ಹೊಸದಿಲ್ಲಿ,ಫೆ.19-ಡ್ರೋನ್ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಸಾಮಥ್ರ್ಯವು ಜಗತ್ತಿಗೆ ಹೊಸ ನಾಯಕತ್ವವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು, ಅವರು ಕೀಟನಾಶಕಗಳು ಮತ್ತು ಇತರ ಕೃಷಿ ಸಾಮಗ್ರಿಗಳನ್ನು ಸಿಂಪಡಿಸಲು ದೇಶದ ವಿವಿಧ ಭಾಗಗಳಲ್ಲಿ 100 ಕಿಸಾನ್ ಡ್ರೋನ್‍ಗಳನ್ನು ಫ್ಲ್ಯಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಿದರು.
ಮೋದಿ ಅವರು ಡ್ರೋನ್‍ಗಳನ್ನು ಬಿಡುಗಡೆ ಮಾಡಿ, ಇದು ರೈತರಿಗೆ ಅತ್ಯಂತ ನವೀನ ಮತ್ತು ಉತ್ತೇಜಕ ಉಪಕ್ರಮ ಎಂದು ವಿವರಿಸಿದರು.
ಭಾರತದಲ್ಲಿ ಡ್ರೋನ್ ಸ್ಟಾರ್ಟ್‍ಅಪ್‍ಗಳ ಹೊಸ ಸಂಸ್ಕøತಿ ಸಿದ್ಧವಾಗುತ್ತಿದೆ ಅವರ ಸಂಖ್ಯೆಯು ಈಗ 200 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದೆ, ಇದು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಉತ್ಪಾದನೆಗೆ ಕಾರಣವಾಗುತ್ತದೆ.
ತಮ್ಮ ಸರ್ಕಾರವು ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳುತ್ತದೆ ಮತ್ತು ಅದರ ಏರಿಕೆಗೆ ಅನುಕೂಲವಾಗುವಂತೆ ಈಗಾಗಲೇ ಹಲವಾರು ಸುಧಾರಣೆಗಳು ಮತ್ತು ನೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
ನೀತಿಗಳು ಸರಿಯಾಗಿದ್ದರೆ ದೇಶವು ಎಷ್ಟು ಎತ್ತರಕ್ಕೆ ಹಾರಬಲ್ಲದು ಎಂಬುದಕ್ಕೆ ಇದು ಉದಾಹರಣೆಯಾಗಿದೆ, ಕೆಲವು ವರ್ಷಗಳ ಹಿಂದೆ ಡ್ರೋನ್‍ಗಳು ಹೆಚ್ಚಾಗಿ ರಕ್ಷಣಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದವು. 21ನೇ ಶತಮಾನದಲ್ಲಿ ಆಧುನಿಕ ಕೃಷಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಹೊಸ ಅಧ್ಯಾಯವಾಗಿದ್ದು, ಡ್ರೋನ್ ವಲಯದ ಅಭಿವೃದ್ಧಿಯಲ್ಲಿ ಇದೊಂದು ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುವುದಲ್ಲದೆ ಅನಂತ ಸಾಧ್ಯತೆಗಳನ್ನು ತೆರೆಯಲಿದೆ ಎಂದರು.
ಡ್ರೋನ್ ವಲಯವನ್ನು ತೆರೆಯುವ ಬಗ್ಗೆ ತಮ್ಮ ಸರ್ಕಾರವು ಆತಂಕಗಳಿಗೆ ಸಮಯವನ್ನು ವ್ಯರ್ಥ ಮಾಡಲಿಲ್ಲ ಆದರೆ ಭಾರತದ ಯುವ ಪ್ರತಿಭೆಗಳನ್ನು ನಂಬಿ ಹೊಸ ಮನಸ್ಥಿತಿಯೊಂದಿಗೆ ಮುನ್ನಡೆಯಿತು ಎಂದು ಪ್ರಧಾನಿ ಹೇಳಿದರು. ತಮ್ಮ ಸರ್ಕಾರವು ಬಜೆಟ್ ಮತ್ತು ನೀತಿ ಕ್ರಮಗಳಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.
ಡ್ರೋನ್‍ಗಳು ವೈವಿಧ್ಯಮಯ ಬಳಕೆಗಳನ್ನು ಹೊಂದಿವೆ ಎಂದು ತಿಳಿಸಿದ ಮೋದಿ, ಹಳ್ಳಿಗಳಲ್ಲಿ ಭೂ ಮಾಲೀಕತ್ವದ ದಾಖಲೆಯನ್ನು ರಚಿಸುವ ಮತ್ತು ಔಷಗಳು ಮತ್ತು ಲಸಿಕೆಗಳನ್ನು ಸಾಗಿಸುವ ಗುರಿಯನ್ನು ಹೊಂದಿರುವ ಸ್ವಾಮಿತ್ವ ಯೋಜನೆ¿ಯಲ್ಲಿ ಅವುಗಳನ್ನು ಬಳಸಲಾಗಿದೆ ಎಂದು ಹೇಳಿದರು.
ಕಿಸಾನ್ ಡ್ರೋನ್‍ಗಳು ಹೊಸ ಕ್ರಾಂತಿಗೆ ನಾಂದಿ ಎಂದರು. ರೈತರು ತಮ್ಮ ಉತ್ಪನ್ನಗಳಾದ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳನ್ನು ಕಡಿಮೆ ಸಮಯದಲ್ಲಿ ಮಾರುಕಟ್ಟೆಗಳಿಗೆ ಸಾಗಿಸಲು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಮಥ್ರ್ಯದ ಡ್ರೋನ್‍ಗಳನ್ನು ಬಳಸಬಹುದು ಮತ್ತು ಅವರ ಆದಾಯವನ್ನು ಹೆಚ್ಚಿಸಬಹುದು.
