ಅಹಮದಾಬಾದ್,ಫೆ.11- ದೇಶದ ಅಭಿವೃದ್ಧಿಗೆ ಫಿಜಿಯೋಥೇರಪಿ ಚಿಕಿತ್ಸೆಯಂತೆ ನಿರಂತರತೆ ಮತ್ತು ದೃಢವಿಶ್ವಾಸ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ನಡೆದ 60ನೇ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ ಸಮ್ಮೇಳನವನ್ನು ವಿಡಿಯೋ ಕಾನರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಫಿಸಿಯೋಥೆರಪಿ, ನಿರಂತರತೆ ಮತ್ತು ಕನ್ವಿಕ್ಷನ್ ಅಗತ್ಯವಿದೆ.
ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾದ ಮನವೊಲಿಸಲಿಸಬೇಕು : ಅಮೆರಿಕ
ಫಿಸಿಯೋಥೆರಪಿಸ್ಟ್‍ಗಳು ಸರಿಯಾದ ವ್ಯಾಯಾಮ, ಸರಿಯಾದ ಭಂಗಿ ಮತ್ತು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳುವ ಬಗ್ಗೆ ಜನರಿಗೆ ಸರಿಯಾದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಫಿಸಿಯೋಥೆರಪಿಯನ್ನು ಯೋಗದೊಂದಿಗೆ ಸಂಯೋಜಿಸಬೇಕು. ಕೆಲವೊಮ್ಮೆ ತಮಗೂ ಫಿಸಿಯೋಥೆರಪಿಸ್ಟ್‍ಗಳ ಸಹಾಯ ಬೇಕಾಗುತ್ತದೆ ಎಂದರು.
ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ: ಲಾಲೂ ಪುತ್ರಿಯ ಭಾವನಾತ್ಮಕ ಟ್ವಿಟ್
ಎರಡು ದಿನಗಳ 60 ನೇ ರಾಷ್ಟ್ರೀಯ ಐಎಪಿ ಸಮ್ಮೇಳನ 16 ವರ್ಷಗಳ ನಂತರ ಗುಜರಾತ್‍ನಲ್ಲಿ ನಡೆಯುತ್ತಿದೆ. ಭಾರತ ಮತ್ತು ವಿದೇಶಗಳ ತಜ್ಞರು ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಚರ್ಚಿಸುತ್ತಾರೆ ಮತ್ತು ಆಧುನಿಕ ಬದಲಾವಣೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಸಮ್ಮೇಳನದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಫಿಸಿಯೋಥೆರಪಿಸ್ಟ್‍ಗಳು ವೈಜ್ಞಾನಿಕ ಸಂಶೋಧನೆ ಹಾಗೂ ಪ್ರಬಂಧಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
Physiotherapy, Continuity, Conviction Necessary, Country, Development, PM Modi,