ಬಡವರು, ಮಧ್ಯಮ ವರ್ಗ ಕೇಂದ್ರಿಕರಿಸಿದ ಜನರ ಪರ ಬಜೆಟ್ : ಮೋದಿ ಬಣ್ಣನೆ

Social Share

ನವದೆಹಲಿ,ಫೆ.2- ನಿನ್ನೆ ಸಂಸತ್‍ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‍ನಲ್ಲಿ ಬಡವರು, ಮಧ್ಯಮವರ್ಗ, ಯುವಕರು ಮತ್ತು ಮಹಿಳೆಯ ರನ್ನು ಕೇಂದ್ರೀಕರಿಸಿ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದೊಂದು ಜನಪರವಾದ ಬಜೆಟ್ ಎಂದು ಪ್ರಧಾನಿ ನರೇಂದ್ರಮೋದಿ ಬಣ್ಣಿಸಿದ್ದಾರೆ.
ಬಜೆಟ್ ಮಂಡನೆಯಾದ ಹಿನ್ನೆಲೆಯಲ್ಲಿ ದೆಹಲಿಯ ಅಂಬೇ ಡ್ಕರ್ ಭವನದಿಂದ ವರ್ಚುಯಲ್ ಮೂಲಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಂತರ ದೇಶದಲ್ಲಿ ಉಂಟಾದ ಆರ್ಥಿಕ ಅಡೆತಡೆಗಳನ್ನು ಹಿಂದಿಕ್ಕಿ ಭಾರತ ಇಂದು ಪ್ರಬಲ ಆರ್ಥಿಕ ರಾಷ್ಟ್ರವಾಗಿ ಹೊಮ್ಮಿದೆ ಎಂದು ಮೆಚ್ಚುಗೆ ಸೂಚಿಸಿದರು.
ಎಲ್ಲ ವರ್ಗದವರನ್ನು ಕೇಂದ್ರೀಕರಿಸಿ ಬಜೆಟ್ ಮಂಡನೆ ಮಾಡಲಾಗಿದೆ. ಬರುವ ದಿನಗಳಲ್ಲಿ ಇದು ದೊಡ್ಡ ಬದಲಾವಣೆ ತರಲಿದ್ದು, ಇಡೀ ವಿಶ್ವವೇ ಭಾರತದತ್ತ ನೋಡಲಿದೆ ಎಂದು ಹೇಳಿದರು. ವಿಶ್ವವೇ ಸೋಂಕಿನಿಂದ ಕಂಗಾಲಾಗಿದೆ. ದೇಶ ಈಗಲೂ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಇದರ ಮಧ್ಯೆಯೂ ಆರ್ಥಿಕ ಪುನಶ್ಚೇತನ ಆಶಾದಾಯಕವಾಗಿದೆ. ನಾವು ಆಧುನಿಕ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಬಜೆಟ್‍ನ ಸಂಪೂರ್ಣ ವಿವರಣೆ ಮಾಡುವುದು ಕಷ್ಟಸಾಧ್ಯ. ಬಜೆಟ್‍ನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ. ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಮೂಲ ಸೌಲಭ್ಯಗಳನ್ನು ಹೇರಳವಾಗಿ ನೀಡಲಾಗಿದೆ ಎಂದು ಬಜೆಟ್ ಅನ್ನು ಅವರು ಪ್ರಶಂಸಿಸಿದರು.
ಭಾರತದ ಅರ್ಥವ್ಯವಸ್ಥೆ 2 ಕೋಟಿ 30 ಲಕ್ಷ ಕೋಟಿ ಗಾತ್ರದ್ದಾಗಿದ್ದು, ನಮ್ಮ ವಿಶಾಲ ದೇಶದ ಶಕ್ತಿ ಸಮಪನ್ಮೂಲಗಳ ಸದ್ಬಳಕೆಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕಿದೆ. ಕೇಂದ್ರ ಬಜೆಟ್ ಈ ಗುರಿ ತಲುಪಲು ಇರುವ ಪ್ರಮುಖ ಸಾಧನ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಾವು ಸ್ವಾವಲಂಬನೆ ಸಾಸಬೇಕಿದೆ. ಇದಕ್ಕೆ ಈ ಬಜೆಟ್ ಪೂರಕವಾಗಿ ಕೆಲಸ ಮಾಡಲಿದೆ. ಮುಂದಿನ 25 ವರ್ಷಗಳ ಆರ್ಥಿಕ ಪಥವನ್ನು ನಿರ್ದೇಶಿಸಲಿರುವ ಈ ಬಜೆಟ್, ಸ್ವಾವಲಂಬಿ ಹಾಗೂ ಸದೃಢ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದೆ ಎಂದರು.
ನಾವು ಇನ್ನು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ದೃಢ ಸಂಕಲ್ಪದೊಂದಿಗೆ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕಿದೆ. ಭಾರತವನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಲು ಸಮಸ್ತ ಭಾರತೀಯರು ಕೈಜೋಡಿಸಿ ದುಡಿಬೇಕಿದೆ. ಗುರಿ ತಲುಪಲು ನಮಗೆ ಇರುವ ದಾರಿ ಇದೊಂದೇ ಎಂದು ಕರೆ ನೀಡಿದರು.
