ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆಗಳೇನು..?

Social Share

ನವದೆಹಲಿ,ಜ.22- ದೇಶದ ಸಮಗ್ರ ಅಭಿವೃದ್ದಿಗೆ ಜಿಲ್ಲಾಧಿಕಾರಿಗಳು ಹೊಸದಾಗಿ ಐಎಎಸ್ ಸೇವೆಗೆ ಸೇರಿದಾಗಿನ ಉತ್ಸಾಹ ಮತ್ತು ಹುಮ್ಮಸ್ಸನ್ನೇ ಪ್ರದರ್ಶನ ಮಾಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಇಂದು ಎಲ್ಲಾ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದ ಪ್ರಧಾನಮಂತ್ರಿಯವರು, ಈವರೆಗೂ ನಾವು ಸಾಸಿರುವುದು ಬಹಳಷ್ಟಿದೆ. ಆದರೆ, ಮುಂದೆ ಮತ್ತಷ್ಟನ್ನು ಸಾಸಬೇಕಿದೆ. ಅದಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ದೇಶದಲ್ಲಿ 4 ವರ್ಷಗಳಲ್ಲಿ ಜನಧನ್ ಖಾತೆಗಳ ಪ್ರಮಾಣವನ್ನು 4ರಿಂದ 5 ಪಟ್ಟು ಹೆಚ್ಚಿಸಲಾಗಿದೆ. ಪ್ರತಿಯೊಂದು ಕುಟುಂಬವೂ ಶೌಚಾಲಯ, ವಿದ್ಯುತ್ ಸಂಪರ್ಕ ಪಡೆದಿದೆ. ವಿದ್ಯುತ್ ಎಂಬುದು ಮನೆಗಳಿಗೆ ಅಗತ್ಯವಾದ ಮೂಲಸೌಕರ್ಯವಷ್ಟೇ ಅಲ್ಲ, ಅದು ಜನ ಜೀವನದ ಪರಿವರ್ತನೆಯ ಶಕ್ತಿ. ಅದರಲ್ಲೂ ಬಡಕುಟುಂಬಗಳಿಗೆ ಇದರ ಅಗತ್ಯ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿಯ ಆಕಾಂಕ್ಷಿ ಗಳು ಆಡಳಿತ ಮತ್ತು ತಳಮಟ್ಟಕ್ಕೆ ನೇರ ಸಂಪರ್ಕ ಹೊಂದಿರಬೇಕು. ಸಾರ್ವಜನಿಕ ಆಡಳಿತದಲ್ಲಿರುವವರು ಭಾವನಾತ್ಮಕ ನಂಟಿನೊಂದಿಗೆ ಕೆಲಸ ಮಾಡುವ ಅಗತ್ಯವಿದೆ. ಆಡಳಿತ ಮೇಲಿಂದ ಕೆಳಗೆ, ಕೆಳಗಿಂದ ಮೇಲಕ್ಕೆ ಹರಿಯುತ್ತಿರಬೇಕು.
ಆಧುನಿಕತೆ ಮತ್ತು ತಂತ್ರಜ್ಞಾನವನ್ನು ಜನರಿಗೆ ಸೌಲಭ್ಯ ಒದಗಿಸುವಲ್ಲಿ ಬಳಸಿಕೊಳ್ಳಬೇಕು. ಆಡಳಿತಾತ್ಮಕ ವಿಷಯಗಳಲ್ಲಿದ್ದ ಅಡೆತಡೆಗಳನ್ನು ನಾವು ತೆಗೆದುಹಾಕಿದ್ದೇವೆ. ಏಕಮುಖಿಯಾದ ಅಭಿವೃದ್ಧಿಯ ವೇಗಕ್ಕೆ ಅವಕಾಶ ಸಿಕ್ಕಿದೆ ಎಂದರು.
ಕನಸುಗಳನ್ನು ಸಾಕಾರಗೊಳಿಸುವುದು ನಿಮ್ಮ ಯಶಸ್ಸಿನ ಮಾರ್ಗ. ಇತಿಹಾಸ ಸೃಷ್ಟಿಸುವ ಹಾದಿ ಅಭಿವೃದ್ಧಿಶೀಲ ಜಿಲ್ಲೆಗಳ ನಿರ್ಮಾಣ ನಿಮ್ಮ ಮೂಲ ಉದ್ದೇಶವಾಗಬೇಕೆಂದು ಮೋದಿ ಹೇಳಿದರು.
ಜಿಲ್ಲಾಧಿಕಾರಿಗಳು ಹಲವಾರು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಸೇವೆಯ ಮೊದಲ ದಿನದ ಅಭಿಲಾಷೆಗಳೇ ಮುಂದುವರೆಯಬೇಕು. ಹಾಗಾಗಿ ಹೊಸದಾಗಿ ಕೆಲಸ ಆರಂಭಿಸುತ್ತಿದ್ದೇವೆ ಎಂಬ ಸಂಕಲ್ಪದೊಂದಿಗೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ ಎಂದು ಪ್ರಧಾನಿ ಕರೆ ನೀಡಿದರು.
ವಿವಿಧ ಇಲಾಖೆಗಳು 142 ಜಿಲ್ಲೆಗಳ ಪಟ್ಟಿ ಸಿದ್ಧಪಡಿಸಿವೆ. ಇವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಅವುಗಳ ಸಮಗ್ರ ಸುಧಾರಣೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.ದೇಶ ಆಜಾದಿಕ ಅಮೃತ್ ಮಹೋತ್ಸವದ ಆಚರಣೆಯಲ್ಲಿದೆ. ಸ್ವಾತಂತ್ರ್ಯದ ನಂತರ ನಾವು ಶೇ.100ರಷ್ಟು ಸೇವೆ ಮತ್ತು ಸೌಲಭ್ಯಗಳ ಹಾದಿಯಲ್ಲಿದ್ದೇವೆ. ಇನ್ನೂ ಬಹಳಷ್ಟು ಸಾಸಬೇಕಾಗಿದೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಸಂಪನ್ಮೂಲಗಳ ಅತ್ಯುತಮ ಬಳಕೆ ಮಾಡಿಕೊಂಡಿದ್ದಾದರೆ 1+1 ಎರಡು ಆಗುವುದಿಲ್ಲ. ಅದು 11 ಎಂದಾಗುತ್ತದೆ ಎಂಬ ಹೊಸ ಲೆಕ್ಕಾಚಾರವನ್ನು ಪ್ರಧಾನಿ ಹೇಳುವ ಮೂಲಕ ಜಿಲ್ಲಾಧಿಕಾರಿಗಳಿಗೆ ಉತ್ಸಾಹ ತುಂಬಿದರು.

Articles You Might Like

Share This Article