ನವದೆಹಲಿ, ಜ. 20- ಸೈಬರ್ ಅಪರಾಧ ತಡೆ ಮಾದಕ ವಸ್ತು ಕಳ್ಳಸಾಗಾಣಿಕೆ ತಡೆ ಸೇರಿದಂತೆ ಗಡಿಯಾಚೆಗಿನ ಬೆದರಿಕೆಗಳನ್ನು ಹತ್ತಿಕ್ಕುವ ಕುರಿತು ಎಲ್ಲಾ ರಾಜ್ಯಗಳು ಪೊಲೀಸ್ ಪಡೆಗಳು ಮತ್ತು ಅರೆಸೇನಾ ಪಡೆ ಮುಖ್ಯಸ್ಥರ ಸಭೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಇಲ್ಲಿ ಆರಂಭಗೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವು ಪ್ರಮುಖರು ಮೂರು ದಿನಗಳ ಸಭೆಯಲ್ಲಿ ಬಾಗಿಯಾಗಿತ್ತಿದ್ದು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಗಡಿ ನಿರ್ವಹಣೆ ಮತ್ತು ಕಡಲ ಭದ್ರತೆ ,ಖಲಿಸ್ತಾನಿ ಉಗ್ರರಿಂದ ಬೆದರಿಕೆಗಳು, ಆರ್ಥಿಕತೆಗೆ ಅಪಾಯ, ಕ್ರಿಪ್ರೋಕರೆನ್ಸಿಗಳು, ಮಾವೋವಾದಿ ಹಿಂಸಾಚಾರ ಮತ್ತು ಈಶಾನ್ಯ ದಂಗೆಗಳು ಕುರಿತು ಚರ್ಚಿಸುವ ಚರ್ಚೆ ನಡೆಯುವ ನಿರೀಕ್ಷೆಯಿದೆ.
BIG NEWS : ಶೂಟಿಂಗ್ ವೇಳೆ ತಮಿಳು ನಟ ವಿಜಯ್ ಅಂತೋನಿಗೆ ತೀವ್ರ ಗಾಯ
ಬಹುತೇಕ ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್ಪೆಕ್ಟರ್ ಜನರಲ್ ಶ್ರೇಣಿಯ ಸುಮಾರು 350 ಉನ್ನತ ಪೊಲೀಸ್ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ
ಈ ಬಾರಿಯ ಸಮ್ಮೇಳನವು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿದೆ ಜನರ ಸೇವೆಯಲ್ಲಿ ಪೋಲೀಸರ ಪಾತ್ರ ಪ್ರಮುಳವಾಗಿದ್ದು ಇದನ್ನು ಸುಧಾರಿಸುವತ್ತ ಗಮನಹರಿಸುವುದರೊಂದಿಗೆ ಮತ್ತಷ್ಟು ಸಶಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ
ಕಳೆದ 2014 ರ ಮೊದಲು ಹೆಚ್ಚಾಗಿ ರಾಷ್ಟ್ರೀಯ ಭದ್ರತಾ ವಿಷಯಗಳ ಮೇಲೆ ಮಾತ್ರ, ಚರ್ಚೆಗಳು ಕೇಂದ್ರೀಕರಿಸಿದವು.ಆದರೆ ನಂತರ ರಾಷ್ಟ್ರೀಯ ಭದ್ರತೆ ಮತ್ತು ಅಪರಾಧದ ತಡೆಗಟ್ಟುವಿಕೆ ಮತ್ತು ಪತ್ತೆಹಚ್ಚುವಿಕೆ, ಸಮುದಾಯ ಪೊಲೀಸï, ಕಾನೂನು ಮತ್ತು ಸುವ್ಯವಸ್ಥೆ, ಪೊಲೀಸ್ ವರ್ಚಸ್ಸು ಸುಧಾರಿಸುವುದು ಸೇರಿದಂತೆ ಹಲವು ಗಂಭೀರ ವಿಷಯ ಚರ್ಚಿಸಲಾಗುತ್ತದೆ.
PM Modi, meeting, Police, Chiefs, Delhi,