ನವದೆಹಲಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್ಗೆ ವಿಡಿಯೋ ಕಾನರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಗಂಗಾ ನದಿಯಲ್ಲಿ ಕ್ರೂಸ್ ಸೇವೆಯ ಪ್ರಾರಂಭವು ಒಂದು ಹೆಗ್ಗುರುತಿನ ಕ್ಷಣವಾಗಿದೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದರು.
ಪ್ರಪಂಚದ ವಿವಿಧ ಭಾಗಗಳಲ್ಲಿರುವ ನಮ್ಮ ಎಲ್ಲಾ ಪ್ರವಾಸಿ ಸ್ನೇಹಿತರನ್ನು ಭಾರತ ಸ್ವಾಗತಿಸುತ್ತದೆ. ಭಾರತವು ನೀವು ಊಹಿಸಬಹುದಾದ ಎಲ್ಲವನ್ನೂ ಹೊಂದಿದೆ. ಇದು ನಿಮ್ಮ ಕಲ್ಪನೆಗೆ ಮೀರಿದ ಬಹಳಷ್ಟು ಹೊಂದಿದೆ.
ಭಾರತವನ್ನು ಪದಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅದನ್ನು ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಭಾರತವು ಜಾತಿ, ಮತ, ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ತನ್ನ ಹೃದಯವನ್ನು ತೆರೆದಿದೆ ಎಂದು ಪ್ರಧಾನಿಗಳು ಕರೆ ನೀಡಿದರು.
ಶರದ್ ಯಾದವ್ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ರಾಹುಲ್
ವಿಶ್ವದ ಅತಿ ಉದ್ದದ ನದಿ ವಿಹಾರ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢದವರೆಗೆ ಸಾಗಲಿದೆ. ಈ ಪ್ರಯಾಣದ ಮೂಲಕ ಪ್ರವಾಸೋದ್ಯಮದ ಹಾದಿ ಮಾತ್ರವಲ್ಲದೆ ವ್ಯಾಪಾರದ ಹಾದಿಯೂ ತೆರೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅಭಿಪ್ರಾಯಪಟ್ಟರು.
ಈ ಕ್ರೂಸ್ ಬಿಹಾರದ ಆರು ಸ್ಥಳಗಳಲ್ಲಿ ಸಂಚರಿಸಲಿದೆ. ಇದು ಬಕ್ಸರ್, ಚಾಪ್ರಾ, ಪಾಟ್ನಾ, ಮುಂಗೇರ್ , ಸುಲ್ತಾನ್ಗಂಜ್ ಮತ್ತು ಕಹಲ್ಗಾಂವ್ಗೆ ಭೇಟಿ ನೀಡಲಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದರು.
PM Modi, flags, MV GangaVilas, world, longest, river, cruise, Varanasi,