ಬೆಂಗಳೂರು , ಬೆಂಗಳೂರು ಫಿಜಿಯೋಥೆರಪಿಸ್ಟ್ ನೆಟ್ವರ್ಕ್ ಸಂಸ್ಥೆಯಿಂದ ಫಿಜಿಯೋಥೆರಪಿಯ ಮಹತ್ವ, ಉಪಯೋಗಗಳ ಬಗ್ಗೆ ಸೆ.8 ರಂದು ವಿಶ್ವ ಫಿಜಿಯೋಥೆರಪಿ ದಿನವಾಗಿರುವುದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಡಾಕ್ಟರ್ ಧನಂಜಯ್ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಪ್ರತಿಯೊಬ್ಬರು ಮೂಳೆಗೆ ಸಂಬಂಧಿಸಿದಂತೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮೂಳೆ ಸಂಬಂಧಿ ಕಾಯಿಲೆಗಳು ಬಾಧಿಸುತ್ತೇವೆ. ಇವುಗಳ ಚಿಕಿತ್ಸೆ ಮತ್ತು ರೋಗದ ಬಾದೆಯನ್ನ ನಿವಾರಿಸಿಕೊಳ್ಳುವ ಅರಿವು ಸಾರ್ವಜನಿಕರಲ್ಲಿ ಮುಖ್ಯವಾಗಿದೆ. ಇದರ ಕುರಿತು ಅರಿವು ಮೂಡಿಸುವುದೇ ನಮ್ಮ ಉದ್ದೇಶ.
ಸೆ.8 ವಿಶ್ವ ವಿಜಿಯೋಥೆರಪಿ ದಿನ. ಈ ದಿನದಂದು, ಬೆಂಗಳೂರಿನ ಸುಮಾರು 3000 ಕ್ಕಿಂತ ಹೆಚ್ಚು ಫಿಜಿಯೋಥೆರಪಿಷ್ಟಗಳು ಸಾರ್ವಜನಿಕರಿಗೆ ಫಿಜಿಯೋಥೆರಪಿಯ ಬಗ್ಗೆ ಅರಿವು ಮೂಡಿಸುವ ದೊಡ್ಡ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಬಾಗಲಗುಂಟೆಯಲ್ಲಿ ಮನೆಗೆ ನುಗ್ಗಿ ತಾಯಿ-ಮಗನ ಹತ್ಯೆ
ಸಂಧಿವಾತವನ್ನು ತೀವ್ರವಾದ ಅಥವಾ ದೀರ್ಘಕಾಲದ ಜಂಟಿ ಉರಿಯೂತ ಎಂದು ವ್ಯಾಖ್ಯಾನಿಸಲಾಗಿದೆ. ರೋಗಲಕ್ಷಣಗಳು ನೋವು, ಊತ, ಮತ್ತು ಕೆಂಪು ಬಣ್ಣವನ್ನು ಒಳಗೊಂಡಿರಬಹುದು ಇದು ಕಡಿಮೆ ಕಾರ್ಯ ಮತ್ತು ಕೌಶಲ್ಯಕ್ಕೆ ಕಾರಣವಾಗಬಹುದು.
ಇದು ಮಕ್ಕಳು, ಹದಿಹರೆಯದವರು ಮತ್ತು ಕ್ರೀಡಾಪಟುಗಳು ಸೇರಿದಂತೆ – ಎಲ್ಲಾ ವಯಸ್ಸಿನವರು ಈ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ವಾರದಿಂದ ಪಾರಕ್ಕೆ ಮತ್ತು ದಿನದಿಂದ ದಿನಕ್ಕೆ ಬದಲಾಗಬಹುದು. ಇದು ವಿಭಿನ್ನ ರೀತಿಯಲ್ಲಿ ಜನರ ಮೇಲೆ ಪರಿಣಾಮ ಬೀರಬಹುದು ಮತ್ತು ಪ್ರತಿಯೊಂದು ಸ್ಥಿತಿಯು ನಿರ್ದಿಷ್ಟ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಅದಾಗ ಸರಿಯಾದ ಚಿಕಿತ್ಸೆ ಮತ್ತು ವಿಧಾನದೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ನೀವು ನಿರ್ವಹಿಸಬಹುದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಡಾ. ನಂದನ್ ಕುಮಾರ್ ಡಾ. ಆರತಿ ಪ್ರಸಾದ್ ಉಪಸ್ಥಿತರಿದ್ದರು.
physiotherapy, #Awareness, #September8, #PhysiotherapyDay,