ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್‌ಗೆ ಸಾಕ್ಷಿಯಾದ ಮೋದಿ-ಅಲ್ಬನಿಸ್

Social Share

ಅಹಮದಾಬಾದ್,ಮಾ.9- ಗುಜರಾತ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗೂ ಅಂತೀಮ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನಿಸ್ ಸಾಕ್ಷಿಯಾದರು.

ಕ್ರೀಡಾಂಗಣಕ್ಕೆ ಆಗಮಿಸಿದ ಮೋದಿ ಹಾಗೂ ಅಲ್ಬನಿಸ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಾತ್ರವಲ್ಲ ಕ್ರೀಡಾಂಗಣದಲ್ಲಿ ರಥದಲ್ಲಿ ಸಾಗುತ್ತ ಪ್ರೇಕ್ಷಕರತ್ತ ಮೋದಿ ಹಾಗೂ ಅಲ್ಬನಿಸ್ ಕೈ ಬೀಸಿದರು.
ನಂತರ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್‍ಗೆ ಟೆಸ್ಟ್ ಕ್ಯಾಪ್‍ಗಳನ್ನು ಹಸ್ತಾಂತರಿಸಿ ಹಸ್ತಲಾಘವ ಮಾಡಿದರು.

ನಿನ್ನೆಯಷ್ಟೇ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನಿಸ್ ಅವರು ಅಹಮದಾಬಾದ್‍ನಲ್ಲಿದ್ದು, ಇಂದು ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ನಂತರ ಅವರು ಭಾರತದಲ್ಲಿ ನನಗೆ ದೊರೆತ ಸ್ವಾಗತ ಅಭೂತಪೂರ್ವವಾಗಿತ್ತು ಎಂದು ಟ್ವಿಟ್ ಮಾಡಿದ್ದಾರೆ.

ಅಲ್ಬನೀಸ್ ಅವರು ತಮ್ಮ ಪ್ರವಾಸವು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಗಾಢಗೊಳಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ನಮ್ಮ ಪ್ರದೇಶದಲ್ಲಿ ಸ್ಥಿರತೆ ಮತ್ತು ಬೆಳವಣಿಗೆಗೆ ಶಕ್ತಿಯಾಗಿದೆ ಎಂದು ಹೇಳಿದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಆಸ್ಟ್ರೇಲಿಯಾದ ಪ್ರಧಾನಿಯೊಂದಿಗೆ ಮಹಾತ್ಮ ಗಾಂಧಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಸರ್ವ ರಂಗದಲ್ಲೂ ಮಹಿಳೆಯರ ಸೇವೆ ಅನನ್ಯ : ಸಿಎಂ ಪ್ರಶಂಸೆ

ಎರಡೂ ದೇಶಗಳನ್ನು ಒಂದಾಗಿಸುವ ಶಕ್ತಿ ಕ್ರಿಕೆಟ್‍ಗಿದೆ. ಅಹಮದಾಬಾದ್‍ನಲ್ಲಿ ಪಂದ್ಯಗಳ ಮೊದಲ ದಿನದಂದು ಭಾರತ ಮತ್ತು ಆಸ್ಟ್ರೇಲಿಯಾದ ನಾಯಕರನ್ನು ನೋಡುವುದು ಉತ್ತಮವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಹೈ ಕಮಿಷನರ್ ಬ್ಯಾರಿ ಓ’ಫಾರೆಲ್ ಹೇಳಿದ್ದಾರೆ.

ಬಾರ್ಡರ್ -ಗವಾಸ್ಕರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಅಂತಿಮ ಟೆಸ್ಟ್‍ನಲ್ಲಿ ಗೆಲುವು ಸಾಧಿಸಿದರೆ ತಂಡವು ಐಸಿಸಿ ವಿಶ್ವ ಟೆಸ್ಟ ಚಾಂಪಿಯನ್‍ಶಿಪ್‍ನ ಫೈನಲ್‍ಗೆ ಅರ್ಹತೆ ಪಡೆಯುವುದನ್ನು ಖಚಿತಪಡಿಸುತ್ತದೆ.

Articles You Might Like

Share This Article