ಭಾರತ-ಜಪಾನ್ ಸಂಬಂಧ ಹೊಸ ಜವಾಬ್ದಾರಿ ಹೊಂದಿದೆ : ಪ್ರಧಾನಿ ಮೋದಿ

Spread the love

ಟೊಕಿಯೊ, ಮೇ 23- ಭಾರತ- ಜಪಾನ್ ಸಂಬಂಧವು ಹೊಸ ಜವಾಬ್ದಾರಿಗಳು ಮತ್ತು ಗುರಿಗಳನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊವಿಡ್ ಸಾಂಕ್ರಾಮಿಕ ಪಿಡುಗಿನ ನಡುವೆ ಎರಡು ದೇಶಗಳಿಗೆ ಹೊಸಗುರಿ ಇದೆ , ಜಾಗತಿಕ ಉದ್ವಿಗ್ನತೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಗೆ ಅಡ್ಡಿಪಡಿಸುವ ಸವಾಲುಗಳನ್ನು ಎದುರಿಸುವುದು ಮತ್ತು ಸ್ಥಿರ ಮತ್ತು ಬಲವಾದ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳಅಗತ್ಯತೆ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದು ಎರಡು ದಿನಗಳ ಭೇಟಿಗಾಗಿ ಜಪಾನ್‍ಗೆ ಆಗಮಿಸಿದ ಅವರು ಅಲ್ಲಿನ ಪ್ರಮುಖ ಪತ್ರಿಕೆಯಲ್ಲಿ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಜಪಾನ್ ಮತ್ತು ಭಾರತದ ನಡುವಿನ ಸಂಬಂಧವು ವಿಶೇಷ, ಕಾರ್ಯತಂತ್ರ ಮತ್ತು ಜಾಗತಿಕ ಎಂದು ಅವರು ತಿಳಿಸಿದ್ದಾರೆ.

ಭಾರತ, ಅಮೆರಿಕ , ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಕ್ವಾಡ್ ಭದ್ರತಾ ಸಂವಾದವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸುರಕ್ಷಿತ ಸಮುದ್ರಸಂಪರ್ಕ ಹೊಂದಿದ್ದುವ್ಯಾಪಾರ ಮತ್ತು ಹೂಡಿಕೆಯಿಂದ ಸಂಯೋಜಿಸಲ್ಪಟ್ಟಿದೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವದಿಂದ ವ್ಯಾಖ್ಯಾನಿಸಲಾಗಿದೆ, ಕ್ವಾಡ್ ರಚನೆಯು ಚೀನಾವನ್ನು ಎದುರಿಸುವ ಪ್ರಯತ್ನವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅದರೆ ಹಲವಾರು ದೇಶಗಳೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆಕ್ರಮಣಶೀಲತೆಯಿಮದ ಕೂಡಿದೆ.

ತೈವಾನ, ಫಿಲಿಪೈನ್ಸ, ಬ್ರೂನಿ, ಮಲೇಷ್ಯಾ ಮತ್ತು ವಿಯೆಟ್ನಾಂ ಭಾಗದಲ್ಲಿ ಸಮುದ್ರದ ಬಗ್ಗೆ ಚೀನಾ ಸರ್ಕಾರವು ಹಕ್ಕು ಸಾಸುತ್ತದೆ. ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳು ಮತ್ತು ಮಿಲಿಟರಿ ಕೇಂದ್ರ ನಿರ್ಮಿಸಿದೆ. ಇದು ಪೂರ್ವ ಚೀನಾ ಸಮುದ್ರದ ಬಗ್ಗೆ ಜಪಾನ್ನೊಂದಿಗೆ ಕಡಲ ವಿವಾದದಲ್ಲಿ ತೊಡಗಿದೆ.

ನಾನು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗಿನಿಂದ ಜಪಾನಿನ ಜನರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವ ಅವಕಾಶವನ್ನು ಹೊಂದಿದ್ದೇನೆ. ಜಪಾನ್ ಅಭಿವೃದ್ಧಿಯ ದಾಪುಗಾಲು ಯಾವಾಗಲೂ ಪ್ರಶಂಸನೀಯವಾಗಿದೆ. ಜಪಾನ್ ಮೂಲ ಸೌಕರ್ಯ, ತಂತ್ರಜ್ಞಾನ, ನಾವೀನ್ಯತೆ, ಸ್ಟಾರ್ಟ-ಅಪ್‍ಗಳು ಮತ್ತು ಹೆಚ್ಚಿನ ಪ್ರಮುಖ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿದೆ, ಬೋಸೇನನಿಂದ ಸ್ವಾಮಿ ವಿವೇಕಾನಂದರವರೆಗೆ, ಭಾರತ-ಜಪಾನ್ ಸಾಂಸ್ಕøತಿಕ ಸಂಬಂಧಗಳು ಪರಸ್ಪರ ಗೌರವ ಮತ್ತು ಪರಸ್ಪರ ಕಲಿಕೆಯ ಸುದೀರ್ಘ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿವೆ ಎಂದು ಮೋದಿ ಬಣ್ಣಸಿದ್ದಾರೆ.

ಮಹಾತ್ಮಾ ಗಾಂಧಿಯವರ ಅಚ್ಚುಮೆಚ್ಚಿನ ವೈಯಕ್ತಿಕ ಆಸ್ತಿಗಳಲ್ಲಿ ಮಿಜಾರು, ಕಿಕಜಾರು ಮತ್ತು ಇವಾಜಾರು, ಮೂರು ಬುದ್ಧಿವಂತ ಕೋತಿಗಳ ಸಣ್ಣ ಪ್ರತಿಮೆಗಳು ಸೇರಿವೆ ಎಂದು ಅವರು ಹೇಳಿದರು.

Facebook Comments