ರಾಜ್ಯಸಭೆಯಲ್ಲೂ ಕೋಲಾಹಲ ಸೃಷ್ಟಿಸಿದ ಖರ್ಗೆ ವಿವಾದಿತ ಹೇಳಿಕೆ

Social Share

ನವದೆಹಲಿ,ಡಿ.20- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ರಾಜ್ಯಸಭೆಯಲ್ಲೂ ಕೋಲಾಹಲ ಸೃಷ್ಟಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆ ಲೋಕಸಭೆಯಲ್ಲೂ ಇದೇ ವಿಷಯ ಗದ್ದಲಕ್ಕೆ ಕಾರಣವಾಗಿತ್ತು. ಇತ್ತ ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಖರ್ಗೆ ಅವರು ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಟ್ರಜರಿ ಬೆಂಚ್‍ನ ಪ್ರಮುಖ ನಾಯಕರು ತಮ್ಮ ಕೈ ಮೇಲೆ ಎತ್ತಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಸಭಾಪತಿ ಜಗದೀಪ್ ಧನ್ಕರ್, ಗಲಾಟೆಯನ್ನು ತಣ್ಣಗಾಗಿಸಲು ಸತತ ಪ್ರಯತ್ನ ನಡೆಸಿದರು.

ನಿನ್ನೆ ರಾಜಸ್ಥಾನದ ಅಲ್ವಾರ್‍ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಸ್ವತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ಸಿಗರು ಮಾತ್ರ ಕೊಡುಗೆ ನೀಡಿದ್ದಾರೆ. ಬಿಜೆಪಿಯ ಯಾವ ನಾಯಿಯೂ ಪ್ರಾಣ ಕಳೆದುಕೊಂಡಿಲ್ಲ. ಸ್ವತಂತ್ರ್ಯ ನಂತರವೂ ಕಾಂಗ್ರೆಸ್‍ನ ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ, ಕೇಂದ್ರ ಸರ್ಕಾರ ಹುಲಿಯಂತೆ ಪೋಸು ಕೋಡುತ್ತದೆ. ಆದರೆ ಇಲಿಯಂತೆ ವರ್ತಿಸುತ್ತದೆ ಎಂದು ಲೇವಡಿ ಮಾಡಿದ್ದರು. ಇದನ್ನು ಇಂದು ಸದನದಲ್ಲಿ ಪ್ರಸ್ತಾಪಿಸಿ ಬಿಜೆಪಿ ಸದಸ್ಯರು ಕ್ಷಮೆ ಕೇಳುವಂತೆ ಖರ್ಗೆ ಅವರನ್ನು ಒತ್ತಾಯಿಸಿದರು.

ಜನವರಿ ಮೊದಲ ವಾರದಲ್ಲಿ ಕೆಪಿಟಿಸಿಎಲ್ ಎಇ,ಜೆಇ ನೇಮಕಾತಿ ಪರೀಕ್ಷೆ ಫಲಿತಾಂಶ

ಕಲಾಪ ಆರಂಭವಾಗುತ್ತಿದ್ದಂತೆ ಕಾಗದ ಪತ್ರಗಳ ಮಂಡನೆಯಾಯಿತು. ವೈಎಸ್‍ಆರ್‍ಸಿಪಿ ಪಕ್ಷದ ವಿ.ವಿಜಯ್‍ಸಾಯಿರೆಡ್ಡಿ ಮತ್ತು ನಾಮನಿರ್ದೇಶಿತ ಸದಸ್ಯರಾದ ಪಿ.ಟಿ.ಉಷಾರನ್ನು ಉಪಾಧ್ಯಕ್ಷರ ಪ್ಯಾನಲ್‍ಗೆ ನೇಮಿಸಿರುವುದಾಗಿ ಸಭಾಪತಿ ಪ್ರಕಟಿಸಿದರು.

ಬಳಿಕ ಆಡಳಿತ ಪಕ್ಷದ ಸದಸ್ಯರು ಗಲಾಟೆ ಆರಂಭಿಸಿದರು. ಸಭಾನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್, ನಿನ್ನೆ ಖರ್ಗೆ ಅವರು ಅಸಹ್ಯಕರ ಭಾಷೆ ಬಳಕೆ ಮಾಡಿದ್ದಾರೆ. ಆಧಾರ ರಹಿತ ಆರೋಪಗಳ ಮೂಲಕ ಅಸತ್ಯವನ್ನು ದೇಶದ ಮುಂದಿಡಲು ಯತ್ನಿಸಿದ್ದಾರೆ. ಇದನ್ನು ಬಲವಾಗಿ ಖಂಡಿಸುತ್ತೇನೆ.

