ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾದ ಮನವೊಲಿಸಲಿಸಬೇಕು : ಅಮೆರಿಕ

Social Share

ನವದೆಹಲಿ,ಫೆ.11- ಉಕ್ರೇನ್ ಯುದ್ಧವನ್ನು ನಿಲ್ಲಿಸಲು ರಷ್ಯಾಗೆ ಇನ್ನೂ ಸಮಯವಿದೆ ಯುದ್ದ ನಿಲ್ಲಿಸುವಂತೆ ರಷ್ಯಾ ಮನವೊಲಿಸುವ ಕಾರ್ಯವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.

ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರಿಗೆ ಇನ್ನೂ ಸಮಯವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿ ಮೋದಿ ಅವರು ಕೈಗೊಳ್ಳಲು ಸಿದ್ಧರಿರುವ ಯಾವುದೇ ಪ್ರಯತ್ನಗಳ ಬಗ್ಗೆ ಮಾತನಾಡಲು ನಾವು ಮುಕ್ತ ಅವಕಾಶ ನೀಡುತ್ತೇನೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ವಿಶ್ವ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿರುವ ರಷ್ಯಾ-ಉಕ್ರೇನ್ ಯುದ್ಧದ ಅಂತ್ಯಕ್ಕೆ ಕಾರಣವಾಗುವ ಯಾವುದೇ ಪ್ರಯತ್ನಗಳನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅವರು ಹೇಳಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಸಭೆ ನಡೆಸಿದ ಕೆಲವು ದಿನಗಳ ನಂತರ ಶ್ವೇತಭವನದಿಂದ ಇಂತಹ ಹೇಳಿಕೆ ಬಿದ್ದಿರುವುದು ವಿಶೇಷವಾಗಿದೆ.

ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ: ಲಾಲೂ ಪುತ್ರಿಯ ಭಾವನಾತ್ಮಕ ಟ್ವಿಟ್

ಕಳೆದ ವರ್ಷ, ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಇಂದಿನ ಯುಗವು ಯುದ್ಧವಲ್ಲ ಮತ್ತು ನಾನು ಕರೆಯಲ್ಲಿ ನಿಮ್ಮೊಂದಿಗೆ ಮಾತನಾಡಿದ್ದೇನೆ. ನಾವು ಹೇಗೆ ಪ್ರಗತಿ ಸಾಧಿಸಬಹುದು ಎಂಬುದರ ಕುರಿತು ಮಾತನಾಡಲು ಇಂದು ನಮಗೆ ಅವಕಾಶ ಸಿಗುತ್ತದೆ. ಶಾಂತಿಯ ಹಾದಿಯಲ್ಲಿ ಮುಂದೆ ಸಾಗೋಣ ಎಂದು ಪುಟಿನ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ಮುಂಬೈನಲ್ಲಿ 2 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಉಕ್ರೇನ್ ವಿನಾಶಕ್ಕೆ ಪುಟಿನ್ ಕಾರಣ. ಉಕ್ರೇನಿಯನ್ ಜನರು ಏನಾಗುತ್ತಿದ್ದಾರೆ ಎಂಬುದಕ್ಕೆ ಜವಾಬ್ದಾರರಾಗಿರುವ ವ್ಯಕ್ತಿ ವ್ಲಾಡಿಮಿರ್ ಪುಟಿನ್ ಮತ್ತು ಅವರು ಇದೀಗ ಅದನ್ನು ನಿಲ್ಲಿಸಬಹುದು ಎಂದು ಕಿರ್ಬಿ ಇಂದು ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

PM Modi, convince, Putin, end, hostilities, Ukraine, White House,

Articles You Might Like

Share This Article