ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ರೈಲ್ವೆ ಸಚಿವರಿಂದ ಕೃತಜ್ಞತೆ ಮತ್ತು ಮೆಚ್ಚುಗೆ ಪತ್ರ
ಬೆಂಗಳೂರು : ಗೌರವಾನ್ವಿತ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ‘ರೈಲ್ವೆ ಕುಟುಂಬದ ಸದಸ್ಯ’ ಎಂದು ನೌಕರರನ್ನು ಪ್ರೀತಿಯಿಂದುದ್ದೇಶಿಸಿ ಬರೆದ ತಮ್ಮ ಪತ್ರದಲ್ಲಿ ಕೋವಿಡ್ 19ರ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರದ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರೈಲ್ವೆ ಸಿಬ್ಬಂದಿಯ ಮನೋಭಾವ, ದೃಢ ನಿಶ್ಚಯ ಮತ್ತು ಸಂಕಲ್ಪವನ್ನು ಶ್ಲಾಘಿಸುತ್ತಾ ತಮ್ಮ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಇಡೀ ಜಗತ್ತು ಸ್ಥಬ್ಧವಾದಾಗಲೂ ಸಹ ರೈಲ್ವೆ ಸಿಬ್ಬಂದಿಗಳು ಒಂದು ದಿನ ರಜೆ ತೆಗೆದುಕೊಳ್ಳದೆ ಆರ್ಥಿಕತೆಯ ಚಕ್ರಗಳನ್ನು ಚಲಿಸುವಂತೆ ಮಾಡಲು ವೈಯಕ್ತಿಕ ಅಪಾಯವನ್ನು ಗಣನೆಗೆ ತೆಗೆದುಕೊಳ್ಳದೆ ಶ್ರಮಿಸಿದ್ದಾರೆ ಎಂದು ರೈಲ್ವೆ ಸಿಬ್ಬಂದಿಗಳ ಕರ್ತವ್ಯದ ಬಗೆಗಿನ ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.`
ಇದಲ್ಲದೆ, ಲಾಕ್ ಡೌನ್ ಪರಿಣಾಮವಾಗಿ ದೂರದ ಊರುಗಳಲ್ಲಿ ಸಿಲುಕಿದ್ದ 63 ಲಕ್ಷ ನಾಗರಿಕರನ್ನು ಶ್ರಮಿಕ್ ಸ್ಪೆಷಲ್ಸ್ ರೈಲುಗಳ ಮೂಲಕ ತಮ್ಮ ಕುಟುಂಬಗಳೊಂದಿಗೆ ಒಗ್ಗೂಡಿಸಲು, ಮತ್ತು ಕಿಸಾನ್ ರೈಲು ಸೇವೆಗಳ ಮೂಲಕ, ನಮ್ಮ ‘ ಅನ್ನದಾತ ‘ ರೈತರಿಗೆ ದೊಡ್ಡ ಮತ್ತು ಉತ್ತಮ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ರೈಲ್ವೆಯ ಉದ್ಯೋಗಿಗಳು ಅನುವು ಮಾಡಿಕೊಟ್ಟಿದ್ದಾರೆ ಎಂದು ಮಾನ್ಯ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ರೈಲ್ವೆ ಆದರ್ಶಪ್ರಾಯವಾದ ಕೆಲಸಗಳನ್ನು ಮಾಡಿದೆ ಮತ್ತು ದೇಶದ ಆರ್ಥಿಕ ಚೇತರಿಕೆಗೆ ಮುಂದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. 2020-21ನೇ ಸಾಲಿನಲ್ಲಿ 1,233 ಮಿಲಿಯನ್ ಟನ್ ಮೂಲದ ಸರಕುಗಳನ್ನು ಲೋಡ್ ಮಾಡಲಾಯಿತು ಮತ್ತು 6015 ಕಿ.ಮೀ ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ. ರೈಲ್ವೆ ಈಗ ‘ಗ್ರಾಹಕ ಕೇಂದ್ರಿತ’ ಆಗಿದೆ ಮತ್ತು ಸಂಸ್ಥೆಯ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಸರಾಸರಿ ಸರಕು ರೈಲು ವೇಗವು 44 ಕಿ.ಮೀ ವೇಗಕ್ಕೆ ದ್ವಿಗುಣಗೊಂಡಿದೆ ಮತ್ತು ಪ್ರಯಾಣಿಕರ ರೈಲುಗಳ ಸಮಯಪಾಲನೆ 96% ಮಟ್ಟದಲ್ಲಿದೆ.
ಕಳೆದ 2 ವರ್ಷಗಳಲ್ಲಿ ಪ್ರಯಾಣಿಕರ ಸಾವುನೋವುಗಳು ಮತ್ತು ಪರಿಣಾಮಕಾರಿ ಅಪಘಾತಗಳಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಸರಕು ಸಾಗಣೆ, ವಿದ್ಯುದ್ದೀಕರಣ, ಸುರಕ್ಷತೆ, ಸಮಯಪ್ರಜ್ಞೆಯ ನಿಯತಾಂಕಗಳಲ್ಲಿ ರೈಲ್ವೆಯ ಉನ್ನತ ಸಾಧನೆಯನ್ನು ಮಾನ್ಯ ಸಚಿವರು ಶ್ಲಾಘಿಸಿ ‘ ಹೊಸ ದಾಖಲೆಗಳು ಹಳತನ್ನು ಮುರಿಯುತ್ತವೆ’ ಎಂದು ಹೇಳಿದ್ದಾರೆ. ನಾವು ಹಳೆಯ ದಾಖಲೆಗಳನ್ನು ಮುರಿದು, ದೊಡ್ಡ ಗುರಿಗಳನ್ನು ಸಾಧಿಸಿ, ಆದರ್ಶಪ್ರಾಯರಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ನಮ್ಮ ಕಾರ್ಯಕ್ಷಮತೆ ಇತರರಿಗೆ ಉದಾಹರಣೆಯಾಗುವುದಲ್ಲದೆ ಭಾರತೀಯ ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ನೀಡುತ್ತದೆ ಎಂದು ಮಾನ್ಯ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
– ನೈಋತ್ಯ ರೈಲ್ವೆ, ಹುಬ್ಬಳ್ಳಿ