ನವದೆಹಲಿ,ಸೆ.17- ಪ್ರಧಾನಿ ನರೇಂದ್ರಮೋದಿ ಅವರು ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದು, ಕಳೆದ 10 ವರ್ಷಗಳಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ಹಾಗೂ ಸಾಮಾಜಿಕ ಕಳಕಳಿಯ ಮೆರೆದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
2014ರ ಹುಟ್ಟುಹಬ್ಬದ ಸಂದರ್ಭದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಮ್ಮನ ಹೆಸರಿನಲ್ಲಿ 5001 ಹಣವನ್ನು ಜಮ್ಮು ಮತ್ತು ಕಾಶ್ಮೀರ ಪ್ರವಾಹ ಪರಿಹಾರ ನಿಗೆ ದೇಣಿಗೆ ನೀಡಿದ್ದರು.
2015ರಲ್ಲಿ ಸೇನಾ ಸ್ಮಾರಕಕ್ಕೆ ಭೇಟಿ ನೀಡುವ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವರು, 1965ರ ಭಾರತ-ಪಾಕ್ ಯುದ್ಧದಲ್ಲಿ ಹೋರಾಡಿದ್ದ ಭಾರತೀಯ ಯೋಧರು ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ಸ್ಮರಿಸಿದ್ದರು.
2016ರ ತಮ್ಮ 66ನೇ ಹುಟ್ಟುಹಬ್ಬದಲ್ಲಿ ವಿಶೇಷ ಚೇತನರನ್ನು ಭೇಟಿ ಮಾಡಿದ್ದರು. ಮೂಲಭೂತ ಶಾಲಾ ಅಗತ್ಯಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದ್ದರು. 2017ರಲ್ಲಿ ಗುಜರಾತ್‍ನಲ್ಲಿ ವಿದ್ಯಾರ್ಥಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಮೋದಿ ತಾಯಿ ಹೀರಾಬೆನ್ ಅವರೊಂದಿಗೆ ಬಹಳ ಹೊತ್ತು ಸಮಯ ಕಳೆದಿದ್ದರು. ಜೊತೆಗೆ ಮೆಗಾ ಸರ್ದಾರ್ ಸರೋವರ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಿದ್ದರು.
2018ರಲ್ಲಿ ತಮ್ಮ ಸಂಸತ್ ಕ್ಷೇತ್ರ ವಾರಣಾಸಿಯಲ್ಲಿ ಸಾಮಾನ್ಯ ನಾಗರಿಕರ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಲ್ಲದೆ ವಿದ್ಯಾರ್ಥಿಗಳಿಗೆ ಹಲವು ಉಡುಗೊರೆಗಳನ್ನು ನೀಡಿದ್ದರು.
ಚೈತ್ರಾ ಕುಂದಾಪುರ ಆರೋಗ್ಯ ಚೇತರಿಕೆ: ಯಾವುದೇ ಕ್ಷಣದಲ್ಲಾದರೂ ಡಿಸ್ಚಾರ್ಜ್
2019ರಲ್ಲಿ ತಾಯಿ ಹೀರಾಬೆನ್ ಅವರೊಂದಿಗೆ ಆಚರಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಮಯ ಕಳೆದಿದ್ದರು. 2020ರಲ್ಲಿ ಕರೋನಾ ವಿರುದ್ಧ ದೇಶ ಹೋರಾಡುತ್ತಿದ್ದ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಕೂಡ ಆಡಂಬರವಿಲ್ಲದೆ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದರು. ಈ ಸಂದರ್ಭವನ್ನು ಸೇವಾ ಸಪ್ತಾಹ ಎಂದು ಬಿಜೆಪಿ ಘೋಷಿಸಿತ್ತು.
2021ರಲ್ಲಿ 71ನೇ ಹುಟ್ಟುಹಬ್ಬವನ್ನು ಕೋವಿಡ್ ತಡೆಗಟ್ಟುವ ಸಂದೇಶದೊಂದಿಗೆ ಆಚರಿಸಿಕೊಂಡಿದ್ದು, ದೇಶಾದ್ಯಂತ ಒಂದೇ ದಿನ 2.26 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ದಾಖಲೆಯನ್ನು ನಿರ್ಮಿಸಲಾಗಿತ್ತು.
2022ರಲ್ಲಿ ಪ್ರಧಾನಿಯವರ ಜನ್ಮದಿನದ ಪ್ರಮುಖ ಅಂಶವೆಂದರೆ ಅಳಿವಿನಂಚಿನಲ್ಲಿರುವ ಚೀತಾಗಳನ್ನು ಭಾರತಕ್ಕೆ ತಂದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತರಲಾದ ಎಂಟು ಚೀತಾಗಳನ್ನು ಬಿಡುಗಡೆ ಮಾಡಿದ್ದರು.
ಸರ್ಕಾರದ ವಿರುದ್ಧ ಗುಡುಗಿದ ಬಿಎಸ್‍ವೈ
ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ನವಭಾರತದಲ್ಲಿ ವಿಶ್ವಕರ್ಮರ ಕೌಶಲ್ಯಗಳಿಗೆ ಗೌರವ ಸಮರ್ಪಣೆ, ಪಿಎಂ ವಿಶ್ವಕರ್ಮ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.
ಪ್ರತಿ ವರ್ಷವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಪ್ರಧಾನಿಗಳ ಹುಟ್ಟಹಬ್ಬ ಆಯೋಜಿಸುತ್ತಿದ್ದ ಬಿಜೆಪಿ ಈ ಬಾರಿ ಇಂದಿನಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಸೇವಾ ಪಖವಾಡ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಡಿ ಮೋದಿ ಸರ್ಕಾರದ 9 ವರ್ಷಗಳ ಅಕಾರಾವಯಲ್ಲಿನ ಸಾಧನೆಗಳನ್ನು ಎತ್ತಿ ಹಿಡಿಯುವ ವಿಶೇಷ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ.
PMModi, #celebrated, #73rd, #Birthday,