7 ವರ್ಷಗಳ ಹಿಂದೆ ಭಾರತದ ಜಿಡಿಪಿ 1 ಲಕ್ಷದ 10 ಸಾವಿರ ಕೋಟಿಯಿದ್ದಿತ್ತು. ಇಂದು ಅದು 2 ಲಕ್ಷದ 30 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ 630 ಬಿಲಿಯನ್ ಡಾಲರ್ ನಿಂದ 200 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇವೆಲ್ಲವೂ ಸಾಧ್ಯವಾಗಿದ್ದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಸಾಮೂಹಿಕ ಯೋಜನೆಗಳಿಂದ ಎಂದು ಹೇಳಿದರು.
ಆಧುನಿಕ, ಸ್ವಾವಲಂಬಿ ಭಾರತ ನಿರ್ಮಾಣ ಅಗತ್ಯ: ಸ್ವಾವಲಂಬಿ ಮತ್ತು ಆಧುನಿಕ ಭಾರತ ನಿರ್ಮಾಣ ಬಹಳ ಮುಖ್ಯವಾಗಿದೆ. ಭಾರತವನ್ನು ಆಧುನಿಕತೆಯ ದಿಕ್ಕಿನಲ್ಲಿ ಮುನ್ನಡೆಸಲು ಈ ಬಜೆಟ್ ಹಲವಾರು ಪ್ರಮುಖ ನಿಬಂಧನೆಗಳನ್ನು ಹೊಂದಿದೆ. ಕಳೆದ 7 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಭಾರತದ ಆರ್ಥಿಕತೆ ನಿರಂತರವಾಗಿ ವಿಸ್ತರಿಸುತ್ತಿದೆ ಎಂದರು.
80 ಲಕ್ಷ ಮನೆಗಳಿಗೆ 48 ಸಾವಿರ ಕೋಟಿದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗಾಗಿ 80 ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ಅದಕ್ಕಾಗಿ ಬಜೆಟ್‍ನಲ್ಲಿ 48 ಸಾವಿರ ಕೋಟಿ ರೂ. ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮಹಿಳೆಯರನ್ನು ಮನೆಯ ಮಾಲೀಕರನ್ನಾಗಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 7 ವರ್ಷಗಳಲ್ಲಿ 3 ಕೋಟಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದ 9 ಕೋಟಿ ಮನೆಗಳಿಗೆ ನಲ್ಲಿಯ ಮೂಲಕ ನೀರು ಒದಗಿಸಲಾಗಿದೆ. ಬಡವರ ಶಿಕ್ಷಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನದಿ ಜೋಡಣೆಯ ಬಗ್ಗೆಯೂ ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
# ಆರ್ಥಿಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ:
ಕೊರೊನಾ ಸಂಕಷ್ಟದ ಮಧ್ಯೆಯೂ ದೇಶ ಆರ್ಥಿಕ ಚೇತರಿಕೆಯಲ್ಲಿ ದಾಖಲೆಯ ಪ್ರಗತಿ ಕಾಣುತ್ತಿದೆ. ಆರ್ಥಿಕ ಸೂಚ್ಯಂಕ ಏರಿಕೆಯಾಗುತ್ತಿರುವ ವಿಶ್ವದ ವಿವಿಧ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ. ಭಾರತ ಅಭಿವೃದ್ಧಿಯ ಬಗ್ಗೆ ಶ್ರೀಮಂತ ದೇಶಗಳಾದ ಸಂಯುಕ್ತ ರಾಷ್ಟ್ರಗಳೂ ಕೂಡ ಮೆಚ್ಚುಗೆ ಸೂಚಿಸಿವೆ ಎಂದು ಮೋದಿ ಹೇಳಿದರು.
ಗಡಿ ಗ್ರಾಮಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ: ಪ್ರವಾಸೋದ್ಯಮ ಅಭಿವೃದ್ಧಿಯಾದರೆ, ದೇಶದ ಆರ್ಥಿಕತೆಯೂ ಹೆಚ್ಚುತ್ತದೆ. ಇದರಿಂದಾಗಿ ದೇಶದ ಗಡಿ ಗ್ರಾಮಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಇದಲ್ಲದೇ, ಕೇತ್- ಬೇತವಾ ಯೋಜನೆ ರೈತರ ಜೀವನವನ್ನೇ ಬದಲಿಸಲಿದೆ.
ಸಣ್ಣ ರೈತರು ಅಭಿವೃದ್ಧಿಯಾದರೆ, ಇದರ ಜೊತೆಗೆ ಪ್ರತಿ ಗ್ರಾಮಗಳೂ ಪ್ರಗತಿ ಸಾಸಲಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.2 ಲಕ್ಷ 30 ಸಾವಿರ ಕೋಟಿ ಜಿಡಿಪಿ ದರ ದಾಖಲಿಸಿದೆ. ಇದು 7 ವರ್ಷಗಳಲ್ಲಿ 630 ಬಿಲಿಯನ್‍ನಷ್ಟು ಹೆಚ್ಚಾಗಿದೆ. ಇದು ಸರ್ಕಾರದ ಪರಿಣಾಮಕಾರಿ ನೀತಿಗಳಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Articles You Might Like

Share This Article