ಮಂಗರ್ ಧಾಮ್ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿದ ಪ್ರಧಾನಿ ಮೋದಿ

Social Share

ಮಂಗರ್, ನ.1- ರಾಜಸ್ಥಾನದ ಬನ್ಸವಾರ ಜಿಲ್ಲೆಯ ಮಂಗರ್ ಧಾಮ್ ಪ್ರದೇಶವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಿದ್ದಾರೆ.

ರಾಜಸ್ಥಾನ ಮತ್ತು ಗುಜರಾತ್‍ನ ಗಡಿ ಭಾಗದ ಮಂಗರ್‍ನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್, ಗುಜರಾತ್‍ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬುಡಕಟ್ಟು ಸಮುದಾಯದ ಜನರ ಸಾಮೂಹಿಕ ಹತ್ಯೆಯಾದ ಮಂಗರ್‍ಧಾಮ್ ಪ್ರದೇಶವನ್ನು ಪ್ರಧಾನಿ ಅವರು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವುದಾಗಿ ಹೇಳಿದರು.

ಬ್ರಿಟಿಷ್ ಆಡಳಿತದ ವಿರುದ್ದ ಸಮಾಜ ಸುಧಾರಕ ಗೋವಿಂದ ಗುರು ನೇತೃತ್ವದಲ್ಲಿ 1913ರಲ್ಲಿ ಸಾವಿರಾರು ಆದಿವಾಸಿಗಳು ಮತ್ತು ಬುಡಕಟ್ಟು ಜನರು ಸಮಾವೇಶಗೊಂಡಿದ್ದರು. ಆ ವೇಳೆ ದಾಳಿ ನಡೆಸಿದ ಬ್ರಿಟಿಷ್ ಪ್ರೇರಿತ ಸೇನೆ ಸಾಮೂಹಿಕ ಹತ್ಯಾಕಾಂಡ ನಡೆಸಿತ್ತು. 1500ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು ಎಂದು ಐತಿಹಾಸಿಕ ದಾಖಲೆಗಳಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಭೂಪೇಂದ್ರ ಪಟೇಲ್ ಅವರು, 1913ರಲ್ಲಿ ಮಂಗರ್‍ನಲ್ಲಿ ನಡೆದ ಹತ್ಯಾಕಾಂಡ ಪಂಜಾಬ್‍ನ ಜಲಿಯನ್‍ವಾಲಾಬಾಗ್‍ಗಿಂತಲೂ ಭೀಕರವಾಗಿತ್ತು ಎಂದು ವಿಷಾದಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್ ಗೆಲ್ಹೋಟ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಯಾವುದೇ ಮೂಲೆಗೆ ಹೋದರು ಗೌರವಾಧರಗಳು ಸಿಗುತ್ತಿವೆ.

ಕೆನಡಾದಲ್ಲಿ ಬಹುಭಾಷಾ ನಟಿ ರಂಭಾ ಕಾರು ಅಪಘಾತ

ಅದಕ್ಕೆ ಕಾರಣವೆನೆಂದರೆ ಅವರು ಪ್ರಜಾಪ್ರಭುತ್ವದ ಬೇರುಗಳು ಭದ್ರವಾಗಿರುವ ದೇಶದ ಪ್ರಧಾನಿಯಾಗಿದ್ದಾರೆ ಎಂಬುದು. ಇದು ಗಾಂ ಅವರ ಭಾರತ, ನಮ್ಮಲ್ಲಿ 75 ವರ್ಷಗಳಿಂದಲೂ ಪ್ರಜಾಪ್ರಭುತ್ವ ಆಳವಾಗಿದೆ. ಜನರು ಇದನ್ನು ತಿಳಿದುಕೊಂಡಿದ್ದಾರೆ ಮತ್ತು ಪ್ರಧಾನಿಗೆ ಗೌರವ ನೀಡುತ್ತಿದ್ದಾರೆ ಎಂದರು.

Articles You Might Like

Share This Article