ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಕಾಂಗ್ರೆಸ್

Social Share

ಬೆಂಗಳೂರು,ಫೆ.27- ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಧನ್ಯವಾದ ಹೇಳುವ ಮೂಲಕ ನಾನಾ ರೀತಿಯ ಲೇವಡಿ ಮಾಡಿದೆ.

ಉಡುವ ಬಟ್ಟೆಯಿಂದ ತಿನ್ನುವ ಅನ್ನದವರೆಗೂ ಜಿಎಸ್‍ಟಿ ಹಾಕಿ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದ ನರೇಂದ್ರ ಮೋದಿಯವರಿಗೆ ಅನಂತಾನಂತ ಧನ್ಯವಾದಗಳು. ಹಾಲು, ಮೊಸರು, ಅಕ್ಕಿ, ಬೆಳೆ, ದಿನಸಿ ವಸ್ತುಗಳ ಮೇಲೂ ಜಿಎಸ್‍ಟಿ ಹಾಕಿರುವುದಕ್ಕೆ, ಇಂತಹ ಕಠೋರ, ಅಮಾನವೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿಯಿಂದ ಮಾತ್ರ ಸಾಧ್ಯ. ದರೋಡೆಗೆ ಜಿಎಸ್‍ಟಿ ಎಂದು ಹೆಸರಿಟ್ಟು ಕಾನೂನುಬದ್ಧಗೊಳಿಸಿದ್ದಕ್ಕೆ ಥ್ಯಾಂಕ್ಯೂ ಮೋದಿ ಎಂದು ಟ್ವೀಟ್ ಮಾಡಲಾಗಿದೆ.

ಸಾವರ್ಕರ್, ಟಿಪ್ಪು ಸಿದ್ದಾಂತದ ಮೇಲೆ ಚುನಾವಣೆ ನಡೆಯುವುದಿಲ್ಲ : ಬಿಎಸ್‌ವೈ

ಎಲ್ಲದಕ್ಕೂ ನೀವೇ ಕಾರಣ ಎಂದಾದರೇ ಬೆಲೆಯೇರಿಕೆಗೂ ನೀವೇ ತಾನೇ ಕಾರಣ ಮೋದಿ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿಯವರಿಗೆ, ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸಿದರೆ, ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ. ಗ್ಯಾಸ್ ಬೆಲೆಯನ್ನು 1000 ರೂಪಾಯಿ ದಾಟಿಸಿ, ಪೆಟ್ರೋಲ್ ಬೆಲೆಯನ್ನು 100 ರೂಪಾಯಿ ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಗೆ ಧನ್ಯವಾದಗಳು.

ಪಿಎಸ್‍ಐನಿಂದ ಹಿಡಿದು ಪೌರ ಕಾರ್ಮಿಕರ ನೇಮಕಾತಿಯವರೆಗೂ ಪ್ರತಿ ಹುದ್ದೆಗಳನ್ನೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಅಮೋಘವಾದುದು. ಅರ್ಹತೆಯ ಆಧಾರದಲ್ಲಿ ಸಿಗುತ್ತಿದ್ದ ಉದ್ಯೋಗಗಳನ್ನು ಸುಲಭವಾಗಿ ಹಣ ಕೊಟ್ಟು ಕೊಳ್ಳುವಂತ ವ್ಯವಸ್ಥೆ ನಿರ್ಮಾಣವಾಗಿದ್ದರಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ, ನೇಮಕಾತಿಯಲ್ಲಿ ಅಕ್ರಮ ನಡೆಸಿ ಕರ್ನಾಟಕದ ಯುವಕರ ಭವಿಷ್ಯ ಕಸಿದಿದ್ದಕ್ಕೆ ಥ್ಯಾಂಕ್ಯೂ ಮೋದಿ ಎಂದು ವ್ಯಂಗ್ಯವಾಡಲಾಗಿದ್ದು, ಎಲ್ಲದಕ್ಕೂ ನೀವೇ ಕಾರಣ ಎಂದಾದರೆ ನೇಮಕಾತಿ ಅಕ್ರಮಕ್ಕೂ ನೀವೇ ತಾನೇ ಕಾರಣ ಎಂದು ಪ್ರಶ್ನಿಸಲಾಗಿದೆ.

ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ 40 ಪರ್ಸೆಂಟ್‍ಸರ್ಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. ಮೋದಿ ಹೈ ತೊ ಮುಮ್ಕಿನ್ ಹೈ ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ. ಅದಕ್ಕಾಗಿ ಧನ್ಯವಾದಗಳು, ಶೇ.40 ಕಮಿಷನ್‍ಗೂ ನೀವೇ ತಾನೇ ಕಾರಣ ಎಂದು ಕಟುಕಲಾಗಿದೆ.

ಬಿಎಸ್‍ವೈಗೆ ಮೋದಿ ಬಹುಪರಾಕ್

ಶೇ.40 ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ . ಹಿಂದೆ ಪ್ರಧಾನಿ ಭೇಟಿ ನೀಡುವ ಮುನ್ನಾ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ ?ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಬಳಿ ಉತ್ತರವಿಲ್ಲ. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ ಥ್ಯಾಂಕ್ಯೂ ಮೋದಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

pm modi, karnataka, visit, Congress,

Articles You Might Like

Share This Article