ರಾಷ್ಟ್ರಪತಿ ಚುನಾವಣೆ: ಸಂಸದರು, ಶಾಸಕರಿಂದ ಹಕ್ಕು ಚಲಾವಣೆ

Social Share

ನವದೆಹಲಿ,ಜು.18- ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ ನಡೆದಿದ್ದು, ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿರೋಧಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ.

ಇವರಲ್ಲಿ ಮುರ್ಮು ಅವರಿಗೆ ಹೆಚ್ಚು ಮತಗಳು ಚಲಾವಣೆಯಾಗಿದ್ದು, ವಿಜಯ ಮಾಲೆ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ.
ಇಂದು ಸಂಸತ್ ಭವನದಲ್ಲಿ ನಡೆದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ಹಾಗೂ ಅಂಗಪಕ್ಷಗಳ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.

ಮುರ್ಮು ಅವರ ಮತಗಳ ಪ್ರಮಾಣವು ಈಗ 61 ಪ್ರತಿಶತವನ್ನು ಮೀರುವ ಸಾಧ್ಯತೆಯಿದೆ. ಎನ್‍ಡಿಎ ಅಭ್ಯರ್ಥಿಯು ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದ ನಂತರ ಒಟ್ಟು 10,86,431 ಮತಗಳಲ್ಲಿ 6.67 ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ.
ಇವುಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳ 3.08 ಲಕ್ಷ ಮತಗಳು ಸೇರಿವೆ. ಬಿಜು ಜನತಾ ದಳ (ಬಿಜೆಡಿ) ಮತದಾರರಲ್ಲಿ ಸುಮಾರು 32,000 ಮತಗಳನ್ನು ಹೊಂದಿದೆ, ಇದು ಒಟ್ಟು ಮತಗಳ ಶೇ.2.9ರಷ್ಟಿದೆ.

ಮುರ್ಮು ಅವರು ಎಐಎಡಿಎಂಕೆ (17,200 ಮತಗಳು), ವೈಎಸ್‍ಆರ್ಸಿಪಿ (ಸುಮಾರು 44,000 ಮತಗಳು), ತೆಲುಗು ದೇಶಂ ಪಕ್ಷ (ಸುಮಾರು 6,500 ಮತಗಳು), ಶಿವಸೇನೆ (25,000 ಮತಗಳು) ಮತ್ತು ಜನತಾ ದಳ (ಜಾತ್ಯತೀತ) (ಸುಮಾರು 5,600) ಮತಗಳ ಬೆಂಬಲವನ್ನು ಪಡೆದಿದ್ದಾರೆ.

ಇದು ಕೇವಲ ನಾಮಕಾವಸ್ತೆ ಚುನಾವಣೆ ಎಂಬಂತಾಗಿದ್ದು,ದ್ರೌಪದಿ ಮುರ್ಮು ಅವರು ಸರಿಸುಮಾರು ಮೂರನೇ ಎರಡರಷ್ಟು ಮತಗಳನ್ನು ತಲುಪುವ ಸಾಧ್ಯತೆಯಿದೆ ಹಾಗೂ ಅವರು ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಯಶವಂತ್ ಸಿನ್ಹಾಗೆ ಕಾಂಗ್ರೆಸ್, ಟಿಎಂಸಿ, ಟಿಆರೆಸ್, ಎನ್‍ಸಿಪಿ, ಎಸ್‍ಪಿ, ಎನ್‍ಸಿಪಿ , ಎಎಪಿ ಮತ್ತಿತರ ಪಕ್ಷಗಳ ಬೆಂಬಲ ಇದ್ದರೂ ಕೂಡ ಎನ್‍ಡಿಎ ಅಭ್ಯರ್ಥಿಯನ್ನು ಪರಾಭವಗೊಳಿಸುವಷ್ಟು ಮತ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಯಶವಂತ್ ಸಿನ್ಹಾ ಪರವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲೋಕಸಭೆಯ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಅೀರ್ ಚೌಧರಿ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಮುಖಂಡರು ಮತ ಚಲಾಯಿಸಿದ್ದಾರೆ.

