ಬೆಂಗಳೂರು,ಫೆ.27- ಪ್ರಧಾನಿ ನರೇಂದ್ರಮೋದಿ ಅವರು ಇಂದು ರಾಜ್ಯದ 4996924 ರೈತ ಕುಟುಂಬಗಳಿಗೆ 999.38 ಕೋಟಿ ರೂ.ಗಳನ್ನು ಆರ್ಥಿಕ ನೆರವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತನ್ನು ನೇರವಾಗಿ ಡಿಬಿಟಿ ಮುಖಾಂತರ ಖಾತೆಗಳಿಗೆ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಕೇಂದ್ರ ಸರ್ಕಾರದ ಪಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕಳೆದ ದಿನಾಂಕ 01.12.2018 ರಿಂದ ಅನ್ವಯ ವಾಗುವಂತೆ ಫೆಬ್ರವರಿ 2019ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ
ಈ ಯೋಜನೆಯಡಿ ವಾರ್ಷಿಕ 6000ರೂ.ಗಳ ಆರ್ಥಿಕ ನೆರವನ್ನು 2000 ರೂ.ಗಳಂತೆ ಮೂರು ಕಂತುಗಳಲ್ಲಿ
ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ.
ಯೋಜನೆಯ ಪ್ರಾರಂಭದಿಂದ ಇಲ್ಲಿಯವರೆಗೆ 10933.20 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರಿಗೆ ನೀಡಲಾಗಿದೆ.
PM Kisan, Samman, Nidhi, released, PM Modi,