ಜೌಗು ಮೈದಾನದಲ್ಲಿ ಫುಟ್ಬಾಲ್ ಆಡೋದು ಹೇಗೆ ಗೊತ್ತಾ..?

ds-1

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ರಷ್ಯಾದಲ್ಲಿ ನಡೆಯುವ ಕಾಲ್ಚೆಂಡಿನ ಕ್ರೀಡೆಗಳಿಗೆ ಭರದ ಸಿದ್ಧತೆಗಳು ನಡೆಯುತ್ತಿದ್ದರೆ, ದೇಶದ ಉತ್ತರ ಭಾಗದಲ್ಲಿ ಫುಟ್ಬಾಲ್ ಪ್ರೇಮಿಗಳು ಜೌಗು ಪ್ರದೇಶದ ಕೆಸರುಮಯ ಮೈದಾನದಲ್ಲಿ ಸಾಕರ್ ಆಡಿ ಗಮನ ಸೆಳೆದರು.  ರಷ್ಯಾದಲ್ಲಿ ಜೂನ್ 14ರಿಂದ ಜುಲೈ 15ರವರೆಗೆ ನಡೆಯುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ಫಿಫಾ ನಿಯೋಗವು ಹೊಸ ಮತ್ತು ಉತ್ತಮ ಮೈದಾನಗಳ ಪರಿಶೀಲನೆಯಲ್ಲಿ ತೊಡಗಿದ್ದರೆ, ಇತ್ತ ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಕ್ರೀಡಾ ಪ್ರೇಮಿಗಳು ಎಂಥ ಪರಿಸ್ಥಿತಿ ಯಲ್ಲಿಯೂ ಫುಟ್ಬಾಲ್ ಆಡಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.

ds

ಜೌಗು ಪ್ರದೇಶದ ಮೊಣಕಾಲುವರೆಗೆ ಕೆಸರು ತುಂಬಿದ ಮೈದಾನದಲ್ಲಿ ಕ್ರೀಡಾ ಉತ್ಸಾಹಕರು ಫುಟ್ಬಾಲ್ ಆಡಿ ಗಮನಸೆಳೆದರು.  ಫಿನ್‍ಲೆಂಡ್‍ನಲ್ಲಿ ಜೌಗು ಅಥವಾ ಕೆಸರು ಫುಟ್ಬಾಲ್ ಆಟವನ್ನು ಪರಿಚಯಿಸಲಾಯಿತು. ಕ್ರೀಡಾಪಟುಗಳ ದೈಹಿಕ ಸಾಮಥ್ರ್ಯ ಹೆಚ್ಚಿಸಲು ತರಬೇತಿ ನೀಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸ ಲಾಯಿತು. ಫುಟ್ಬಾಲ್ ಪರಿಶ್ರಮ ಕ್ರೀಡೆ. ಸಾಮಾನ್ಯ ಮೈದಾನದಲ್ಲಿ ಇದನ್ನು ಆಡುವುದು ಕಷ್ಟ. ಅದರಲ್ಲೂ ಕೆಸರಿನಂಥ ಕೊಳದಲ್ಲಿ ಇದನ್ನು ಆಡುವುದು ಇನ್ನೂ ಕಷ್ಟ ಎನ್ನುತ್ತಾರೆ ಆಟಗಾರ ಅಂಟೋಲಿ ಸರ್ಗೆಯೆವ್. ಮತ್ತೊಬ್ಬ ಆಟಗಾರ ಅಲೆಕ್ಸಿ ಗುರ್ಯನೋವ್ ಹೇಳುವಂತೆ ಇಂಥ ಪರಿಸರದಲ್ಲಿ ಫುಟ್ಬಾಲ್ ಆಡಿ ತರಬೇತಿ ಪಡೆದರೆ ಸಾಮಾನ್ಯ ಕ್ರೀಡಾಂಗಣದಲ್ಲಿ ಕ್ರೀಡೆ ಸುಲಭ.

Sri Raghav

Admin