ನವದೆಹಲಿ, ಸೆ. 3- ಏಷ್ಯಾನ್ ಹಾಕಿ ಫೈವ್ಸ್ನ ಫೈನಲ್ ಪಂದ್ಯದಲ್ಲಿ ಸಂಪ್ರದಾಯಿಕ ವೈರಿ ಪಾಕಿಸಾನವನ್ನು ಮಣಿಸಿದ ಮಣಿಂದರ್ ಸಿಂಗ್ ನೇತೃತ್ವದ ಭಾರತ ತಂಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಒಮನ್ನ ಸಲಾಲಾಹ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಬಲ ಪೈಪೊೀಟಿ ನೀಡಿದ ಪರಿಣಾಮ ಪಂದ್ಯ ಮುಕ್ತಾಯದ ವೇಳೆಗೆ 4-4 ರಿಂದ ಸಮಬಲ ಸಾಸಿದ್ದವು. ಆದ್ದರಿಂದ ಪಂದ್ಯದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಈ ಹಂತದಲ್ಲಿ ಪಾಕ್ ವಿರುದ್ಧ ಪ್ಕಾಬಲ್ಯ ಸಾಸಿದ ಭಾರತ ತಂಡವು 2-0 ಯಿಂದ ಗೆಲುವು ಸಾಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಲ್ಲದೆ 2024ರಲ್ಲಿ ಒಮನ್ನಲ್ಲಿ ನಡೆಯಲಿರುವ ಐಎಎಫ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರಧಾನಿ ಶ್ಲಾಘನೆ:
ಮಣಿಂದರ್ ಸಿಂಗ್ ಸಾರಥ್ಯದ ಹಾಕಿ ತಂಡದ ಸಾಧನೆಯನ್ನು ತಮ್ಮ ಅಕೃತ ಗಿಮೂಲಕ ಶ್ಲಾಘಿಸಿದ್ದು, `ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಭಾರತದ ಪುರುಷ ಹಾಕಿ ತಂಡವು ಅತ್ಯಮೋಘ ಗೆಲುವು ಸಾಸಿದ್ದು ಆಟಗಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ’ ಎಂದು ಮೋದಿ ತಿಳಿಸಿದ್ದಾರೆ.
ಒಂದು ದೇಶ ಒಂದು ಚುನಾವಣೆ ಕೇಂದ್ರ ಸಮಿತಿಗೆ ಕಾಂಗ್ರೆಸ್ ನಿರಾಕರಣೆ
`ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯವು ನಮ್ಮ ಆಟಗಾರರಿಗೆ ನಿಜಕ್ಕೂ ಅಗ್ನಿಪರೀಕ್ಷೆ ಆಗಿತ್ತು, ಆದರೆ ಅದ್ಭುತ ಪ್ರದರ್ಶನ ತೋರಿ ಗೆಲುವು ಸಾಸುವ ಮೂಲಕ 2024ರಲ್ಲಿ ನಡೆಯಲಿರುವ ಹಾಕಿ ಫೈವ್ಸ್ ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಪಂದ್ಯದಲ್ಲಿ ಭಾರತ ತಂಡದ ಪರ ಮೊಹಮ್ಮದ್ ರಿಹೇಲ್ (19, 26ನಿಮಿಷ), ಗುಜ್ರಾಜ್ ಸಿಂಗ್ (7ನಿಮಿಷ) ಮತ್ತು ನಾಯಕ ಮಹಿಂದರ್ ಸಿಂಗ್(10 ನಿಮಿಷ) ಗಳಲ್ಲಿ ಗೋಲು ಬಾರಿಸಿದ್ದರೆ, ಪೆನಾಲ್ಟಿ ಶೂಟೌಟ್ನಲ್ಲಿ ಗುರ್ಜಿತ್ ಸಿಂಗ್ ಹಾಗೂ ಮಣಿಂದರ್ ಸಿಂಗ್ ತಲಾ ಗೋಲು ಗಳಿಸಿದ್ದರು. ಈ ಗೋಲುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಲ್ಲಿ ಭಾರತದ ವಿಕೆಟ್ ಕೀಪರ್ ಯಶಸ್ಸು ಕಂಡಿದ್ದರು.
#PMModi, #hails, #Indianhockeyteam, #winning, #Hockey5s, #AsiaCup,