್‍ನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಆರೋಪಿ ವೀರಾಂಜನೇಯಲು ಹಾಗೂ ಶ್ರೀಧರ್ ನಡುವೆ ಕಳೆದ ಒಂದು ವರ್ಷದ ಹಿಂದೆ ಯಾವುದೋ ವಿಚಾರಕ್ಕೆ ಜಗಳವಾಗಿದ್ದು, ಆ ಸಂದರ್ಭದಲ್ಲಿ ವೀರಾಂಜನೇಯಲುಗೆ ಶ್ರೀಧರ್ ಹೊಡೆದಿದ್ದು ಸ್ಥಳೀಯರು ಜಗಳ ಬಿಡಿಸಿದ್ದರು.
ಮನೆ ಬಾಗಿಲಿಗೆ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ತಲುಪಿಸಲು ಸರ್ಕಾರದ ಪ್ರಯತ್ನ: ಮೋದಿ
ಇದೇ ದ್ವೇಷದಿಂದ ಶ್ರೀಧರ್ ಮೇಲೆ ವೀರಾಂಜನೇಯಲು ಹಗೆ ಸಾಧಿಸುತ್ತಿದ್ದನು. ಫೆ.4ರಂದು ಶ್ರೀಧರ್‍ನನ್ನು ಭೇಟಿಯಾಗಿ ಮದ್ಯ ಸೇವಿಸಲು ಕೆಂಪಾಪುರದ ರೂಮ್‍ಗೆ ಕರೆದೊಯ್ದು, ಮದ್ಯ ಕುಡಿಸಿ ನಂತರ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಶವವನ್ನು ಆಟೋದಲ್ಲಿ ಸಾಗಿಸಿ ಗಾಣಿಗರಹಳ್ಳಿಯ ಹೊರವಲಯದ ಜಮೀನಿನಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ವಿಚಾರಣೆಯಿಂದ ಬಯಲಾಗಿದೆ.
Physiotherapist, murder, three, arrested, BANGALORE,