ನವದೆಹಲಿ,ಜು.10- ಈದ್ ಹಬ್ಬವು ಮಾನವಕುಲದ ಒಳಿತಿಗಾಗಿ ಸಾಮೂಹಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸಲು ಕೆಲಸ ಮಾಡಲು ನಮಗೆ ಸೂರ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭಾಷಯ ತಿಳಿಸಿದ್ದಾರೆ.ಈದ್ ಉಲ್-ಅಧಾ ಹಬ್ಬದ ಹಿನ್ನೆಲೆಯಲಿ ಇಂದು ಟ್ವೀಟ್ ಮಾಡಿರುವ ಅವರು, ಈದ್ ಮುಬಾರಕ್! ಈದ್-ಉಲ್-ಅಧಾದ ಶುಭಾಶಯಗಳು ಎಂದಿದ್ದಾರೆ.
Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
— Narendra Modi (@narendramodi) July 10, 2022
ಕಾಂಗ್ರೆಸ್ ನಾಯಕ ರಾಹುಲ್ ಗಾಂ ಕೂಡ ಟ್ವೀಟ್ ಮೂಲಕ ಮುಸ್ಲಿಂ ಬಾಂಧವರಿಗೆ ಶುಭಾಷಯ ತಿಳಿಸಿದ್ದು, ಈದ್ ಮುಬಾರಕ್! ಈದ್-ಅಲ್-ಅಧಾದ ಶುಭ ಸಂದರ್ಭವು ಒಗ್ಗಟ್ಟಿನ ಉತ್ಸಾಹವನ್ನು ತರಲಿ ಮತ್ತು ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ ಮತ್ತು ಬರೆದಿದ್ದಾರೆ, ಈದ್-ಉಲ್-ಅಧಾ ಸಂದರ್ಭದಲ್ಲಿ ಶುಭಾಶಯಗಳು. ಈ ದಿನವು ಸಮಾಜದಲ್ಲಿ ಸಹಾನುಭೂತಿಯ ಮನೋಭಾವವನ್ನು ಉತ್ತೇಜಿಸಲಿ ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈದ್-ಉಲ್-ಅಧಾ ಸಂದರ್ಭದಲ್ಲಿ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ಎಂದು ಹಾರೈಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಅಟ್ಟಾರಿ-ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‍ಗಳೊಂದಿಗೆ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಈದ್ ಹಬ್ಬವನ್ನು ಆಚರಿಸಲಾಗಿದೆ.