ಭುಜï, ಅ 28 (ಪಿಟಿಐ)-ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಗುಜರಾತ್‍ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದರು. ಭುಜ್ ಪಟ್ಟಣದ ಹಿಲ್ ಗಾರ್ಡನ್ ವೃತ್ತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ನಡುವಿನ ಮೂರು ಕಿಲೋಮೀಟರ್ ಉದ್ದದ ರ್ಯಾಲಿ ಸಂದರ್ಭದಲ್ಲಿ ಮೋದಿ ಅವರನ್ನು ಸ್ವಾಗತಿಸಲು ಭುಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಜನರು ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಉತ್ಸಾಹಿ ಜನರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜವನ್ನು ಬೀಸುತ್ತಾ ಪ್ರಧಾನಮಂತ್ರಿಯವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಮೋದಿ ಅವರು ತಮ್ಮ ಕಾರಿನಲ್ಲಿ ನಿಂತು ಅವರತ್ತ ಕೈ ಬೀಸುವ ಮೂಲಕ ಪ್ರತ್ಯುತ್ತರ ನೀಡಿದರು.
ಒಂದು ಹಂತದಲ್ಲಿ ಮೋದಿಯವರು ಕೂಡ ಕಾರಿನಿಂದ ಇಳಿದು ಜನರೊಂದಿಗೆ ಹೆಜ್ಜೆ ಹಾಕಿದರು. ರ್ಯಾಲಿ ನಡೆದ ರಸ್ತೆಯುದ್ದಕ್ಕೂ ಸ್ಥಳೀಯ ಆಡಳಿತವು ಸಾಂಸ್ಕøತಿಕ ಮತ್ತು ಜಾನಪದ ಪ್ರದರ್ಶನಗಳಿಗಾಗಿ ವೇದಿಕೆಗಳನ್ನು ನಿರ್ಮಿಸಿತ್ತು.
ಭೂಕಂಪ ಸಂತ್ರಸ್ತರಿಗೆ ಮೀಸಲಾದ ಸ್ಮಾರಕ, 2001 ರ ಭೂಕಂಪದಲ್ಲಿ ಮಡಿದ ಮಕ್ಕಳಿಗೆ ಸಮರ್ಪಿಸಲಾದ ಮತ್ತೊಂದು ಸ್ಮಾರಕ ಮತ್ತು ಸರ್ಹಾದ್ ಡೈರಿಯ ಹಾಲು ಸಂಸ್ಕರಣಾ ಘಟಕ ಸೇರಿದಂತೆ ಹಲವಾರು ಯೋಜನೆಗಳನ್ನು ಮೋದಿ ಇಂದು ಉದ್ಘಾಟಿಸಿದರು. ನಂತರ ಅವರ ಕಛ್ ವಿಶ್ವವಿದ್ಯಾಲಯದ ಮೈದಾನಕ್ಕೆ ತೆರಳಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.