ಬೆಂಗಳೂರು,ಮಾ.12- ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಯಕರು ಎಂದು ಹೇಳುತ್ತೇವೆ. ಎಲ್ಲಾ ಮಿತ್ರ ದೇಶಗಳ ನಾಗರೀಕರು ನಮ್ಮ ಪ್ರಧಾನಿಯನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ತನ್ನ ಸಮಸ್ಯೆ ನಿವಾರಣೆಗೆ ಮೋದಿ ಬೇಕಿತ್ತು ಎಂದು ಹೇಳುತ್ತಿದೆ.
ಚೀನಾ, ಅಮೆರಿಕಾ , ಜಿ-20 ಶೃಂಗದ ಪ್ರಬಲ ರಾಷ್ಟ್ರಗಳು ಮೋದಿ ಬುದ್ಧಿವಂತ ಪ್ರಭಾವಿ ನಾಯಕ ಎಂದು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಕೊಂಡಾಡಿದ್ದಾರೆ.
ಮಂಡ್ಯದಲ್ಲಿ ದಶಪಥ ರಸ್ತೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಶಪಥ ರಸ್ತೆ ಯೋಜನೆ ನೆನೆಗುದಿಗೆ ಬಿದ್ದಿತ್ತು. 2014ರಲ್ಲಿ ಪ್ರಧಾನಿ ಮಂತ್ರಿ ಚಾಲನೆ ನೀಡಿದರು. 2016ರಲ್ಲಿ ವಿಸ್ತೃತ ಯೋಜನಾ ವರದಿ ತಯಾರಾಗಿತ್ತು.
ಅರ್ಚಕರ ಮೇಲಿನ ದೌರ್ಜನ್ಯವನ್ನು ದಲಿತ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೊಳಪಡಿಸಲು ಆಗ್ರಹ
ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಹಸ್ತಾಂತರಗೊಂಡು ನಾಲ್ಕು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. 2019ರಲ್ಲಿ ಕೆಲಸ ಪ್ರಾರಂಭಿಸಲಾಗಿತ್ತು, 2023ರಲ್ಲಿ ಮುಗಿದಿದೆ. ವಿಸ್ತೃತ ಯೋಜನಾ ವರದಿ ತಯಾರಿಕೆ, ಭೂಸ್ವಾೀಧಿನ, ಎರಡು ಹಂತದಲ್ಲಿ ಕಾಮಗಾರಿ ವಿಂಗಡಿಸಿ ಅನುಮೋದನೆ ನೀಡಿದ್ದು ನರೇಂದ್ರ ಮೋದಿ ಎಂದು ಹೇಳಿದರು.
ನಮ್ಮ ಊರ ಕಡೆ ಒಂದು ಮಾತಿದೆ: ಪಕ್ಕ ಮನೆಯವನು ಬೇಳೆ ಕೊಡುತ್ತಾನೆ, ಇವನ ಮನೆಯಲ್ಲಿ ಗಂಡು ಹುಟ್ಟಿದರೆ ಬೇಳೆ ಕೊಟ್ಟವನು ತಾನೇ ಹುಟ್ಟಿಸಿದಂತೆ ಆಡುತ್ತಾನೆ ಎಂಬ ಗಾದೆ ಮಾತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಲ ಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುತ್ತಿದೆ. ವಿರೋಧ ಪಕ್ಷಗಳು ದಶಪಥ ಯೋಜನೆಯ ಕೀರ್ತಿ ಪಡೆದುಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಹಲವಾರು ಮಂದಿ ನೀವೇನು ಮಾಡಿದ್ದೀರಿ ಎಂದು ಕೇಳುತ್ತಾರೆ. ನಮ್ಮ ಸರ್ಕಾರ 17 ಸಾವಿರ ಮಂದಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣವಾಗುತ್ತಿವೆ. ಆಯುಷ್ಮಾನ್ ಭಾರತ ಯೋಜನೆಯಡಿ 1.20 ಕೋಟಿ ಜನರಿಗೆ ಕಾರ್ಡ್ ನೀಡಲಾಗಿದೆ.
ಆರು ವರ್ಷದಲ್ಲಿ ಆರು ಸಾವಿರ ಕಿಲೋ ಮಿಟರ್ ಹೆದ್ಧಾರಿಯನ್ನು ಮೇಲ್ದರ್ಜೆಗೆರಿಸಲಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಡಿ ಸಾವಿರಾ ಕೋಟಿ ರೂಪಾಯಿ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ. ಇದು ಡಬ್ಬಲ್ ಇಂಜಿನ್ ಸರ್ಕಾರ ಸಾಧನೆಯಾಗಿದೆ ಎಂದರು.
ಮೋದಿ ರೋಡ್ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು
ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಯನ್ನು ಪುನರಾರಂಭಿಸಲಾಗಿದೆ. ಇಲ್ಲಿ ಈ ವರ್ಷ ಎಥೆನಾಲ ತಯಾರಿಕಾ ಘಟಕವನ್ನು ಆರಂಭಿಸಲಾಗುವುದು. ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮಂಡ್ಯ ಎಂದರೆ ಇಂಡಿಯಾ ಎಂಬ ಕಲ್ಪನೆಯೊಂದಿಗೆ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ 30 ವರ್ಷಗಳಿಂದ ಎಲ್ಲಾ ಪಕ್ಷಗಳನ್ನು ನೋಡಲಾಗಿದೆ. ನಮಗೂ ಒಂದು ಅವಕಾಶ ನೀಡಿ. ಮಂಡ್ಯವನ್ನು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
PM Modi, holds, roadshow Mandya, CM Bommai, Bengaluru, Mysuru,