ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿ ಈಗಲೂ ನಂ.1

Social Share

ನವದೆಹಲಿ, ಜ. 21- ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂಬ ಮಾಹಿತಿಯು ಅಮೆರಿಕಾ ಮೂಲದ ಮಾರ್ನಿಂಗ್ ಕಾನ್ಸಟ್ ಮಾಧ್ಯಮ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
13 ಮಂದಿ ಸದಸ್ಕರ ತಂಡ ನಡೆಸಿದ ಸಮೀಕ್ಷೆ ತಂಡದಲ್ಲಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಶೇ. 71 ರಷ್ಟು ಮತಗಳು ಲಭಿಸಿ ನಂಬರ್ 1 ಸ್ಥಾನ ಪಡೆದಿದ್ದರೆ, ಮೆಕ್ಸಿಕೋದ ಅಧ್ಯಕ್ಷ ಆ್ಯಂಡ್ರೂಸ್ ಮ್ಯಾನ್ಯೂಯೆಲ್ ಲೊಪೆಜ್ ಒಬ್ರಾಡೋರ್( ಶೇ. 66), ಇಟಲಿಯ ಪ್ರಧಾನಿ ಮೊರಿಯೊ ಡರ್ಗಿ (ಶೇ.48)ಅವರು ಕ್ರಮವಾಗಿ 2 ಹಾಗೂ 3ನೆ ಸ್ಥಾನದಲ್ಲಿದ್ದಾರೆ.
ಅಮೆರಿಕಾದ ಅಧ್ಯಕ್ಷ ಜೋ ಬಿಡನ್ ಶೇ. 43, ಕೆನಡಾದ ಪ್ರಧಾನಿ ಜಸ್ಟಿನ್ ಟುರ್ಡುಯಿಯೋ ಶೇ. 43 ಮತಗಳನ್ನು ಪಡೆಯುವ ಮೂಲಕ 5 ಮತ್ತು 6ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಶೇ. 41 ಮತಗಳನ್ನು ಪಡೆದು 7ನೆ ಸ್ಥಾನದಲ್ಲಿದ್ದಾರೆ.
ಸಮೀಕ್ಷೆಯಲ್ಲಿ ಜನರಿಗೆ ಗೊತ್ತಿಲ್ಲದ್ದವರ ಪಟ್ಟಿಯಲ್ಲೂ ನರೇಂದ್ರ ಮೋದಿಯವರು ದಾಖಲೆ ಬರೆದಿದ್ದು ಶೇ. 21 ಮಂದಿ ಮಾತ್ರ ಅವರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

Articles You Might Like

Share This Article