“ಸೂರ್ಯಕುಮಾರ್ ಅಂತಹ ಆಟಗಾರ100 ವರ್ಷಕ್ಕೆ ಒಬ್ಬರು ಸಿಕ್ತಾರೆ”

Social Share

ನವದೆಹಲಿ, ಜ. 9- ಶ್ರೀಲಂಕಾ ತಂಡದ ವಿರುದ್ಧ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ರಂತಹ ಸ್ಪೋಟಕ ಆಟಗಾರರು 100 ವರ್ಷಕ್ಕೆ ಒಬ್ಬರು ಸಿಕ್ತಾರೆ ಎಂದು ವಿಶ್ವಕಪ್ ನಾಯಕ ಕಪಿಲ್ ದೇವ್ ಅವರು ಬಣ್ಣಿಸಿದ್ದಾರೆ.

32 ವರ್ಷದ ಸೂರ್ಯ ಕುಮಾರ್ ಯಾದವ್ ಅವರು ಶ್ರೀಲಂಕಾ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ 51 ಎಸೆತಗಳಲ್ಲಿ 7 ಸಿಕ್ಸರ್, 9 ಬೌಂಡರಿಗಳಿಂದ ಅಜೇಯ 112 ರನ್ ಗಳಿಸಿದ್ದರು. ಅವರ ಈ ಸ್ಪೋಟಕ ಆಟದಿಂದಾಗಿ ಭಾರತ ತಂಡವು 91 ರನ್ಗಳಿಂದ ಗೆದ್ದು ಟಿ 20 ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು.

ಸೂರ್ಯಕುಮಾರ್ ಅವರ ಆಟವನ್ನು ಒಂದೆರಡು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ. ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಘಟಾನುಘಟಿ ಆಟಗಾರರನ್ನು ನೋಡಿದ್ದೀರಿ, ಆದರೆ ಇವರೆಲ್ಲಗಿಂತಲೂ ವಿಭಿನ್ನ ಶಾಟ್ಸ್ ಆಡುವ ಮೂಲಕ ಸೂರ್ಯಕುಮಾರ್ ಬೌಲರ್ಗಳ ನಿದ್ದೆ ಕೆಡಿಸಿದ್ದಾರೆ' ಎಂದು ಕಪಿಲ್ದೇವ್ ಹೇಳಿದ್ದಾರೆ. ಬ್ಯಾಟ್ಸ್ಮನ್ಗಳನ್ನು ಕಾಡಲು ಬೌಲರ್ಗಳು ಫೈನ್ ಲೆಗ್ನಲ್ಲಿ ಚೆಂಡನ್ನು ಹೆಚ್ಚಾಗಿ ಎಸೆಯುತ್ತಾರೆ,

ಕಾಂಗ್ರೆಸ್‍ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ

ಆದರೆ ಸೂರ್ಯಕುಮಾರ್ ಯಾದವ್ ಅವರು ತಮ್ಮ ಲ್ಯಾಪ್ ಶಾಟ್ಸ್ ತಂತ್ರ ಬಳಸಿ ಚೆಂಡನ್ನು ಬೌಂಡರಿ ಗೆರೆ ಮುಟ್ಟಿಸಿದರೆ ಬೌಲರ್ಗಳು ತಾನೇ ಏನು ಮಾಡಬೇಕು, ಸೂರ್ಯಕುಮಾರ್ ಯಾದವ್ ಬೌಲರ್ಗಳು ಎಸೆಯುವ ಚೆಂಡನ್ನು ಉತ್ತಮ ಲೈನ್ ಆ್ಯಂಡ್ ಲೆನ್ತ್ ಮೂಲಕ ಹೊಡೆಯುವ ತಂತ್ರ ಕಲಿತಿರುವುದರಿಂದ ಬೌಲರ್ಗಳ ಎದುರು ಮೇಲುಗೈ ಸಾಧಿಸಿದ್ದಾರೆ’ ಎಂದು ಕಪಿಲ್ ದೇವ್ ಹೇಳಿದ್ದಾರೆ.

`ಒಬ್ಬ ಬ್ಯಾಟ್ಸ್ಮನ್ ಸತತ ಉತ್ತಮ ಸ್ಟ್ರೈಕ್ರೇಟ್ ಇಟ್ಟುಕೊಂಡು ಬ್ಯಾಟಿಂಗ್ ಮಾಡುವುದು ತುಂಬಾ ವಿರಳ, ನಾನು ಎಬಿಡಿವಿಲಿಯರ್ಸ್, ವಿವಿನ್ ರಿಚಡ್ರ್ಸ್, ಸಚಿನ್ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಿಕ್ಕಿ ಪಾಂಟಿಂಗ್ರಂತಹ ಬೆರಳೆಣಿಕೆ ಆಟಗಾರರು ಮಾತ್ರ ಸೂರ್ಯಕುಮಾರ್ರಂತೆ ಚೆಂಡನ್ನು ನಿಖರವಾಗಿ ಆಡುತ್ತಿದ್ದರು, ಸೂರ್ಯಕುಮಾರ್ರ ಆಟಕ್ಕೆ ಹ್ಯಾಟ್ಸಾಫ್’ ಎಂದು ಕಪಿಲ್ದೇವ್ ಹೇಳಿದ್ದಾರೆ.

ಟೆನ್ನಿಸ್ನಲ್ಲಿ ಚೆಂಡು ನೆಲದ ಯಾವ ಭಾಗಕ್ಕೆ ಪಿಚ್ ಆಗುತ್ತದೆ ಎಂಬ ಮೆಂಡ್ಸೆಟ್ನೊಂದಿಗೆ ಆಡಬೇಕಾಗುತ್ತದೆ, ಸೂರ್ಯಕುಮಾರ್ ಕೂಡ ಬೌಲರ್ಗಳ ಮನಸ್ಥಿತಿ ಅರಿತುಕೊಂಡೇ ಆಡುತ್ತಾರೆ, ಇಂತಹ ಆಟಗಾರರು ಶತಕಕ್ಕೆ ಒಬ್ಬರು ದೊರೆಯುತ್ತಾರೆ ಎಂದು ಹೇಳಿದರು.

Players, like, Suryakumar Yadav, come, only, once, century, Kapil Dev,

Articles You Might Like

Share This Article