ಇದು ಅವರ ಯೋಜನೆ ಮತ್ತು ಹೊಟ್ಟೆ ಕಿಚ್ಚನ ಪ್ರತಿಬಿಂಬವಾಗಿದೆ. ಅವರ ಪಕ್ಷ ಜನರಿಂದ ತಿರಸ್ಕರಿಸಲ್ಪಟ್ಟಿದೆ. ಇದಕ್ಕಾಗಿ ಹೊಟ್ಟೆ ಕಿಚ್ಚಿನಿಂದ ಅಸಹ್ಯಕರ ಭಾಷೆ ಭಾಷೆ ಬಳಸಿದ್ದಾರೆ. ತನ್ಮೂಲಕ ಈ ಸದನ ಮತ್ತು ನಾಗರೀಕರನ್ನು ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಜಪಾನ್ ವಿರುದ್ಧ ಉತ್ತರ ಕೊರಿಯಾ ಆಕ್ರೋಶ : ರಕ್ತ-ನಿರ್ಣಾಯಕ ಕ್ರಮದ ಎಚ್ಚರಿಕೆ

ಸ್ವತಂತ್ರ್ಯದ ಬಳಿಕ ಕಾಂಗ್ರೆಸ್
ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದರು. ಖರ್ಗೆ ಅವರ ನಡವಳಿಕೆ ನೋಡಿದರೆ ಗಾಂಜೀ ಹೇಳಿದ್ದು ಸತ್ಯ ಎನಿಸುತ್ತದೆ. ಖರ್ಗೆ ಅವರಿಗೆ ಹೇಗೆ ಮಾತನಾಡಬೇಕು ಎಂದು ಗೋತ್ತಿಲ್ಲ. ತಪ್ಪು ಭಾಷೆ ಬಳಸಿದ್ದಕ್ಕೆ ಕೂಡಲೇ ಅವರು ಈ ಸದನದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ತಿರುಗೇಟು ನೀಡಿದ ಖರ್ಗೆ ಅವರು, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಸ್ವತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಏನು ಇಲ್ಲ. ಆದರೂ ನಾನು ಸದನದ ಹೊರಗೆ ನೀಡಿರುವ ಹೇಳಿಕೆಯನ್ನು ಇಲ್ಲಿ ಚರ್ಚೆ ಮಾಡಲು ಅವಕಾಶ ಇಲ್ಲ. ಬಿಜೆಪಿಯವರು ಸದನದ ನಿಯಮಗಳನ್ನು ಕಲಿತುಕೊಂಡು ಪಾಲನೆ ಮಾಡಲಿ. ಆಡಳಿತ ಪಕ್ಷದವರೇ ಕಲಾಪಕ್ಕೆ ಅಡ್ಡಿ ಪಡಿಸುವುದು ವಿಚಿತ್ರವಾಗಿದೆ ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾತ್ರ ಏನಿತ್ತು ಎಂದು ಹೇಳಿ, ನಾನು ಹೇಳಿರುವ ಸತ್ಯವನ್ನು ಜೀರ್ಣಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಗಲಾಟೆ ಮಾಡುತ್ತಿದ್ದೀರಾ ಎಂದು ಪ್ರತಿ ವಾಕ್ದಾಳಿ ನಡೆಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಸಭಾಪತಿ ಜಗದೀಪ್, ಈ ಸದನದ ಶಿಸ್ತನ್ನು ಪಾಲನೆ ಮಾಡಿ. ಸಭಾನಾಯಕರು ತಮ್ಮ ಸದಸ್ಯರಿಗೆ ಶಿಸ್ತನ್ನು ಪಾಲನೆ ಮಾಡಲು ಸೂಚನೆ ನೀಡಿ. ಆಡಳಿತ ಪಕ್ಷದವರೇ ಚರ್ಚೆಗೆ ಅಡ್ಡಿ ಪಡಿಸಿ ಕೆಟ್ಟ ಸಂಪ್ರದಾಯಗಳಿಗೆ ನಾಂದಿ ಹಾಡಬೇಡಿ ಎಂದು ಸಲಹೆ ನೀಡಿದರು.

Piyush Goyal, Demands, Apology, Mallikarjun Kharge, Rajya Sabha,

Articles You Might Like

Share This Article