ಹೊತ್ತಿ ಉರಿದ ಪ್ಲಾಸ್ಟಿಕ್ ಗೋದಾಮು : ಅಪಾರ ಪ್ರಮಾಣದ ನಷ್ಟ

Social Share

ಬೆಂಗಳೂರು, ಮಾ.10- ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಅಪಾರ ನಷ್ಟ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿ ಸಿಲ್ಲ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮೋದ್ ಲೇಔಟ್‍ನ ಬಯಲು ಪ್ರದೇಶದಲ್ಲಿನ ಪ್ಲಾಸ್ಟಿಕ್ ಗೋದಾಮಿನಲ್ಲಿ ಈ ಬೆಂಕಿ ಅವಘಡ ರಾತ್ರಿ ಸಂಭವಿಸಿದೆ.

ಈ ಗೋದಾಮಿನಲ್ಲಿ ಶಿಥಿಲಗೊಂಡ ಪ್ಲಾಸ್ಟಿಕ್‍ಗಳು, ಸ್ಕ್ರ್ಯಾಪ್‍ಗಳು, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಗುಜರಿ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಈ ಗೋದಾಮು ಪಕ್ಕದಲ್ಲೇ ನಿರ್ಮಿಸಿಕೊಂಡಿರುವ ಶೀಟ್ ಶೆಡ್‍ಗಳಲ್ಲಿ ಹಲವಾರು ನಿವಾಸಿಗಳು ವಾಸವಾಗಿದ್ದಾರೆ.

BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್

ರಾತ್ರಿ 11.45ರ ಸುಮಾರಿನಲ್ಲಿ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆ ಆವರಿಸಿದೆ. ಇದನ್ನು ಗಮನಿಸಿದ ಅಕ್ಕ-ಪಕ್ಕದವರು ತಕ್ಷಣ ಬಿಬಿಎಂಪಿಗೆ ವಿಷಯ ತಿಳಿಸಿದ್ದಾರೆ. ಬಿಬಿಎಂಪಿ ಮಾರ್ಷಲ್‍ಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಶೆಡ್‍ಗಳಲ್ಲಿ ಮಲಗಿದ್ದವರನ್ನು ಎಬ್ಬಿಸಿ ಹೊರಗೆ ಕಳುಹಿಸಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುಮಾರು 10 ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಬೆಂಕಿಯ ಕೆನ್ನಾಲಿಗೆ ಇಡೀ ಗೋದಾಮು ಆವರಿಸಿಕೊಂಡಿದ್ದರಿಂದ ಸಿಬ್ಬಂದಿ ಹರಸಾಹಸ ಪಟ್ಟು ಇಂದು ಮುಂಜಾನೆ 6 ಗಂಟೆಯವರೆಗೂ ಸತತವಾಗಿ ಬೆಂಕಿಯನ್ನು ನಂದಿಸಿ ತಹಬದಿಗೆ ತರಲು ಯಶಸ್ವಿಯಾದರು.

ಅಗ್ನಿವೀರರಿಗೆ ಬಿಎಸ್‍ಎಫ್‍ನಲ್ಲೂ ಶೇ.10ರಷ್ಟು ಮೀಸಲಾತಿ

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೋದಾಮಿನಲ್ಲಿ ಬೆಂಕಿ ಅವಘಡಕ್ಕೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಶಾರ್ಟ್ ಸೆಕ್ಯೂಟ್‍ನಿಂದಾಗಿದೆಯೋ ಅಥವಾ ಕಿಡಿಗೇಡಿಗಳ ಕೃತ್ಯವೇ ಅಥವಾ ಬೀಡಿ ಸೇದಿ ಅದರ ತುಂಡನ್ನು ಎಸೆದಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

plastic, warehouse, fire, Bengaluru,

Articles You Might Like

Share This Article