ಸಮರ್ಥ ಆಡಳಿತಗಾರ್ತಿ:
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಒಡಿಶಾ ಬಿಜೆಪಿ ನಾಯಕಿ ದ್ರೌಪದಿ ಮುರ್ಮು(64) ಅವರು ಆದಿವಾಸಿ ಜನಾಂಗದ ಜನಪ್ರಿಯ ಮಹಿಳಾ ನಾಯಕಿ ಮಾತ್ರವಲ್ಲ, ಝಾರ್ಖಂಡ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವ ಮೂಲಕ ತಾವೊಬ್ಬ ಸಮರ್ಥ ಆಡಳಿತಗಾರ್ತಿ ಎಂಬುದನ್ನೂ ಸಾಬೀತುಪಡಿಸಿದ್ದಾರೆ.

ಮೋದಿ ಟೀಕಾಕಾರ:

ಮೂಲತಃ ಯಶವಂತ ಸಿನ್ಹಾ ಐಎಎಸ್ ಅಧಿಕಾರಿ. ಬಿಹಾರ ಸರಕಾರದಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದರು. ಅನಂತರ ಕೇಂದ್ರದಿಂದ ವಿದೇಶಗಳಲ್ಲೂ ಜವಾಬ್ದಾರಿ ಹೊಂದಿದ್ದರು. ಜಯಪ್ರಕಾಶ ನಾರಾಯಣ ಅವರಿಂದ ಪ್ರೇರಿತ ರಾಗಿ ಸರಕಾರಿ ಹುದ್ದೆ ತೊರೆದು ರಾಜಕೀಯ ಜೀವನ ಆರಂಭಿಸಿದರು. 1989ರಲ್ಲಿ ಜನತಾದಳ ಸೇರಿ 90ರಿಂದ 91ರವರೆಗೆ ಕೇಂದ್ರ ಹಣಕಾಸು ಸಚಿವರಾಗಿದ್ದರು.

ಒಟ್ಟು ಮತಗಳು- 10,86,431
ಗೆಲುವಿಗಾಗಿ ಬೇಕಿರುವ ಮತಮËಲ್ಯ
5,43,216
ಎನ್‍ಡಿಗೆ ಅಭ್ಯರ್ಥಿಗೆ ಸಿಗಬಹುದಾದ ಮತ
6.67 ಲಕ್ಷಕ್ಕೂ ಹೆಚ್ಚು
776 ಸಂಸದರ ಮತ ಮËಲ್ಯ
5,43,200
ಒಟ್ಟು 4033ಶಾಸಕರ ಮತಮËಲ್ಯ
5,43,231
ಪಕ್ಷಗಳ ಬಲಾಬಲ
ಎನ್‍ಡಿಎ ಒಕ್ಕೂಟದ ಮತಗಳು 5,33,751
ಬಿಜೆಪಿ, ಜೆಡಿಯು, ಶಿವಸೇನೆ, ವೈಎಸ್‍ಆರ್, ಜೆಎಂಎಂ, ಟಿಡಿಪಿ, ಬಿಜೆಡಿ, ಬಿಎಸ್‍ಪಿ, ಜೆಡಿಎಸ್ ಶಿರೋಮಣಿ ಅಕಾಲಿದಳ,
ಯಶವಂತ ಸಿನ್ಹಾ ಬೆಂಬಲ
ಕಾಂಗ್ರೆಸ್, ಟಿಎಂಸಿ, ಟಿಆರೆಸ್, ಎನ್‍ಸಿಪಿ, ಎಸ್‍ಪಿ, ಎನ್‍ಸಿಪಿ
ವಿರೋಧ ಪಕ್ಷಗಳ ಮತ ಮËಲ್ಯ 3,60,362
ಇತರೆ 79,565

Articles You Might Like

Share This Article