ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ, ಶುಭ ಕೋರಿದ ಗಣ್ಯರು

Social Share

ಬೆಂಗಳೂರು,ಸೆ.17- ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬಕ್ಕೆ ರಾಜ್ಯದ ವಿವಿಧ ಗಣ್ಯರು ಶುಭ ಹಾರೈಸಿದ್ದಾರೆ.
ರಾಜ್ಯಪಾಲ ತಾವರ್‍ಚಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಪ್ರಧಾನಿಗೆ ಶುಭ ಕೋರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರಾದ ಕೆ.ಗೋಪಾಲಯ್ಯ, ಶ್ರೀರಾಮುಲು, ಆರ್.ಅಶೋಕ್, ಅರಗ ಜ್ಞಾನೇಂದ್ರ, ವಿ.ಸೋಮಣ್ಣ ಡಾ.ಅಶ್ವಥ್ ನಾರಾಯಣ, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಮೋದಿಯವರಿಗೆ ದೀರ್ಘಾಯುಸು ಲಭಿಸಿ ಇನ್ನಷ್ಟು ರಾಷ್ಟ್ರ ಸೇವೆ ಮಾಡುವ ಸೌಭಾಗ್ಯ ಸಿಗಲಿ ಎಂದು ಆಶಿಸಿದ್ದಾರೆ.

ನಮ್ಮೆಲ್ಲರ ನೆಚ್ಚಿನ ನಾಯಕರು, ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮದಿನಾಚರಣೆ. ಭಾರತ ದೇಶದ ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ, ಗುಜರಾತ್‍ನ ಮುಖ್ಯಮಂತ್ರಿಗಳಾಗಿ, ಪ್ರಧಾನ ಮಂತ್ರಿಗಳಾಗಿ ಅವರ ಸಾರ್ವಜನಿಕ ಜೀವನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಧಾನ ಮಂತ್ರಿಗಳಾಗಿ ಕಳೆದ 8 ವರ್ಷಗಳಲ್ಲಿ ಇಡೀ ಭಾರತ ದೇಶದ ಅಭಿವೃದ್ಧಿ ಪಥ ಮುನ್ನಡೆಸಿದ್ದಾರೆ. ಸಬ್ ಕಾ ಸಾತ್ ಸಬ್ ಕ ವಿಶ್ವಾಸ್ ಎಂಬ ಮಂತ್ರದೊಂದಿಗೆ ಆತ್ಮನಿರ್ಭರ ಮೂಲಕ, ರೈತರಿಗೆಗಾಗಿ ಕಿಸಾನ್ ಸಮ್ಮಾನ್ ಹೀಗೆ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಮಾಡುವ ಮೂಲಕ ಎಲ್ಲಾ ಭಾರತೀಯರ ಜನಮಾನಸದಲ್ಲಿದ್ದಾರೆ ಎಂದು ಪ್ರಶಂಸಿಸಿದರು.

ಮುಂದಿನ ಒಂದು ತಿಂಗಳು ಸೇವಾ ತಿಂಗಳು ಎಂದು ಬೇರೆ ಬೇರೆ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸೇವೆಗಳನ್ನು ಮಾಡಲಿದ್ದೇವೆ ಎಂದರು. ಪ್ರಧಾನಿ ಮೋದಿಯವರ ದೂರದೃಷ್ಟಿ ಮತ್ತು ಬದ್ಧತೆ ಎಲ್ಲರಿಗೂ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

Articles You Might Like

Share This Article