ವಿವಾಹಿತ ಪುರುಷರ ರಕ್ಷಣೆಗೆ ಬೇಕಂತೆ ‘ರಾಷ್ಟ್ರೀಯ ಪುರುಷ ಆಯೋಗ’

Social Share

ನವದೆಹಲಿ,ಮಾ.16- ಕೌಟುಂಬಿಕ ದೌರ್ಜನ್ಯದಿಂದ ಖಿನ್ನತೆಗೊಳಗಾಗಿ ವಿವಾಹಿತ ಪುರುಷರ ರಕ್ಷಣೆಗೆ ರಾಷ್ಟ್ರೀಯ ಪುರುಷ ಆಯೋಗ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.
ಅನೇಕ ಸಂದರ್ಭಗಳಲ್ಲಿ ನೊಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಇದನ್ನು ತಡೆಯಲು ಮಾರ್ಗಸೂಚಿ ರೂಪಿಸಬೇಕು ಎಂದು ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ಹೆಚ್ಚುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆ ತಡೆಗೆ ಮತ್ತು ಕೌಟುಂಬಿಕ ಕಿರುಕುಳದಿಂದ ಬೇಸತ್ತಿರುವ ಪುರುಷರ ದೂರುಗಳನ್ನು ಸ್ವೀರಿಸಲು ಹಾಗೂ ತನಿಖೆ ಮೂಲಕ ನ್ಯಾಯ ಒದಗಿಸಲು ರಾಷ್ಟ್ರೀಯ ಮಹಿಳಾ ಆಯೋಗದಂತೆ ರಾಷ್ಟ್ರೀಯ ಪುರುಷ ಆಯೋಗ ರಚಿಸಲು ಕೇಂದ್ರ ಕಾನೂನು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಸಿಎಂ ಸಮ್ಮತಿ

ಕಳೆದ 2021ರಲ್ಲಿ ದೇಶಾದ್ಯಂತ 1,64,033 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 81,063 ಜನರು ವಿವಾಹಿತ ಪುರುಷರಾಗಿದ್ದರೆ, 28,680 ಜನರು ವಿವಾಹಿತ ಮಹಿಳೆಯರು ಆಗಿದ್ದಾರೆ ಎಂದು ಅಂಕಿ ಅಂಶ ನೀಡಲಾಗಿದೆ.

ಕೌಟುಂಬಿಕ ಸಮಸ್ಯೆಗಳಿಂದ ಶೇ 33.2ರಷ್ಟು, ಮದುವೆ ಸಂಬಂತ ಸಮಸ್ಯೆಗಳಿಂದಾಗಿ ಶೇ. 4.8ರಷ್ಟು ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಒಟ್ಟು 1,18,979 ಪುರುಷರು (72%) ಮತ್ತು 45,026 ಮಹಿಳೆಯರು (27%) ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊದ ವರದಿಯ ಅಂಕಿ-ಅಂಶಗಳನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

#Plea #SupremeCourt, #seeks, #NationalCommissionforMen, #marriedmen,

Articles You Might Like

Share This Article