ನವದೆಹಲಿ, ಜ.19- ರಾಷ್ಟ್ರೀಯ ವಿಪತ್ತು (ವಿಕೋಪ) ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್ )ಯನ್ನು ಅದರ ಸಂಸ್ಥಾಪನಾ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಎನ್‌ಡಿಆರ್‌ಎಫ್ ಅನೇಕ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಜತೆಗೆ ಸವಾಲಿನ ಸನ್ನಿವೇಶಗಳಲ್ಲಿ ಸಹ ಮುಂಚೂಣಿಯಲ್ಲಿದೆ ಎಂದು ಮೋದಿ ಹೇಳಿದ್ದಾರೆ.
Greetings to the hardworking @NDRFHQ team on their Raising Day. They are at the forefront of many rescue and relief measures, often in very challenging circumstances. NDRF’s courage and professionalism are extremely motivating. Best wishes to them for their future endeavours. pic.twitter.com/t7LlIpGy3l
— Narendra Modi (@narendramodi) January 19, 2022
ಎನ್‌ಡಿಆರ್‌ಎಫ್ ನ ಸ್ಥೈರ್ಯ ಮತ್ತು ವೃತ್ತಿಪರತೆ ಅತ್ಯಂತ ಸೂರ್ತಿದಾಯಕವಾಗಿದೆ ಎಂದಿರುವ ಅವರು, ವಿಪತ್ತು ನಿರ್ವಹಣೆಯು ಸರ್ಕಾರಗಳು ಮತ್ತು ನೀತಿ ನಿರ್ಮಾಪಕರಿಗೆ ಪ್ರಮುಖ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ವಿಪತ್ತು ಚೇತರಿಕೆ ಮೂಲ ಸೌಕರ್ಯಕ್ಕಾಗಿನ ಮೈತ್ರಿಕೂಟದ ರೂಪದಲ್ಲಿ ಒಂದು ಪ್ರಯತ್ನ ಕೈಗೊಂಡಿದೆ. ನಾವು ನಮ್ಮ ಎನ್‍ಡಿಆರ್‍ಎಫ್ ತಂಡಗಳ ಕೌಶಲ್ಯಗಳನ್ನು ಇನ್ನಷ್ಟು ಹರಿತಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಇದದರಿಂದ ನಾವು ಯಾವುದೇ ಸವಾಲಿನ ಸನ್ನಿವೇಶಗಳಲ್ಲಿ ಗರಿಷ್ಠ ಜೀವಗಳು ಮತ್ತು ಆಸ್ತಿಪಾಸ್ತಿಯನ್ನು ರಕ್ಷಿಸಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.