ಮನೌಸ್(ಬ್ರೆಜಿಲ್), ಸೆ.17- ಬ್ರೆಜಿಲ್ ದೇಶದ ಉತ್ತರ ಅಮೆಜಾನ್ ರಾಜ್ಯದಲ್ಲಿ ಸಣ್ಣ ವಿಮಾನ ಪಥನಗೊಂಡು 14 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ರಾಜಧಾನಿ ಮನೌಸ್‍ನಿಂದ ಸುಮಾರು 400 ಕಿಮೀ ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ.
ವಿಮಾನದಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗಳಿದ್ದರೂ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಅಮೆಜನಾಸ್‍ನ ಗವರ್ನರ್ ವಿಲ್ಸನ್ ಲಿಮಾ ಸಂತಾಪ ವ್ಯಕ್ತಪಡಿಸಿದ್ದಾರೆ. ಮನೌಸ್‍ನಿಂದ ಬಾರ್ಸೆಲೋಸ್‍ಗೆ ಹೊರಟ್ಟಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಮೃತಪಟ್ಟವರಲ್ಲಿ ಅಮೆರಿಕದ ನಾಗರಿಕರು ಕೂಡ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರತಿಯೊಂದು ಧರ್ಮವು ನಂಬಿಕೆ ಮೇಲೆ ಸ್ಥಾಪಿತವಾಗಿದೆ : ಮದ್ರಾಸ್ ಹೈಕೋರ್ಟ್
ಭಾರೀ ಮಳೆಯ ನಡುವೆಯೇ ವಿಮಾನ 90 ನಿಮಿಷಗಳ ಯಾನ ಆರಂಭಿಸಿತ್ತು. ತುರ್ತು ಲ್ಯಾಂಡಿಂಗ್ ಮಾಡಲು ಹೋಗಿ ಅಪಘಾತ ಸಂಭವಿಸಿರಬಹುದು ಎಂದೂ ಕೂಡ ಶಂಕಿಸಲಾಗಿದೆ.
ಗೌಪ್ಯತೆಯ ಕಾರಣದಿಂದಾಗಿ ನಾವು ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಮನೌಸ್ ಏರೋಟ್ಯಾಕ್ಸಿ ಏರ್‍ಲೈನ್ ಹೇಳಿದೆ. ತನಿಖೆ ಮುಂದುವರೆದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದೆ.
Planecrash, #Brazil, #Amazonstate, #14dead,